
ಅಹಮ್ಮದಾಬಾದ್(ನ.18) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ದೇಶದ ಹಲವು ದೇವಸ್ಥಾನಗಳಲ್ಲಿ ಅಭಿಮಾನಿಗಳು ಭಾರತದ ಗೆಲುವಿಗಾಗಿ ಪೂಜೆ, ಪಾರ್ಥನೆ ನಡೆಸಿದ್ದಾರೆ. ಇತ್ತ ಹಲವು ಜ್ಯೋತಿಷಿಗಳು ಗೆಲುವಿನ ಭವಿಷ್ಯ ನುಡಿದಿದ್ದಾರೆ. ಮಾಜಿ ಕ್ರಿಕೆಟಿಗರು ಪ್ರಿಡಿಕ್ಷನ್ ಹೇಳಿದ್ದಾರೆ. ಇದರ ನಡುವೆ ಸಾಮಾಜಿಕ ಮಾಧ್ಯಮಳಲ್ಲೂ ಭಾರಿ ಲೆಕ್ಕಾಚಾರ ನಡೆಯುತ್ತಿದೆ. ಫೈನಲ್ ಪಂದ್ಯಕ್ಕೂ ಮೊದಲು ಉಭಯ ನಾಯಕರು ಟ್ರೋಫಿ ಜೊತೆ ಪೋಸ್ ನೀಡುತ್ತಾರೆ. ಕಳೆದ 3 ವಿಶ್ವಕಪ್ ಟೂರ್ನಿಯಲ್ಲಿ ಎಡಭಾಗದಲ್ಲಿ ನಿಂತು ಫೋಟೋಗೆ ಫೋಸ್ ನೀಡಿದವರೇ ಚಾಂಪಿಯನ್ ಆಗಿದ್ದಾರೆ. ಈ ಬಾರಿ ನಾಯಕ ರೋಹಿತ್ ಶರ್ಮಾ ಎಡಭಾಗದಲ್ಲಿ ನಿಂತಿದ್ದಾರೆ. ಹೀಗಾಗಿ ಭಾರತ ಚಾಂಪಿಯನ್ ಆಗಲಿದೆ ಅನ್ನೋ ಲೆಕ್ಕಾಚಾರವೊಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಫೋಟೋ ಹಾಗೂ ವಿಶೇಷ ಲೆಕ್ಕಾಚಾರದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಾಯಕರ ಟ್ರೋಫಿ ಪೋಟೋಶೂಟ್ ಜೊತೆ ಕಳೆದ 3 ವಿಶ್ವಕಪ್ ಟೂರ್ನಿಯ ನಾಯಕರ ಫೋಟೋಶೂಟ್ ಫೋಟೋ ನೀಡಲಾಗಿದೆ. 2011ರಲ್ಲಿ ನಾಯಕ ಎಂ.ಎಸ್ ಧೋನಿ ಹಾಗೂ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕಾರ ಟ್ರೋಫಿ ಜೊತೆ ಪೋಸ್ ನೀಡಿದ್ದರು. ಈ ವೇಳೆ ಧೋನಿ ಎಡಭಾಗದಲ್ಲಿ ಪೋಸ್ ನೀಡಿದ್ದರು. ಫೈನಲ್ ಪಂದ್ಯದಲ್ಲಿ ಲಂಕಾ ಮಣಿಸಿದ ಭಾರತ ಚಾಂಪಿಯನ್ ಆಗಿತ್ತು.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂಪಾಯಿ ದಾನ, ಆಸ್ಟ್ರೋಟಾಕ್ ಸಿಇಒ ಘೋಷಣೆ!
2015ರಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಹಾಗೂ ನ್ಯೂಜಿಲೆಂಡ್ ನಾಯಕ ಬ್ರೆಂಡೆನ್ ಮೆಕಲಂ ಫೋಟೋಗೆ ಪೋಸ್ ನೀಡಿದ್ರು. ಎಡಭಾಗದಲ್ಲಿ ನಿಂತಿದ್ದ ಕ್ಲಾರ್ಕ್‌ಗೆ ವಿಶ್ವಕಪ್ ಟ್ರೋಫಿ ಒಲಿದಿತ್ತು. ಇನ್ನು 2019ರಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫೋಟೋಗೆ ಪೋಸ್ ನೀಡಿದ್ದರು. ಎಡಭಾಗದಲ್ಲಿ ನಿಂತಿದ್ದ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿತ್ತು.
ಇದೀಗ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಫೋಟೋಗೆ ಪೋಸ್ ನೀಡಿದ್ದಾರೆ. ಅಹಮ್ಮದಾಬಾದ್‌ನ ಖ್ಯಾತ ಸ್ಟೆಪ್ ವೆಲ್‌ನಲ್ಲಿ ಫೋಟೋಶೂಟ್ ನಡೆಸಲಾಗಿದೆ. ಈ ವೇಳೆ ರೋಹಿತ್ ಶರ್ಮಾ ಎಡಭಾಗದಲ್ಲಿ ನಿಂತಿದ್ದಾರೆ. ಕಮಿನ್ಸ್ ಬಲಭಾಗದಲ್ಲಿ ನಿಂತಿದ್ದಾರೆ. ಹೀಗಾಗಿ ಭಾರತವೇ ಗೆಲ್ಲಲಿದೆ ಅನ್ನೋ ಲೆಕ್ಕಾಚಾರ ಹರಿದಾಡುತ್ತಿದೆ.
ಬಹುತೇಕರು ಡ್ರಾಪೌಟ್, ಫೈನಲ್ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ಏನು ಓದಿದ್ದಾರೆ?
ಜ್ಯೋತಿಷ್ಯ, ಅಂಕಿ ಸಂಕಿ ಲಕ್ಕಾಚಾರಗಳು ಒಂದಡೆಯಾದರೆ, ಭಾರತ ತಂಡ ಅದ್ವಿತೀಯ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದೆ. ಇತ್ತ ಆಸ್ಟ್ರೇಲಿಯಾ ಹರಸಾಹಸದ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದೆ. ಸಹಜವಾಗಿ ಭಾರತವೇ ವಿಶ್ವಕಪ್ ಗೆಲುವಿನ ಫಿವರೇಟಿ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.