ಅರೇ.., ಫೋನ್ ಸ್ವಿಚ್ ಆಫ್ ಮಾಡಪ್ಪ, ರೋಹಿತ್ ಶರ್ಮಾ ವಿಡಿಯೋ ವೈರಲ್!

By Suvarna News  |  First Published Nov 18, 2023, 10:15 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಆಡಿದ ಮಾತು, ಪ್ರತಿಕ್ರಿಯೆ ವೈರಲ್ ಆಗುತ್ತಿದೆ. ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ವೇಳೆ ಪತ್ರಕರ್ತರ ಫೋನ್ ರಿಂಗ್ ಆಗಿದೆ. ತಕ್ಷಣವೇ ಅರೆ....ಫೋನ್ ಸ್ವಿಚ್ ಆಫ್ ಮಾಡಪ್ಪ ಎಂದಿರುವ ಪ್ರತಿಕ್ರಿಯೆ ವೈರಲ್ ಆಗಿದೆ.
 


ಅಹಮ್ಮದಾಬಾದ್(ನ.18) ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಭಾರತ-ಆಸ್ಟ್ರೇಲಿಯಾ ಪ್ರಶಸ್ತಿಗಾಗಿ ಅಹಮ್ಮದಾಬ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೋರಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಹಾಗೂ ಪ್ಯಾಟ್ ಕಮಿನ್ಸ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ನೀಡಿದ ಉತ್ತರ, ಪ್ರತಿಕ್ರಿಯೆಗಳು ವೈರಲ್ ಆಗಿದೆ. ರೋಹಿತ್ ಶರ್ಮಾ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ವೇಳೆ , ಪತ್ರಕರ್ತರ ಫೋನ್ ರಿಂಗ್ ಆಗಿದೆ. ತಕ್ಷಣವೇ ರೋಹಿತ್ ಶರ್ಮಾ, ಅರೇ,,ಫೋನ್ ಬಂದ್ ಮಾಡಿ ಸ್ವಲ್ಪ ಎಂದಿದ್ದಾರೆ. ರೋಹಿತ್ ಶರ್ಮಾ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ.

ಸುದ್ದಿಗೋಷ್ಠಿ ವೇಳೆ ರೋಹಿತ್ ಶರ್ಮಾ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಇದೇ ವೇಳೆ ಫೋನ್ ರಿಂಗ್ ಆಗಿದೆ. ಮಾತು ನಿಲ್ಲಿಸಿದ ರೋಹಿತ್ ಶರ್ಮಾ, ಅರೆ, ಫೋನ್ ಸ್ವಿಚ್ ಆಫ್ ಮಾಡಿ ಎಂದಿದ್ದಾರೆ. ತಕ್ಷಣವೇ ಪತ್ರಕರ್ತರು ಫೋನ್ ಸೈಲೆಂಟ್ ಮಾಡಿದ ಘಟನೆ ನಡೆದಿದೆ. 

Latest Videos

undefined

ರಾಹುಲ್ ದ್ರಾವಿಡ್‌ಗಾಗಿ ಈ ವಿಶ್ವಕಪ್ ಗೆಲ್ಲಬೇಕು, ನಾಯಕ ರೋಹಿತ್ ಮಾತಿಗೆ ಫ್ಯಾನ್ಸ್ ಪ್ರತಿಕ್ರಿಯೆ!

ಬಳಿಕ ಉತ್ತರ ಮುಂದುವರಿಸಿದ ರೋಹಿತ್ ಶರ್ಮಾ, ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರಿಶ್ರಮ, ಫಲಿತಾಂಶದ ಕುರಿತು ಮಾತನಾಡಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಕುರಿತು ಮಾತನಾಡಿದ್ದಾರೆ. ಪಿಚ್‌ನಲ್ಲಿ ಕೊಂಚ ಹುಲ್ಲಿದೆ. ಆದರೆ ಭಾರತ-ಪಾಕಿಸ್ತಾನಕ್ಕೆ ಬಳದಿ ಪಿಚ್ ಡ್ರೈ ಆಗಿತ್ತು. ನನ್ನ ಅನಿಸಿಕೆ ಪ್ರಕಾರ ಪಿಚ್ ಸ್ಲೋ ಆಗಿರಲಿದೆ. ನಾಳೆ ಪಿಚ್ ಗಮನಿಸುತ್ತೇವೆ. ಟೆಂಪರೇಚರ್ ಕುಸಿತವಾಗಿದೆ. ಹೀಗಾಗಿ ಇಬ್ಬನಿ ಎಷ್ಟರ ಮಟ್ಟಿಗೆ ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಅನ್ನೋ ನೋಡಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

 

Rohit Sharma - "Kya yaar phone band rakho yaar" 😂😂 pic.twitter.com/kvJfXtTNy0

— 𝐑𝐮𝐠𝐠𝐚™ (@LoyalYashFan)

 

ಟೀಂ ಇಂಡಿಯಾದಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ಇದೆ. ಕಳೆದ 10 ಪಂದ್ಯದಲ್ಲಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಪ್ರತಿಯೊಬ್ಬ ಸದಸ್ಯ ಕಠಿಣ ಪ್ರಯತ್ನ, ಪರಿಶ್ರಮ ಹಾಕಿದ್ದಾರೆ. ಇದರ ಕಾರಣದಿಂದೇ ಈ ಫಲಿತಾಂಶ ನೋಡುತ್ತಿದ್ದೀರಿ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.  ಅತ್ತ ಪ್ಯಾಟ್ ಕಮಿನ್ಸ್, ಟೀಂ ಇಂಡಿಯಾ ಮಣಿಸಿ ಅತೀ ದೊಡ್ಡ ಮೈದಾನದಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಹಾಕುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ 3 ವಿಶ್ವಕಪ್‌ನಲ್ಲಿ ಎಡಭಾಗದಲ್ಲಿ ನಿಂತವರಿಗೆ ಒಲಿದಿದೆ ಟ್ರೋಫಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್!

ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ರೋಹಿತ್‌ ಶರ್ಮಾ ಬಳಗ ಶುಕ್ರವಾರ ಬೆಳಗ್ಗೆ ಮೈದಾನಕ್ಕಿಳಿಯಿತು. ರೋಹಿತ್‌ ಅವರು ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಇತರ ಸಹಾಯಕ ಸಿಬ್ಬಂದಿ ಜೊತೆ ಪಿಚ್‌, ಔಟ್‌ಫೀಲ್ಡ್‌ ಪರಿಶೀಲಿಸಿದರು.  ಇನ್ನು, ಗುರುವಾರ ಕೋಲ್ಕತಾದಲ್ಲಿ ದ.ಆಫ್ರಿಕಾ ವಿರುದ್ಧ ಸೆಮಿಫೈನಲ್‌ ಪಂದ್ಯವಾಡಿದ ಆಸ್ಟ್ರೇಲಿಯಾ ಆಟಗಾರರು ಶುಕ್ರವಾರ ಮಧ್ಯಾಹ್ನ ಅಹಮದಾಬಾದ್‌ ತಲುಪಿದ್ದರು. ಶನಿವಾರ ಬೆಳಗ್ಗೆ ನೆಟ್ಸ್‌ ಅಭ್ಯಾಸ ಮಾಡಿದ್ದಾರೆ.
 

click me!