ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ

Published : Nov 27, 2025, 04:36 PM IST
Palash Old video

ಸಾರಾಂಶ

ಹಲವರೊಂದಿಗೆ ಇತ್ತಾ ರಿಲೇಶನ್‌ಶಿಪ್? ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆ ಪಲಾಶ್ ವಿಡಿಯೋ ಬಹಿರಂಗ, ಪಲಾಶ್ ಮುಚ್ಚಾಲ್ ಹಾಗೂ ಸ್ಮೃತಿ ಮಂದನಾ ಮದುವೆ ಬಹುತೇಕ ಮುರಿದು ಬಿದ್ದಿದೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿ. ಇದಕ್ಕೆ ಕಾರಣವೂ ಬಹಿರಂಗವಾಗಿದೆ.

ಸಾಂಗ್ಲಿ (ನ.27) ಭಾರತ ಮಹಿಳಾ ತಂಡ ಆಟಗಾರ್ತಿ ಸ್ಮೃತಿ ಮಂಧನಾ ಮದುವೆಯ ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಆದರೆ ಮುದುವೆ ದಿಢೀರ್ ಮುಂದೂಡಿಕೆಯಾಗಿತ್ತು. ಸ್ಮೃತಿ ಮಂಧನಾ ತಂದೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದರು. ಇದೇ ಕಾರಣದಿಂದ ಮದುವೆ ಮುಂದೂಡಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಕಾರಣ ಬೇರೆ ಇತ್ತು. ಸ್ಮೃತಿ ಮಂಧನಾ ಮದುವೆಯಾಗುವ ಮ್ಯೂಸಿಕ್ ನಿರ್ದೇಶಕ ಪಲಾಶ್ ಮುಚ್ಚಾಲ್ ಹಲವು ಯುವತಿಯರ ಜೊತೆ ರಿಲೇಶಿಪ್‌ಹೊಂದಿದೆ. ಮದುವೆ ಹಿಂದಿನ ದಿನ ರಾತ್ರಿ ಯುವತಿಯೊಬ್ಬಳ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ. ಈ ಘಟನೆಯಿಂದ ಸ್ಮೃತಿ ತಂದೆ ಅಸ್ವಸ್ಥಗೊಂಡರೆ, ಇತ್ತ ಮದುವೆ ಮುಂದೂಡಿಕೆಯಾಗಿತ್ತು. ಇದೀಗ ಪಲಾಶ್ ಮುಚ್ಚಾಲ್‌ ರಿಲೇಶಿಪ್‌ ಒಬ್ಬ ಯುವತಿಯೊಂದಿಗೆ ಮಾತ್ರ ಸೀಮಿತವಾಗಿರಲಿಲ್ಲ ಅನ್ನೋ ಮಾಹಿತಿಗಳು ಬಹಿರಂಗಗೊಂಡಿದೆ. ಪಲಾಶ್ ಹಳೇ ವಿಡಿಯೋಗಳು ಹರಿದಾಡತೊಗಿದೆ. ಈಪೈಕಿ ಹಾರ್ದಿಕ್ ಪಾಂಡ್ಯ ಮಾಡಿ ಪತ್ನಿ ನತಾಶ ಸ್ಟಾಂಕೋವಿಚ್ ಜೊತೆಗಿರುವ ವಿಡಿಯೋ ಒಂದು ಬಹಿರಂಗವಾಗಿದೆ.

ಹಳೇ ವಿಡಿಯೋ ವೈರಲ್

ಪಲಾಶ್ ಮುಚ್ಚಾಲ್ ಹಾಗೂ ನತಾಶ್ ಸ್ಟಾಂಕೋವಿಚ್ ಹಳೇ ವಿಡಿಯೋ ಒಂದು ವೈರಲ್ ಆಗಿದೆ. ಕಾರಿನ ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತಿದ್ದಾರೆ. ಇದರ ನಡುವೆ ಅತೀ ಜನಪ್ರಿಯ ಡಿಜೆ ವಾಲೆ ಬಾಬು ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದಿನ ವಿಡಿಯೋ ಇದಾಗಿದೆ. ಆದರೆ ಸ್ಮೃತಿ ಮಂದನಾಗೆ ಮೋಸ ಮಾಡಿದ್ದಾರೆ ಅನ್ನೋ ಆರೋಪಗಳು, ಬೇರೊಬ್ಬ ಯುವತಿ ಜೊತೆ ಚಾಟ್ ಮೆಸೇಜ್‌ಗಳು ಬಹಿರಂಗವಾಗುತ್ತಿದ್ದಂತೆ ಇದೀಗ ಪಲಾಶ್ ಮುಚ್ಚಾಲ್-ನತಾಶ ಹಳೇ ವಿಡಿಯೋ ಕೂಡ ಹರಿದಾಡುತ್ತಿದೆ.

ಮದುವೆ ಮನೆಯಲ್ಲೇ ಸಿಕ್ಕಿ ಬಿದ್ದಿದ್ದ ಪಲಾಶ್ ಮುಚ್ಚಾಲ್

ಸ್ಮೃತಿ ಮಂದನಾ ಹಾಗೂ ಪಲಾಶ್ ಮುಚ್ಚಾಲ್ ಮದುವೆ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತ. ಹಲವು ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು ಶುಭ ಹಾರೈಸಿದ್ದರು. ಮಹೆಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸ್ಮೃತಿ ಮಂದನಾ ಸೇರಿದಂತೆ ಭಾರತೀಯ ಮಹಿಳಾ ಕ್ರಿಕೆಟಿಗರು ಕುಣಿದು ಕುಪ್ಪಳಿಸಿದ್ದರು. ಅದ್ಧೂರಿಯಾಗಿ ಎಲ್ಲಾ ಕಾರ್ಯಕ್ರಮಗಳು ನಡೆದಿತ್ತು. ಮದುವೆ ಹಿಂದಿನ ದಿನ ಹಳದಿ, ಸಂಗೀತ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮ ಮುಗಿದ ತಡ ರಾತ್ರಿಯಲ್ಲಿ ಪಲಾಶ್ ಮುಚ್ಚಾಲ್ ನಂದಿಕಾ ದ್ವಿವೇದಿ ಅನ್ನೋ ಯುವತಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಪಲಾಶ್ ಮುಚ್ಚಾಲ್ ಬೇರೆ ಯುವತಿಯರ ಜೊತೆಗಿರುವ ಅಕ್ರಮ ಸಂಬಂಧ, ಕದ್ದುಮುಚ್ಚಿ ಇದ್ದ ರಿಲೇಶಿಪ್ ವಿಚಾರವೂ ಮದುವೆ ಮಂಟಪದವರಗೆ ತಲುಪಿತ್ತು. ಆದರೆ ಸ್ಮೃತಿ ಮಂದನಾ ಹಾಗೂ ಆಕೆಯ ಕುಟುಂಬಕ್ಕೆ ತಿಳಿದಿರಲಿಲ್ಲ. ಆದರೆ ಯಾವಾಗ ಡ್ಯಾನ್ಸ್ ತರಬೇತಿ ನೀಡಲು ಎಂದು ಹೇಳಿ ಬಂದಿದ್ದ ನಂದಿಕಾ ದ್ವಿವೇದಿ ಜೊತೆ ಪಲಾಶ್ ಮುಚ್ಚಾಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಿದ್ದಂತೆ ಪರಿಸ್ಥಿತಿ ಬದಲಾಗಿತ್ತು.

ತಡ ರಾತ್ರಿ ಬಹುತೇಕ ಅತಿಥಿಗಳು ನಿದ್ದೆಗೆ ಜಾರಿದ್ದರು. ಈ ವೇಳೆ ಪಲಾಶ್ ಮುಚ್ಚಾಲ್ ಸಿಕ್ಕಿ ಬಿದ್ದಿದ್ದರು. ಇದರಿಂದ ಮದುವೆ ಮನೆಯಲ್ಲಿ ರಂಪಾಟವೇ ನಡೆದು ಹೋಗಿದೆ ಎಂದು ವರದಿಯಾಗಿದೆ. ಈ ಆಘಾತದಲ್ಲಿ ಸ್ಮೃತಿ ಮಂದನಾ ತಂದೆ ಆಸ್ಪತ್ರೆ ದಾಖಲಾದರು. ಇತ್ತ ಪಲಾಶ್ ಮುಚ್ಚಾಲ್ ರಿಲೇಶನ್‌ಶಿಪ್ ಅರಿವಾಗುತ್ತಿದ್ದಂತೆ ಸ್ಮೃತಿ ಮದುವೆ ರದ್ದುಗೊಳಿಸಿದ್ದರು. ಆದರೆ ಮುಂದೂಡಿಕೆ ಎಂದು ಹೇಳಲಾಗಿತ್ತು ಎಂದು ವರದಿಯಾಗಿದೆ.

 

 

ಆಸ್ಪತ್ರೆಯಿಂದ ತಂದೆ ಬಿಡುಗಡೆ, ಮದುವೆ ದಿನಾಂಕ ಘೋಷಣೆ ಇಲ್ಲ

ಸ್ಮೃತಿ ಮಂದನಾ ತಂದೆ ಶ್ರೀನಿವಾಸ್ ಮಂದನಾ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಆಗಮಿಸಿದ್ದಾರೆ. ಸದ್ಯ ಶ್ರೀನಿವಾಸ್ ಆರೋಗ್ಯ ಚೇತರಿಸಿಕೊಂಡಿದೆ. ಮೊದಲು ಹೇಳಿದಂತೆ ಮಂದನಾ ತಂದೆ ಚೇತರಿಸಿಕೊಂಡ ಬಳಿಕ ಸ್ಮೃತಿ ಮಂದನಾ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ತಂದೆ ಆಸ್ಪತ್ರೆಯಿಂದ ಬಿಡುಗಡೆಯಾದರೂ ಮದುವೆ ಕುರಿತು ಯಾವುದೇ ಘೋಷಣೆ ಇಲ್ಲ, ದಿನಾಂಕವೂ ಘೋಷಣೆಯಾಗಿಲ್ಲ. ಹೀಗಾಗಿ ಸ್ಮೃತಿ ಮಂದನಾ ಹಾಗೂ ಪಲಾಶ್ ಮದುವೆ ಬಹುತೇಕ ಮುಗಿದ ಅಧ್ಯಯ ಎಂದು ಹೇಳಲಾಗುತ್ತಿದ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!