ಪಾಕ್‌ ಕ್ರಿಕೆಟ್‌ನಲ್ಲಿ ಸಮ​ಸ್ಯೆ​ಯಿದೆ: ಕೋಚ್ ಮಿಸ್ಬಾ

By Web DeskFirst Published Oct 11, 2019, 10:30 AM IST
Highlights

ಲಂಕಾ ವಿರುದ್ದದ ಏಕದಿನ ಸರಣಿ ಗೆದ್ದಾಗ ಎಲ್ಲವೂ ನನ್ನ ಮಾರ್ಗದರ್ಶನದಿಂದ ಎಂದಿದ್ದ ಕೋಚ್ ಮಿಸ್ಬಾ ಉಲ್ ಹಕ್ ಇದೀಗ ಟಿ20 ಸರಣಿ ಸೋತಾಗ ತಂಡದಲ್ಲೇ ಸಮಸ್ಯೆ ಇದೆ ಎಂದಿದ್ದಾರೆ.

ಕರಾಚಿ (ಪಾಕಿ​ಸ್ತಾ​ನ)ಅ.11): ಶ್ರೀಲಂಕಾ ವಿರು​ದ್ಧದ ಹೀನಾಯ ಸೋಲಿಗೆ ಪ್ರತಿ​ಕ್ರಿ​ಯಿ​ಸಿದ ಪಾಕಿ​ಸ್ತಾನ ತಂಡದ ಪ್ರಧಾನ ಕೋಚ್‌ ಮಿಸ್ಬಾ ಉಲ್‌ ಹಕ್‌, ‘ಈ ಸೋಲು ನನ್ನ ಕಣ್ಣು ತೆರೆ​ಸಿದೆ. ದೇಶದ ಕ್ರಿಕೆಟ್‌ ವ್ಯವ​ಸ್ಥೆ​ಯಲ್ಲೇನೋ ಗಂಭೀರ ಸಮ​ಸ್ಯೆ​ಯಿದೆ’ ಎಂದು ಅಭಿ​ಪ್ರಾ​ಯ​ಪ​ಟ್ಟರು. 

ಇದನ್ನೂ ಓದಿ: ಪಾಕ್‌ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ

‘ಈ ಸರಣಿ ಸೋಲು ಪಾಕ್‌ ಕ್ರಿಕೆಟ್‌ ವ್ಯವ​ಸ್ಥೆ ಕಣ್ಣು ತೆರೆಸಿ​ದೆ. ತನ್ನ ಪ್ರಮುಖ ಆಟ​ಗಾ​ರ​ರನ್ನೇ ಹೊಂದಿ​ರದ ತಂಡ​ವೊಂದರ ಎದುರು ನಾವು ಸೋತಿ​ದ್ದೇವೆ. ಹೀಗಿ​ರು​ವಾಗ ನಾವು ನಂ.1 ಎನ್ನು​ವುದು ಹೇಗೆ ಸಾಧ್ಯ? ನಾವು ಎಲ್ಲಾ ಮೂರು ವಿಭಾ​ಗ​ಗ​ಳಲ್ಲಿ ಕಳಪೆ ಪ್ರದ​ರ್ಶನ ನೀಡಿ​ದ್ದೇವೆ. ಶ್ರೀಲಂಕಾ ಎಲ್ಲಾ ವಿಭಾ​ಗ​ಗ​ಳಲ್ಲಿ ಮೇಲುಗೈ ಸಾಧಿ​ಸಿತು. ಇದು ಏಕ​ಪ​ಕ್ಷೀಯ ಸರ​ಣಿ​ಯಾ​ಗಿ​ತ್ತು’ ಎಂದು ಮಿಸ್ಬಾ ಹೇಳಿ​ದ​ರು.

ಇದನ್ನೂ ಓದಿ: ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

ಶ್ರೀಲಂಕಾ ವಿರುದ್ದದ 3 ಏಕದಿನ ಪಂದ್ಯವನ್ನು 2-0 ಅಂತರದಲ್ಲಿ ಗೆದ್ದುಕೊಂಡ ಪಾಕಿಸ್ತಾನ, ಟಿ20 ಸರಣಿಯಲ್ಲಿ ಮುಗ್ಗರಿಸಿತು. 3-0 ಅಂತರದಲ್ಲಿ ಟಿ20 ಸರಣಿ ಗೆದ್ದ ಶ್ರೀಲಂಕಾ ಏಕದಿನ ಸೋಲಿಗೆ ತಿರುಗೇಟು ನೀಡಿತು. ಆದರೆ ತವರಿನಲ್ಲಿ ಚುಟುಕು ಕ್ರಿಕೆಟ್ ಸೋಲು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಯಕ ಸರ್ಫರಾಜ್ ವಿರುದ್ದ ಆಕ್ರೋಷಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕೋಚ್ ಮಿಸ್ಬಾ ಹೇಳಿಕೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿರುವ ಸಮಸ್ಯೆಯನ್ನು ಜಗಜ್ಜಾಹೀರು ಮಾಡಿದೆ.
 

click me!