'ಟೀಂ ಇಂಡಿಯಾವನ್ನು ಸೋಲಿಸಿದ್ರೆ ನಿಮ್ಮ ಜತೆ ಡೇಟ್ ಮಾಡ್ತೇನೆ': ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್‌ ನಟಿಯ ಬೋಲ್ಡ್ ಆಫರ್

Published : Oct 18, 2023, 04:10 PM IST
'ಟೀಂ ಇಂಡಿಯಾವನ್ನು ಸೋಲಿಸಿದ್ರೆ ನಿಮ್ಮ ಜತೆ ಡೇಟ್ ಮಾಡ್ತೇನೆ': ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್‌ ನಟಿಯ ಬೋಲ್ಡ್ ಆಫರ್

ಸಾರಾಂಶ

ಶೆಹರ್ ಶಿನ್ವಾರಿ ಎಂಬ ಪಾಕಿಸ್ತಾನದ ನಟಿಯೊಬ್ಬರು, ಸಾಮಾಜಿಕ ಜಾಲತಾಣವಾದ ಎಕ್ಸ್‌(ಟ್ವಿಟರ್)ನಲ್ಲಿ ಮುಕ್ತವಾಗಿ ಈ ಕುರಿತಂತೆ ಬಾಂಗ್ಲಾದೇಶ ಕ್ರಿಕೆಟಿಗರಿಗೆ ಆಫರ್ ನೀಡಿದ್ದಾಳೆ. ಅಕ್ಟೋಬರ್ 19ರಂದು ಪುಣೆಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನವೇ ಪಾಕ್‌ ನಟಿ ಆಫರ್ ನೀಡಿದ್ದಾಳೆ.

ಕರಾಚಿ(ಅ.18): 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಬಗ್ಗುಬಡಿಯುವಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಶಸ್ವಿಯಾಗಿದೆ. ಅಕ್ಟೋಬರ್ 14ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸುಮಾರು 20 ಓವರ್ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಅಂತರದ ಸುಲಭ ಗೆಲುವು ದಾಖಲಿಸುವಲ್ಲಿ ಭಾರತ ತಂಡವು ಯಶಸ್ವಿಯಾಗಿತ್ತು. ಪಾಕಿಸ್ತಾನ ತಂಡವು ಸೋತ ರೀತಿಗೆ ಪಾಕ್ ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದೆಲ್ಲದರ ನಡುವೆ ಪಾಕಿಸ್ತಾನದ ಮಾದಕ ನಟಿಯೊಬ್ಬಳು, ಬಾಂಗ್ಲಾದೇಶಕ್ಕೆ ಟೀಂ ಇಂಡಿಯಾವನ್ನು ಸೋಲಿಸುವಂತೆ ಕರೆ ನೀಡಿದ್ದಾಳೆ. ಇದಷ್ಟೇ ಅಲ್ಲದೇ ಒಂದು ವೇಳೆ ಭಾರತವನ್ನು ಸೋಲಿಸಿದರೆ, ಬಾಂಗ್ಲಾದೇಶದ ಆಟಗಾರರ ಜತೆ ಡೇಟ್ ಮಾಡುವುದಾಗಿ ಬೋಲ್ಡ್ ಆಫರ್ ನೀಡಿದ್ದಾಳೆ.

ಹೌದು, ಶೆಹರ್ ಶಿನ್ವಾರಿ ಎಂಬ ಪಾಕಿಸ್ತಾನದ ನಟಿಯೊಬ್ಬರು, ಸಾಮಾಜಿಕ ಜಾಲತಾಣವಾದ ಎಕ್ಸ್‌(ಟ್ವಿಟರ್)ನಲ್ಲಿ ಮುಕ್ತವಾಗಿ ಈ ಕುರಿತಂತೆ ಬಾಂಗ್ಲಾದೇಶ ಕ್ರಿಕೆಟಿಗರಿಗೆ ಆಫರ್ ನೀಡಿದ್ದಾಳೆ. ಅಕ್ಟೋಬರ್ 19ರಂದು ಪುಣೆಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನವೇ ಪಾಕ್‌ ನಟಿ ಆಫರ್ ನೀಡಿದ್ದಾಳೆ.

ICC World Cup 2023: ಕಿವೀಸ್‌ಗೂ ಶಾಕ್‌ ನೀಡುತ್ತಾ ಆಫ್ಘನ್‌?

"ಇನ್‌ಶಾಅಲ್ಲಾ ನಮ್ಮ ಬಂಗಾಳಿ ಬಂಧುಗಳು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿದ್ದಾರೆ. ಒಂದು ವೇಳೆ ಭಾರತವನ್ನು ಅವರು ಸೋಲಿಸಿದರೆ, ನಾನು ಢಾಕಾಗೆ ಹೋಗಿ ಬೆಂಗಾಳಿ ಬಾಯ್ಸ್‌ ಜತೆ ಮೀನಿನ ಊಟದ ಡೇಟ್ ನಡೆಸುತ್ತೇನೆ ಎಂದು ಟ್ವಿಟರ್‌ನಲ್ಲಿ ಆಫರ್ ನೀಡಿದ್ದಾರೆ ಶೆಹರ್ ಶಿನ್ವಾರಿ.

ವಿಶ್ವಕಪ್‌ ಬಿಸಿಸಿಐ ಟೂರ್ನಿ ಎಂಬಂತಿತ್ತು: ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ!

ಅಹಮದಾಬಾದ್‌: ಭಾರತ ವಿರುದ್ಧದ ವಿಶ್ವಕಪ್‌ ಪಂದ್ಯದ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡದ ನಿರ್ದೇಶಕ ಮಿಕಿ ಆರ್ಥರ್‌ ಬಿಸಿಸಿಐ ವಿರುದ್ಧ ಕಿಡಿಕಾರಿದ್ದು, ಟೂರ್ನಿ ಐಸಿಸಿ ಬದಲು ಬಿಸಿಸಿಐ ಆಯೋಜಿಸಿದಂತೆ ಕಂಡುಬರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

World Cup 2023: ಕೊನೆಗೂ ಗೆಲುವಿನ ಖಾತೆ ತೆರೆದ ಐದು ಬಾರಿಯ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ

ಈ ಬಗ್ಗೆ ಪಂದ್ಯದ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಬೆಂಬಲ ಟೀಂ ಇಂಡಿಯಾ ಕಡೆಗಿತ್ತು. ಇದರ ಪರಿಣಾಮ ಪಾಕಿಸ್ತಾನ ತಂಡದ ಮೇಲೆ ಬೀರಲಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಇದು ವಿಶ್ವಕಪ್‌ ಪಂದ್ಯವಲ್ಲ, ದ್ವಿಪಕ್ಷೀಯ ಸರಣಿಯ ಪಂದ್ಯ ಎಂಬಂತೆ ಭಾಸವಾಯಿತು. ನನಗೆ ಇದು ಐಸಿಸಿ ಟೂರ್ನಿಯಲ್ಲ, ಬಿಸಿಸಿಐನ ಟೂರ್ನಿ ಎಂಬ ಅನುಭವವಾಯಿತು. ಕ್ರೀಡಾಂಗಣದ ಎಲ್ಲೂ ನನಗೆ ದಿಲ್‌ ದಿಲ್‌ ಪಾಕಿಸ್ತಾನ್‌ ಹಾಡು ಕೇಳಿಸಲೇ ಇಲ್ಲ ಎಂದು ಟೀಕಿಸಿದ್ದಾರೆ. ಆದರೆ ತಂಡದ ಆಟಗಾರರ ಪ್ರದರ್ಶನವೇ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?