ಪಾಕ್‌ ಆಯ್ಕೆ ಸಮಿತಿಯಿಂದ ಸಲ್ಮಾನ್‌ ಬಟ್ 1 ದಿನದಲ್ಲೇ ಔಟ್‌!

By Kannadaprabha NewsFirst Published Dec 4, 2023, 10:58 AM IST
Highlights

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯನಾಗಿ ಆಯ್ಕೆಯಾಗಿದ್ದ ಒಂದೇ ದಿನಕ್ಕೆ ಮಾಜಿ ನಾಯಕ ಸಲ್ಮಾನ್‌ ಬಟ್‌ ಸಮಿತಿಯಿಂದ ಹೊರಬಿದ್ದಿದ್ದಾರೆ. 2010ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿ, ಜೈಲು ಸೇರಿದ್ದ ಬಟ್‌ರನ್ನು ಶುಕ್ರವಾರ ಆಯ್ಕೆ ಸಮಿತಿಗೆ ಸೇರಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದ್ದಲ್ಲದೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಲಾಹೋರ್‌(ಡಿ.12): ಕಳಂಕಿತ ಕ್ರಿಕೆಟಿಗ ಸಲ್ಮಾನ್‌ ಬಟ್‌ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಆಯ್ಕೆ ಸಮಿತಿಯಿಂದ ಹೊರಬಿದ್ದಿದ್ದಾರೆ. ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ ವ್ಯಕ್ತಿಯನ್ನು ಆಯ್ಕೆ ಸಮಿತಿಗೆ ನೇಮಿಸಿದ್ದಕ್ಕೆ ವಿವಾದ ಭುಗಿಲೆದ್ದ ಬೆನ್ನಲ್ಲೇ, ಅವರನ್ನು ಹೊರಹಾಕಲಾಗಿದೆ.

ಹೌದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯನಾಗಿ ಆಯ್ಕೆಯಾಗಿದ್ದ ಒಂದೇ ದಿನಕ್ಕೆ ಮಾಜಿ ನಾಯಕ ಸಲ್ಮಾನ್‌ ಬಟ್‌ ಸಮಿತಿಯಿಂದ ಹೊರಬಿದ್ದಿದ್ದಾರೆ. 2010ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿ, ಜೈಲು ಸೇರಿದ್ದ ಬಟ್‌ರನ್ನು ಶುಕ್ರವಾರ ಆಯ್ಕೆ ಸಮಿತಿಗೆ ಸೇರಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದ್ದಲ್ಲದೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಶನಿವಾರ ಸಲ್ಮಾನ್‌ರ ನೇಮಕವನ್ನು ಹಿಂಪಡೆದಿದ್ದಾಗಿ ಸಮಿತಿಯ ಮುಖ್ಯಸ್ಥ ವಹಾಬ್‌ ರಿಯಾಜ್‌ ಘೋಷಿಸಿದ್ದಾರೆ. ಸಲ್ಮಾನ್‌ ಬದಲು 37 ವರ್ಷದ ಅಸಾದ್‌ ಶಫೀಕ್‌ರನ್ನು ಸಮಿತಿಗೆ ನೇಮಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.

INDvAUS ಅಂತಿಮ ಹಂತದಲ್ಲಿ ರೋಚಕ ಟ್ವಿಸ್ಟ್, ಬೆಂಗಳೂರು ಪಂದ್ಯ ಗೆದ್ದು 4-1 ಅಂತರದಲ್ಲಿ ಸರಣಿ ಕೈವಶ!

4ನೇ ಟಿ20: ಸ್ಟೇಡಿಯಂ ಫ್ಲಡ್‌ಲೈಡ್‌ ಉರಿಸಲು ₹1.40 ಕೋಟಿ ಖರ್ಚು!

ರಾಯ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ರೀಡಾಂಗಣದ ಫ್ಲಡ್‌ಲೈಡ್‌ ಉರಿಸಲು ಛತ್ತೀಸ್‌ಗಢ ಕ್ರಿಕೆಟ್‌ ಸಂಸ್ಥೆ(ಸಿಎಸ್‌ಸಿಎಸ್‌) ಬರೋಬ್ಬರಿ 1.4 ಕೋಟಿ ರು. ಖರ್ಚು ಮಾಡಿದೆ ಎಂದು ತಿಳಿದುಬಂದಿದೆ. ಕಳೆದ 5 ವರ್ಷಗಳಲ್ಲಿ ಕ್ರೀಡಾಂಗಣದ 3.16 ಕೋಟಿ ರು. ವಿದ್ಯುತ್‌ ಬಿಲ್‌ ಪಾವತಿ ಮಾಡದ ಹಿನ್ನೆಲೆಯಲ್ಲಿ ಶುಕ್ರವಾರದ ಪಂದ್ಯಕ್ಕೂ ಮುನ್ನ ವಿದ್ಯುತ್‌ ಕಡಿತಗೊಳಿಸಲಾಗಿತ್ತು. ಹೀಗಾಗಿ ಫ್ಲಡ್‌ಲೈಟ್‌ ಉರಿಸಲು ಸಿಎಸ್‌ಸಿಎಸ್‌ ಜನರೇಟರ್‌ ಬಳಸಬೇಕಾಯಿತು. ಬಾಕಿ ಇಟ್ಟಿರುವ ವಿದ್ಯುತ್‌ ಬಿಲ್‌ನ ಶೇ.40ರಷ್ಟು ಮೊತ್ತ ಕೇವಲ 1 ದಿನದ ಜನರೇಟರ್‌ಗೆ ಖರ್ಚು ಮಾಡಲಾಗಿದೆ.

Vijay Hazare Trophy: ಹರ್ಯಾಣ ಎದುರು ರಾಜ್ಯಕ್ಕೆ ಹೀನಾಯ ಸೋಲು

ಕಪ್‌ಗೆ ಅಗೌರವ ತೋರಿಲ್ಲ, ಮತ್ತೆ ಕಾಲಿಡ್ತೇನೆ: ಮಿಚೆಲ್‌ ಮಾರ್ಷ್‌!

ಮೆಲ್ಬರ್ನ್‌: ವಿಶ್ವಕಪ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಟ್ರೋಫಿ ಮೇಲೆ ಕಾಲಿಟ್ಟಿದ್ದನ್ನು ಆಸ್ಟ್ರೇಲಿಯಾದ ತಾರಾ ಅಲ್ರೌಂಡರ್‌ ಮಿಚೆಲ್‌ ಮಾರ್ಷ್‌ ಸಮರ್ಥಿಸಿಕೊಂಡಿದ್ದು, ಟ್ರೋಫಿಗೆ ಅಗೌರವ ತೋರಿಲ್ಲ ಎಂದಿದ್ದಾರೆ. ಅಲ್ಲದೆ ಮತ್ತೊಮ್ಮೆ ಟ್ರೋಫಿ ಮೇಲೆ ಕಾಲಿಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ರೇಡಿಯೋ ಸಂದರ್ಶನದಲ್ಲಿ ಮಾತನಾಡಿದ ಅವರು, ‘ವಿವಾದದ ಬಗ್ಗೆ ಗೊತ್ತಾಯಿತು. ಆದರೆ ನಾನು ತಲೆಕೆಡಿಸಿಕೊಂಡಿಲ್ಲ. ಅವಕಾಶ ಸಿಕ್ಕರೆ ಮತ್ತೆ ಕಾಲಿಡುತ್ತೇನೆ’ ಎಂದಿದ್ದಾರೆ.
 

click me!