ಬೆಟ್ಟದಂಥ ಗುರಿ ಮುಂದಿದ್ದರೂ, ನ್ಯೂಜಿಲೆಂಡ್ ಕೊನೆಯ ಎಸೆತದ ವರೆಗೂ ಹೋರಾಟ ಬಿಡಲಿಲ್ಲ. ರಚಿನ್ 89 ಎಸೆತದಲ್ಲಿ 116 ರನ್ ಸಿಡಿಸಿದರೆ, ನೀಶಮ್ 39 ಎಸೆತದಲ್ಲಿ 58 ರನ್ ಗಳಿಸಿದರು. ಆದರೂ, ಕಿವೀಸ್ ಸತತ 2ನೇ ಸೋಲನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಎರಡೂ ತಂಡಗಳು ಕೆಲ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಂದ್ಯ ಇನ್ನಷ್ಟು ರೋಚಕಗೊಳ್ಳಲು ಕಾರಣವಾಯಿತು.
ಧರ್ಮಶಾಲಾ(ಅ.29): ಟ್ರ್ಯಾವಿಸ್ ಹೆಡ್‌ರ ಸ್ಫೋಟಕ ಶತಕ ಹಾಗೂ ನಿರ್ಣಾಯಕ ಹಂತದಲ್ಲಿ ಆಟದ ಬಗ್ಗೆ ಅರಿವು ಆಸ್ಟ್ರೇಲಿಯಾಗೆ ನ್ಯೂಜಿಲೆಂಡ್ ವಿರುದ್ಧ 5 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿತು. ರಚಿನ್ ರವೀಂದ್ರ ಅವರ ಶತಕ, ಜೇಮ್ಸ್ ನೀಶಮ್‌ರ ಹೋರಾಟದ ಅರ್ಧಶತಕ ಕಿವೀಸ್ ಗೆಲುವಿಗೆ ಸಾಕಾಗಲಿಲ್ಲ. ಸತತ 4ನೇ ಜಯ ಸಾಧಿಸಿರುವ ಆಸೀಸ್, ಅಂಕಪಟ್ಟಿಯಲ್ಲಿ ಅಗ್ರ-4ರಲ್ಲೇ ಮುಂದುವರಿದಿದ್ದು, ಸೆಮೀಸ್ ಹತ್ತಿರವಾಗುತ್ತಿದ್ದಂತೆ ಮತ್ತಷ್ಟು ಅಪಾಯಕಾರಿಯಾಗುತ್ತಿದೆ.
ಹೆಡ್ (67 ಎಸೆತದಲ್ಲಿ 109 ರನ್) ಹಾಗೂ ವಾರ್ನರ್ (65 ಎಸೆತದಲ್ಲಿ 81 ರನ್) ಮೊದಲ ವಿಕೆಟ್‌ಗೆ 175 ರನ್ ಕಲೆಹಾಕಿ, ಅತ್ಯುತ್ತಮ ಆರಂಭ ಒದಗಿಸಿದ ಬಳಿಕ, ಮಧ್ಯಮ ಹಾಗೂ ಕೆಳ ಕ್ರಮಾಂಕದ ಸ್ಫೋಟಕ ಆಟವು ಆಸೀಸ್ 388 ರನ್ ಪೇರಿಸಲು ನೆರವಾಯಿತು.
ಇಂಗ್ಲೆಂಡ್ ವಿರುದ್ಧ ಗಾಯಗೊಂಡ ಹಾರ್ದಿಕ್ ಪಾಂಡ್ಯ ಬದಲು ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಸ್ಥಾನ!
ಬೆಟ್ಟದಂಥ ಗುರಿ ಮುಂದಿದ್ದರೂ, ನ್ಯೂಜಿಲೆಂಡ್ ಕೊನೆಯ ಎಸೆತದ ವರೆಗೂ ಹೋರಾಟ ಬಿಡಲಿಲ್ಲ. ರಚಿನ್ 89 ಎಸೆತದಲ್ಲಿ 116 ರನ್ ಸಿಡಿಸಿದರೆ, ನೀಶಮ್ 39 ಎಸೆತದಲ್ಲಿ 58 ರನ್ ಗಳಿಸಿದರು. ಆದರೂ, ಕಿವೀಸ್ ಸತತ 2ನೇ ಸೋಲನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಎರಡೂ ತಂಡಗಳು ಕೆಲ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಂದ್ಯ ಇನ್ನಷ್ಟು ರೋಚಕಗೊಳ್ಳಲು ಕಾರಣವಾಯಿತು.
ಸ್ಕೋರ್:
ಆಸ್ಟ್ರೇಲಿಯಾ 49.2 ಓವರಲ್ಲಿ 388/10 (ಹೆಡ್ 109, ವಾರ್ನರ್ 81, ಮ್ಯಾಕ್ಸ್‌ವೆಲ್ 41, ಫಿಲಿಪ್ಸ್ 3-37)
ನ್ಯೂಜಿಲೆಂಡ್ 50 ಓವರಲ್ಲಿ 383/9 (ರಚಿನ್ 116, ನೀಶಮ್ 58, ಮಿಚೆಲ್ 54, ಜಂಪಾ 3-74)
ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್
ಕರ್ಮ ರಿಟರ್ನ್ಸ್..! ಗಂಗೂಲಿ ಬದುಕಿನಲ್ಲಿ ಆಟವಾಡಿದ್ದ ಕೋಚ್ ಗ್ರೆಗ್ ಚಾಪೆಲ್ ಪಾಡು ಕೇಳೋರೆ ಗತಿಯಿಲ್ಲ..!
ಟರ್ನಿಂಗ್ ಪಾಯಿಂಟ್
ಕೊನೆಯ 2 ಎಸೆತದಲ್ಲಿ 7 ರನ್ ಬೇಕಿದ್ದಾಗ ನೀಶಮ್ 2ನೇ ರನ್ ಕದಿಯುವ ವೇಳೆ ರನೌಟ್ ಆದರು. ಕೊನೆ ಎಸೆತಕ್ಕೂ ಅವರೇ ಸ್ಟ್ರೈಕ್‌ನಲ್ಲಿ ಇದ್ದಿದ್ದರೆ ತಂಡವನ್ನು ಗೆಲ್ಲಿಸುವ ಅಥವಾ ಪಂದ್ಯವನ್ನು ಟೈಗೊಳಿಸಿ ಸೂಪರ್ ಓವರ್‌ಗೆ ಕೊಂಡೊಯ್ಯುವ ಸಾಧ್ಯತೆ ಇತ್ತು.
ಪಂದ್ಯದಲ್ಲಿ ಒಟ್ಟು 771 ರನ್!
ಈ ಪಂದ್ಯದಲ್ಲಿ ಒಟ್ಟು 771 ರನ್ ದಾಖಲಾಯಿತು. ಇದು ಈ ವಿಶ್ವಕಪ್‌ನಲ್ಲಿ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತ. ಈ ಮೊದಲು ದ.ಆಫ್ರಿಕಾ-ಶ್ರೀಲಂಕಾ ಪಂದ್ಯದಲ್ಲಿ 754 ರನ್ ದಾಖಲಾಗಿತ್ತು. ದ.ಆಫ್ರಿಕಾ 428, ಲಂಕಾ 326 ರನ್ ಗಳಿಸಿದ್ದವು.
ಆಸೀಸ್‌ಗೆ ಮುಂದಿನ ಪಂದ್ಯ: ನ.4ಕ್ಕೆ, ಇಂಗ್ಲೆಂಡ್ ವಿರುದ್ಧ, ಅಹಮದಾಬಾದ್
ನ್ಯೂಜಿಲೆಂಡ್‌ಗೆ ಮುಂದಿನ ಪಂದ್ಯ: ನ.1ಕ್ಕೆ, ದ.ಆಫ್ರಿಕಾ ವಿರುದ್ಧ, ಪುಣೆ