ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿ ಗಮನ ಸೆಳೆದಿದ್ದ ನೆದರ್‌ಲೆಂಡ್ಸ್, ಈ ವಿಶ್ವಕಪ್‌ನಲ್ಲಿ 2ನೇ ಗೆಲುವು ದಾಖಲಿಸಿದೆ. ಈ ಪಂದ್ಯಕ್ಕೂ ಮೊದಲೇ ಸಾಲು ಸಾಲು ಸೋಲು ಕಂಡಿದ್ದ ಬಾಂಗ್ಲಾದೇಶವನ್ನು 87 ರನ್‌ಗಳಿಂದ ಬಗ್ಗುಬಡಿದ ನೆದರ್‌ಲೆಂಡ್ಸ್ ಇದೇ ಮೊದಲ ಬಾರಿಗೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 2 ಸಂಪಾದಿಸಿದೆ. ವಾನ್ ಮೀಕೆರೆನ್ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾ ಎದುರು ನೆದರ್‌ಲೆಂಡ್ಸ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೋಲ್ಕತಾ(ಅ.29): ಸತತ ಪರಿಶ್ರಮ ಹಾಗೂ ಅದೃಷ್ಟ ಕೂಡಾ ಜತೆಗಿದ್ದರೆ, ಯಾರು ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ವಾನ್ ಮೀಕೆರೆನ್ ಜೀವಂತ ಉದಾಹರಣೆ. ಇಡೀ ಜಗತ್ತನ್ನೇ ಕಾಡಿದ ಕೋವಿಡ್ 19 ಹೆಮ್ಮಾರಿ 2020ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡುವಂತೆ ಮಾಡಿತ್ತು. ಆ ಸಂದರ್ಭದಲ್ಲಿ ಕ್ರಿಕೆಟಿಗನಾಗಿದ್ದ ನೆದರ್‌ಲೆಂಡ್ಸ್‌ನ ಬೌಲರ್ ವಾನ್ ಮೀಕೆರೆನ್ ಜೀವನೋಪಾಯಕ್ಕಾಗಿ ಉಬರ್ ಈಟ್ಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದರು. ಇದೀಗ ಅದೇ ವಾನ್ ಮೀಕೆರೆನ್, 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೌದು, ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿ ಗಮನ ಸೆಳೆದಿದ್ದ ನೆದರ್‌ಲೆಂಡ್ಸ್, ಈ ವಿಶ್ವಕಪ್‌ನಲ್ಲಿ 2ನೇ ಗೆಲುವು ದಾಖಲಿಸಿದೆ. ಈ ಪಂದ್ಯಕ್ಕೂ ಮೊದಲೇ ಸಾಲು ಸಾಲು ಸೋಲು ಕಂಡಿದ್ದ ಬಾಂಗ್ಲಾದೇಶವನ್ನು 87 ರನ್‌ಗಳಿಂದ ಬಗ್ಗುಬಡಿದ ನೆದರ್‌ಲೆಂಡ್ಸ್ ಇದೇ ಮೊದಲ ಬಾರಿಗೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 2 ಸಂಪಾದಿಸಿದೆ. ವಾನ್ ಮೀಕೆರೆನ್ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾ ಎದುರು ನೆದರ್‌ಲೆಂಡ್ಸ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ICC World Cup 2023: ಅಜೇಯ ಟೀಂ ಇಂಡಿಯಾಗೆ ಸೆಮೀಸ್ ಮೇಲೆ ಕಣ್ಣು..!
ಇನ್ನು ಸತತ 5ನೇ ಸೋಲುಂಡಿರುವ ಬಾಂಗ್ಲಾ, ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಈ ಫಲಿತಾಂಶವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ನೂಕಿದ್ದು, ಡಚ್ ಪಡೆಯು 8ನೇ ಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ನೆದರ್‌ಲೆಂಡ್ಸ್, 63 ರನ್‌ಗೆ 4 ವಿಕೆಟ್ ಕಳೆದುಕೊಂಡ ಹೊರತಾಗಿಯೂ ಕೆಳ ಕ್ರಮಾಂಕದ ಹೋರಾಟದ ಫಲವಾಗಿ 50 ಓವರಲ್ಲಿ 229 ರನ್ ಗಳಿಸಿತು. ನಾಯಕ ಸ್ಕಾಟ್ ಎಡ್ವರ್ಡ್ಸ್ 68, ವೆಸ್ಲೆ ಬಾರ್ರೆಸ್ಸಿ 41, ಏಂಗಲ್‌ಬರ್ಟ್ 35 ರನ್ ಕೊಡುಗೆ ನೀಡಿದರು. ಬಳಿಕ ಶಿಸ್ತುಬದ್ಧ ದಾಳಿ ಸಂಘಟಿಸಿದ ಡಚ್, ಬಾಂಗ್ಲಾವನ್ನು 42.2 ಓವರಲ್ಲಿ 142 ರನ್‌ಗೆ ಆಲೌಟ್ ಮಾಡಿತು. ಬಾಂಗ್ಲಾದ ಯಾರೊಬ್ಬರೂ 35 ರನ್ ದಾಟಲಿಲ್ಲ.
ICC World Cup 2023: ಕಿವೀಸ್ ರೋಚಕ ಕದನ ಗೆದ್ದ ಆಸೀಸ್!
ಸ್ಕೋರ್:
ನೆದರ್‌ಲೆಂಡ್ಸ್ 50 ಓವರಲ್ಲಿ 229/10 (ಎಡ್ವರ್ಡ್ಸ್ 68, ಬಾರ್ರೆಸ್ಸಿ 41, ಮುಸ್ತಾಫಿಜುರ್ 2-36)
ಬಾಂಗ್ಲಾದೇಶ 42.2 ಓವರಲ್ಲಿ 142/10 (ಮೆಹಿದಿ ಹಸನ್ 35, ಮುಸ್ತಾಫಿಜುರ್ 20, ಮೀಕೆರೆನ್ 4-23)
ಪಂದ್ಯಶ್ರೇಷ್ಠ: ವಾನ್ ಮೀಕೆರೆನ್
ಡಚ್‌ಗೆ ಮುಂದಿನ ಪಂದ್ಯ: ನ.3ಕ್ಕೆ, ಆಫ್ಘನ್ ವಿರುದ್ಧ, ಲಖನೌ
ಬಾಂಗ್ಲಾಗೆ ಮುಂದಿನ ಪಂದ್ಯ: ಅ.31ಕ್ಕೆ, ಪಾಕ್ ವಿರುದ್ಧ, ಕೋಲ್ಕತಾ