Good News: ಏಕದಿನ ವಿಶ್ವಕಪ್​ಗೆ ಮೊದಲು ಈ ಮೂವರ ಕಮ್​ಬ್ಯಾಕ್ ಫಿಕ್ಸ್​..!

By Suvarna News  |  First Published Jul 19, 2023, 5:36 PM IST

ಏಕದಿನ ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ
ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಕೂಡಿಕೊಳ್ಳಲು ತ್ರಿಮೂರ್ತಿಗಳು ರೆಡಿ
ಟೀಂ ಇಂಡಿಯಾ ಪಾಲಿಗೆ ಸಿಹಿಸುದ್ದಿ


ಬೆಂಗಳೂರು(ಜು.19): ಕೆಲ ವರ್ಷಗಳಿಂದ ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಬೆಂಬಿಡದೇ ಕಾಡ್ತಿದೆ. ಇಂಜುರಿಯಿಂದಾಗಿ ಕೆಲ ಪ್ರಮುಖ ಆಟಗಾರರು 2022ರ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ರು. ಇದ್ರಿಂದ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​​ನಲ್ಲೂ ಇದೇ ಸಮಸ್ಯೆ ಕಾಡಿತ್ತು. ಆದ್ರೀಗ, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಈ ಮೂವರು ಆಟಗಾರರು ತಂಡ ಸೇರೋದು ಪಕ್ಕಾ ಆಗಿದೆ. ಈ ಸುದ್ದಿ ಕೇಳಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಹೆಡ್‌ ಕೋಚ್​ ರಾಹುಲ್‌ ದ್ರಾವಿಡ್​ಗೆ ಬಿಗ್ ರಿಲೀಫ್ ಸಿಕ್ಕಿದೆ.

ಹೌದು, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ, ಈ ಮೂವರು ಇಂಜುರಿಯಿಂದ ತಂಡದಿಂದ ದೂರ ಉಳಿದಿದ್ದಾರೆ. ಆದ್ರೆ, ಈ ತ್ರಿಮೂರ್ತಿಗಳು ಇಂಜುರಿಯಿಂದ ಚೇತರಿಸಿಕೊಳ್ತಿದ್ದಾರೆ. ಏಕದಿನ ವಿಶ್ವಕಪ್ ಸಮರದ ವೇಳೆ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. 

Latest Videos

undefined

'ಐಪಿಎಲ್‌ ಕಿಂಗ್' ನನ್ನ ರೋಲ್‌ ಮಾಡೆಲ್ ಎಂದ ರಿಂಕು ಸಿಂಗ್..!

ಬ್ಯಾಟಿಂಗ್ ಪ್ರಾಕ್ಟೀಸ್ ಆರಂಭಿಸಲಿರೋ ಕೆ ಎಲ್ ರಾಹುಲ್..!

ಯೆಸ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವೇಳೆ ಇಂಜುರಿಗೊಳಗಾದ ರಾಹುಲ್, ಟೂರ್ನಿಯಿಂದಲೇ ಔಟಾದ್ರು. ನಂತರ ವಿದೇಶದಲ್ಲಿ ರಾಹುಲ್​ ಶಸ್ತ್ರ ಚಿಕಿತ್ಸೆಗೊಳಗಾದ್ರು. ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ರಿಹ್ಯಾಬ್​ ಸೆಂಟರ್​​ನಲ್ಲಿ ಫಾಸ್ಟಾಗಿ ರಿಕವರಿ ಆಗ್ತಿದ್ದಾರೆ. ಸದ್ಯದಲ್ಲೇ ನೆಟ್ಸ್​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಆರಂಭಿಸಲಿದ್ದಾರೆ. ಇನ್ನೆರೆಡು ತಿಂಗಳಲ್ಲಿ ಫುಲ್​ಫಿಟ್ ಆಗಿ, ಏಷ್ಯಾಕಪ್​ ಹೊತ್ತಿಗೆ ತಂಡ ಸೇರಲಿದ್ದಾರೆ ಎನ್ನಲಾಗಿದೆ. 

ಐರ್ಲೆಂಡ್​ ಸರಣಿಗೆ ಬುಮ್ರಾ- ಅಯ್ಯರ್ ವಾಪಸ್..!

ಇಂಜುರಿಯಿಂದಾಗಿ ಕಳೆದೊಂದು ವರ್ಷದಿಂದ ಬುಮ್ರಾ ತಂಡದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಲಾಸ್ಟ್.! ಅದಾದ ನಂತರ ಬುಮ್ರಾ ಮತ್ತೆ ಬಾಲ್​ ಮುಟ್ಟಿಲ್ಲ. ಆದ್ರೀಗ, ಬುಮ್ರಾ ಕಮ್​ಬ್ಯಾಕ್​ಗೆ ಮುಹೂರ್ತ ನಿಗದಿಯಾಗಿದೆ. ಇಂಜುರಿಯಿಂದ ಬುಮ್ರಾ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.  ಐರ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.

ಏಕದಿನ ವಿಶ್ವಕಪ್‌ ರೋಡ್‌ ಮ್ಯಾಚ್‌ ಚರ್ಚಿಸಲು ವಿಂಡೀಸ್‌ಗೆ ಹಾರಿದ ಅಜಿತ್ ಅಗರ್ಕರ್..!

ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಇಂಜುರಿಯಿಂದ ಗುಣಮುಖರಾಗಿದ್ದಾರೆ. ಐರ್ಲೆಂಡ್ ಟಿ20 ಸರಣಿ ಆಡಲಿದ್ದಾರೆ. ಇಂಜುರಿಯಿಂದಾಗಿ ಅಯ್ಯರ್, ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಮತ್ತು ವೆಸ್ಟ್ ಇಂಡೀಸ್ ಟೂರ್ ಮಿಸ್​ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಮೂವರು ಆಟಗಾರರ ರಿಕವರಿ, ವಿಶ್ವಕಪ್ ದೃಷ್ಟಿಯಿಂದ  ಟೀಮ್ ಇಂಡಿಯಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

click me!