ನ್ಯೂಜಿಲೆಂಡ್ ಈ ಬಾರಿ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ತೋರುತ್ತಿದ್ದು, ಆಡಿರುವ ಮೂರು ಪಂದ್ಯದಲ್ಲೂ ಗೆದ್ದಿದೆ. ಕೇನ್ ವಿಲಿಯಮ್ಸನ್ ಅನುಪಸ್ಥಿಯಲ್ಲೂ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಬುಧವಾರದ ಪಂದ್ಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಡೆಯಲಿರುವ ಕಾರಣ, ಆಫ್ಘನ್ ಸ್ಪಿನ್ನರ್‌ಗಳಿಂದ ಕಿವೀಸ್‌ಗೆ ನಿಜವಾದ ಸವಾಲು ಎದುರಾಗುವುದು ಖಚಿತ.
ಚೆನ್ನೈ(ಅ.18): ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಆಘಾತಕಾರಿ ಸೋಲುಣಿಸಿ ಅಚ್ಚರಿ ಮೂಡಿಸಿರುವ ಅಫ್ಘಾನಿಸ್ತಾನ ಈ ಬಾರಿ ವಿಶ್ವಕಪ್‌ನಲ್ಲಿ ಮತ್ತೊಂದು ದೈತ್ಯ ಸಂಹಾರಕ್ಕೆ ಸಿದ್ಧವಾಗಿದೆ. ತಂಡ ಬುಧವಾರ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದ್ದು, ಕ್ರೀಡಾಭಿಮಾನಿಗಳಿಗೆ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ. ಆದರೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ಕಿವೀಸ್ ವಿರುದ್ಧ ಆಘ್ಘನ್‌ಗೆ ಗೆಲುವು ದಕ್ಕಲಿದೆಯೇ ಎಂಬ ಕುತೂಹಲವಿದ್ದು, ಇದಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಉತ್ತರ ಸಿಗಲಿದೆ.
ನ್ಯೂಜಿಲೆಂಡ್ ಈ ಬಾರಿ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ತೋರುತ್ತಿದ್ದು, ಆಡಿರುವ ಮೂರು ಪಂದ್ಯದಲ್ಲೂ ಗೆದ್ದಿದೆ. ಕೇನ್ ವಿಲಿಯಮ್ಸನ್ ಅನುಪಸ್ಥಿಯಲ್ಲೂ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಬುಧವಾರದ ಪಂದ್ಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಡೆಯಲಿರುವ ಕಾರಣ, ಆಫ್ಘನ್ ಸ್ಪಿನ್ನರ್‌ಗಳಿಂದ ಕಿವೀಸ್‌ಗೆ ನಿಜವಾದ ಸವಾಲು ಎದುರಾಗುವುದು ಖಚಿತ. ಕಾನ್‌ವೇ, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್ ಮತ್ತೊಮ್ಮೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಕಾಯುತ್ತಿದ್ದಾರೆ.
ಮುಷ್ತಾಕ್ ಅಲಿ ಟಿ20ಯಲ್ಲಿ ಪಂಜಾಬ್ ಹೊಸ ದಾಖಲೆ! ಯುವರಾಜ್ ಸಿಂಗ್ ಅಪರೂಪದ ದಾಖಲೆ ನುಚ್ಚುನೂರು
ಮತ್ತೊಂದೆಡೆ ಇಂಗ್ಲೆಂಡ್‌ಗೆ ಸೋಲುಣಿಸಿದ ಹೊರತಾಗಿಯೂ ಆಫ್ಘನ್ ಅಸ್ಥಿರ ಆಟಕ್ಕೆ ಹೆಸರುವಾಸಿ. ಬ್ಯಾಟಿಂಗ್ ವಿಭಾಗದಲ್ಲಿ ರಹ್ಮಾನುಲ್ಲಾ ಗುರ್ಬಜ್ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಇತರರಿಂದ ಸ್ಥಿರ ಆಟ ಕಂಡುಬರುತ್ತಿಲ್ಲ. ಹೀಗಾಗಿ ಬ್ಯಾಟರ್‌ಗಳಿಂದ ಪರಿಣಾಮಕಾರಿ ಆಟ ಮೂಡಿಬಂದರೆ ಮಾತ್ರ ಕಿವೀಸ್‌ಗೆ ಸೋಲಿನ ರುಚಿ ತೋರಿಸಬಹುದಾಗಿದೆ. ತಜ್ಞ ಸ್ಪಿನ್ನರ್‌ಗಳಾದ ರಶೀದ್ ಖಾನ್, ಮುಜೀಬ್, ಮೊಹಮದ್ ನಬಿ ಆಟ ತಂಡಕ್ಕೆ ನಿರ್ಣಾಯಕವೆನಿಸಿದೆ.
ಸಂಭವನೀಯ ಆಟಗಾರರ ಪಟ್ಟಿ
ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರೆಲ್ ಡ್ಯಾರಿಲ್, ಟಾಮ್ ಲೇಥಮ್(ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯೂಸನ್.
ಅಫ್ಘಾನಿಸ್ತಾನ: ರೆಹಮನುಲ್ಲಾ ಗುರ್ಬಜ್, ಇಬ್ರಾಹಿಂ ಜದ್ರಾನ್, ರಹ್ಮತ್ ಶಾ, ಹಸ್ಮತುಲ್ಲಾ ಶಾಹಿದಿ(ನಾಯಕ), ಮೊಹಮ್ಮದ್ ನಬಿ, ಇಕ್ರಂ ಅಲಿಖಿಲ್, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಫಜಲ್‌ಹಕ್ ಫಾರೂಕಿ.
ಒಟ್ಟು ಮುಖಾಮುಖಿ: 02
ನ್ಯೂಜಿಲೆಂಡ್: 02
ಅಫ್ಘಾನಿಸ್ತಾನ: 00
ಪಂದ್ಯ: ಮಧ್ಯಾಹ್ನ 2ಕ್ಕೆ