ಹಾರ್ದಿಕ್ ಪಾಂಡ್ಯ ನಿರ್ಗಮನದ ಬೆನ್ನಲ್ಲೇ ಹೊಸ ನಾಯಕನ ಘೋಷಿಸಿದ ಗುಜರಾತ್ ಟೈಟಾನ್ಸ್!

By Suvarna NewsFirst Published Nov 27, 2023, 1:45 PM IST
Highlights

ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ. ಹೀಗಾಗಿ ನಾಯಕನಿಲ್ಲದ ಗುಜರಾತ್ ತಂಡಕ್ಕೆ ಇದೀಗ ಹೊಸ ನಾಯನ ನೇಮಕವಾಗಿದೆ. ಯುವ ಕ್ರಿಕೆಟಿಗನಿಗೆ ನಾಯಕತ್ವ ನೀಡಲಾಗಿದೆ.
 

ಅಹಮ್ಮದಾಬಾದ್(ನ.27) ಐಪಿಎಲ್ ಟೂರ್ನಿ ಹರಾಜಿಗೂ ಮೊದಲು ನಡೆದ ಅತೀ ದೊಡ್ಡ ಹೈಡ್ರಾಮದಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದರು. ಗುಜರಾತ್ ಟೈಟಾನ್ಸ್ ತಂಡ ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಕ್ರಿಕೆಟಿಗರ ತಂಡದಲ್ಲಿ ಉಳಿಸಿಕೊಂಡರೂ ಪಾಂಡ್ಯ ತಂಡ ತೊರೆದಿದ್ದರು. ಪಾಂಡ್ಯ ನಿರ್ಗಮನದಿಂದ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿ ನಾಯಕನ ಕಳೆದುಕೊಂಡಿತ್ತು. ಪಾಂಡ್ಯ ತಂಡ ತೊರೆದ ಬೆನ್ನಲ್ಲೇ ಇದೀಗ ಗುಜರಾತ್ ಟೈಟಾನ್ಸ್ ಹೊಸ ನಾಯಕನ ಘೋಷಣೆ ಮಾಡಿದೆ. ಯುವ ಕ್ರಿಕೆಟಿಗ ಶುಬ್‌ಮನ್ ಗಿಲ್ ಹೊಸ ನಾಯಕನಾಗಿ ನೇಮಕಗೊಂಡಿದ್ದಾರೆ. 

ಗುಜರಾತ್ ಟೈಟಾನ್ಸ್ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಈ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಕಳೆದೆರಡು ವರ್ಷದಲ್ಲಿ ಶುಬಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತಮ್ಮ ನಾಯಕತ್ವ ಗುಣದಿಂದ ದಿಟ್ಟ ಹೋರಾಟ ನೀಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. 2022 ಹಾಗೂ 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಶುಬಮನ್‌ ಗಿಲ್ ಗುಜರಾತ್ ತಂಡದ ನಾಯಕ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ವಿಕ್ರಮ್ ಸೋಲಂಕಿ ಹೇಳಿದ್ದಾರೆ.

Latest Videos

ಗುಜರಾತ್ ಟೈಟಾನ್ಸ್‌ಗೆ ಶಾಕ್, ರೀಟೈನ್ ಆದರೂ ಮುಂಬೈ ಇಂಡಿಯನ್ಸ್‌ಗೆ ಹಾರಿದ ಹಾರ್ದಿಕ್ ಪಾಂಡ್ಯ!

ನಿರ್ಧಾರ ಘೋಷಣೆಯಾಗುತ್ತಿದ್ದಂತೆ ಶುಭಮನ್ ಗಿಲ್ ಧನ್ಯವಾದ ಹೇಳಿದ್ದಾರೆ. ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ತಂಡದ ನಾಯಕತ್ವ ಜವಾಬ್ದಾರಿ ನೀಡಿದ ಫ್ರಾಂಚೈಸಿಗೆ ಧನ್ಯವಾದ. ಕಳೆದ ಎರಡು ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಉತ್ತಮ ಹೋರಾಟ ನೀಡಿದೆ. ಇದೀಗ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿ ಯಶಸ್ಸಿಗೆ ಕೊಡುಗೆ ನೀಡಲು ತಯಾರಾಗಿದ್ದೇನೆ ಎಂದು ಗಿಲ್ ಹೇಳಿದ್ದಾರೆ.

ಐಪಿಎಲ್ ಹರಾಜಿಗೂ ಮೊದಲು ತಂಡದಲ್ಲಿನ ಆಟಗಾರರ ಉಳಿಸಿಕೊಳ್ಳಳು ಹಾಗೂ ರಿಲೀಸ್ ಮಾಡಲು ನವೆಂಬರ್  26 ಕೊನೆಯ ದಿನವಾಗಿತ್ತು. ಹೀಗಾಗಿ ಎಲ್ಲಾ ತಂಡಗಳು ಪಟ್ಟಿ ಪ್ರಕಟಿಸಿತ್ತು. ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಕ್ರಿಕೆಟಿಗರನ್ನು ತಂಡದಲ್ಲೇ ಉಳಿಸಿಕೊಂಡಿತ್ತು. ಕೆಲ ಕ್ರಿಕೆಟಿಗರನ್ನು ಬಿಡುಗಡೆ ಮಾಡಿತ್ತು. ಗುಜರಾತ್ ಟೈಟಾನ್ಸ್ ತಂಡದ ಪಟ್ಟಿ ಪ್ರಕಟಿಸಿದ ಎರಡು ಗಂಟೆಯಲ್ಲಿ ಹೈಡ್ರಾಮ ನಡೆದಿದೆ. ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕನ್ನೇ ಖರೀದಿಸಿತ್ತು. 

ಐಪಿಎಲ್ ಹರಾಜಿಗೂ ಮೊದಲು ಟ್ವಿಸ್ಟ್, 17.5 ಕೋಟಿ ರೂಗೆ ಕ್ಯಾಮರೂನ್ ಗ್ರೀನ್ ಖರೀದಿಸಿದ ಆರ್‌‌ಸಿಬಿ!

ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಾಕಿ ಉಳಿದ 15 ಕೋಟಿ ರೂಪಾಯಿಯಲ್ಲಿ ಹಾರ್ದಿಕ್ ಪಾಂಡ್ಯ ಖರೀದಿಸಿತ್ತು. ಇತ್ತ ಮುಂಬೈ ಇಂಡಿಯನ್ಸ್ ಟ್ರೇಡ್ ಮೂಲಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್‌ನ ಆರ್‌ಸಿಬಿ ಬಿಟ್ಟುಕೊಟ್ಟಿತು. ಇದರಿಂದ 17.5 ಕೋಟಿ ರೂಪಾಯಿ ಮುಂಬೈ ಪರ್ಸ್ ಸೇರಿಕೊಂಡಿತು. 

click me!