ಏಷ್ಯಾಕಪ್ 2023 ವೇಳಾಪಟ್ಟಿ ಪ್ರಕಟ, ಸೆ.2ಕ್ಕೆ ಭಾರತ-ಪಾಕಿಸ್ತಾನ ಹೋರಾಟ!

By Suvarna News  |  First Published Jul 19, 2023, 7:39 PM IST

ಭಾರತ ಹಾಗೂ ಪಾಕಿಸ್ತಾನ ನಡುವಿನ ಗುದ್ದಾಟದಿಂದ ವಿಳಂಬಗೊಂಡಿದ್ದ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಆಗಸ್ಟ್ 30 ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಸೆಪ್ಟೆಂಬರ್ 2 ರಂದು ಮುಖಾಮುಖಿಯಾಗುತ್ತಿದೆ.


ಇಸ್ಲಾಮಾಬಾದ್(ಜು.19) ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿದ್ದ ಕಾರಣ ಟೂರ್ನಿ ವೇಳಾಪಟ್ಟಿ, ಟೂರ್ನಿ ಆಯೋಜನೆ ಕುರಿತು ತೀವ್ರಗೊಂದಲ ಏರ್ಪಟ್ಟಿತ್ತು. ಕೊನೆಗೂ ಪಾಕಿಸ್ತಾನ ಪಟ್ಟು ಸಡಿಲಗೊಳಿಸಿ ವೇಳಾಪಟ್ಟಿ ಪ್ರಕಟಿಸಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ಟೂರ್ನಿ ಆಯೋಜಿಸಲಾಗಿದೆ. ವಿಶೇಷವಾಗಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಟೂರ್ನಿಗೆ ಆತಿಥ್ಯವಹಿಸಿದೆ. ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿಗೂ ಮೊದಲು ಅಭಿಮಾನಿಗಳಿಗೆ ಇಂಡೋ -ಪಾಕ್ ಪಂದ್ಯದ ಸವಿ ಅನುಭವಿಸುವ ಅವಕಾಶ ಒದಗಿ ಬಂದಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳನ್ನು ಆಯೋಜಿಸಲಾಗಿದೆ. ಭಾರತ, ಪಾಕಿಸ್ತಾನ ಹಾಗೂ ನೇಪಾಳ ಗ್ರೂಪ್ ಎ ನಲ್ಲಿದ್ದರೆ,  ಗ್ರೂಪ್ ಬಿ ಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳಿವೆ. ಸೆಪ್ಟೆಂಬರ್ 17ರಂದು ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಏಷ್ಯಾಕಪ್ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯಲಿದೆ.

Tap to resize

Latest Videos

2022ರಲ್ಲಿ ನಡೆದ ಕಳೆದ ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ, ಎದುರಾಳಿ ಪಾಕಿಸ್ತಾನವನ್ನು 23 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪಂದ್ಯ ದುಬೈನಲ್ಲಿ ನಡೆದಿತ್ತು. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಪಾಕಿಸ್ತಾನದ ಮುಲ್ತಾನ್‌ನಲ್ಲಿ ಆಯೋಜಿಸಲಾಗಿದೆ.

ಆಗಸ್ಟ್ 30: ಪಾಕಿಸ್ತಾನ ನೇಪಾಳ(ಮುಲ್ತಾನ್) 
ಆಗಸ್ಟ್ 31: ಬಾಂಗ್ಲಾದೇಶ vs ಶ್ರೀಲಂಕಾ(ಕ್ಯಾಂಡಿ)
ಸೆಪ್ಟೆಂಬರ್ 1: ವಿರಾಮ ದಿನ 
ಸೆಪ್ಟೆಂಬರ್ 1: ಪಾಕಿಸ್ತಾನ vs ಭಾರತ(ಕ್ಯಾಂಡಿ)
ಸೆಪ್ಟೆಂಬರ್ 3: ಬಾಂಗ್ಲಾದೇಶ  vs ಆಫ್ಘಾನಿಸ್ತಾನ (ಲಾಹೋರ್)
ಸೆಪ್ಟೆಂಬರ್ 4: ಭಾರತ vs ನೇಪಾಳ (ಕ್ಯಾಂಡಿ)
ಸೆಪ್ಟೆಂಬರ್ 5: ಶ್ರೀಲಂಕಾ vs ಆಫ್ಘಾನಿಸ್ತಾನ (ಲಾಹೋರ್)
ಸೆಪ್ಟೆಂಬರ್ 6: ಸೂಪರ್ 4 -  ಎ1 -ಎ2 (ಲಾಹೋರ್)
ಸೆಪ್ಟೆಂಬರ್ 7: ಪ್ರಯಾಣ ದಿನ 
ಸೆಪ್ಟೆಂಬರ್ 8: ವಿರಾಮ ದಿನ
ಸೆಪ್ಟೆಂಬರ್ 9: ಬಿ1-ಬಿ2 (ಕೊಲೊಂಬೊ)
ಸೆಪ್ಟೆಂಬರ್ 10: ಎ1-ಎ2 (ಕೊಲೊಂಬೊ)
 ಸೆಪ್ಟೆಂಬರ್ 11: ವಿರಾಮ ದಿನ
ಸೆಪ್ಟೆಂಬರ್ 12: ಎ2-ಬಿ1 (ಕೊಲೊಂಬೊ)
ಸೆಪ್ಟೆಂಬರ್ 13: ವಿರಾಮ ದಿನ
ಸೆಪ್ಟೆಂಬರ್ 14:ಎ1-ಬಿ1 (ಕೊಲೊಂಬೊ)
ಸೆಪ್ಟೆಂಬರ್ 15: ಎ2-ಬಿ2  (ಕೊಲೊಂಬೊ)
ಸೆಪ್ಟೆಂಬರ್ 16: ವಿರಾಮ ದಿನ 
ಸೆಪ್ಟೆಂಬರ್ 17: ಫೈನಲ್ (ಕೊಲೊಂಬೊ)

click me!