ಇನ್ನೂ ಅಂತಿಮಗೊಳ್ಳದ ಅಧಿಕೃತ ಪಟ್ಟಿ
ಅಹ್ಮದಾಬಾದ್ ಬಳಿಕ ಚೆನ್ನೈ, ಬೆಂಗ್ಳೂರಿನ ಪಂದ್ಯಕ್ಕೂ ಪಾಕ್ ಹಿಂದೇಟು
ಕೆಲ ಪಂದ್ಯಗಳ ಸ್ಥಳಾಂತರಕ್ಕೆ ಪಿಸಿಬಿ ಮನವಿ: ವರದಿ
ಹೀಗಾಗಿ ವೇಳಾಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬ ಸಾಧ್ಯತೆ
ನವದೆಹಲಿ(ಜೂ.20): ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಬೇಕಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ನ ಅಧಿಕೃತ ವೇಳಾಪಟ್ಟಿಯ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದ ಪಾಕಿಸ್ತಾನ ಇತರ ಕ್ರೀಡಾಂಗಣಗಳ ತನ್ನ ವೇಳಾಪಟ್ಟಿಯ ಬಗ್ಗೆಯೂ ತಗಾದೆ ತೆಗೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿಪ್ರಕಟಗೊಂಡಿದ್ದರೂ ಅಧಿಕೃತವಾಗಿ ಪಟ್ಟಿಬಿಡುಗಡೆಗೊಳಿಸಲು ಐಸಿಸಿ ಮತ್ತು ಬಿಸಿಸಿಐ ಮತ್ತಷ್ಟುಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. 2019ರ ವಿಶ್ವಕಪ್ ವೇಳಾಪಟ್ಟಿಟೂರ್ನಿಯ 1 ವರ್ಷ ಮೊದಲೇ ಪ್ರಕಟಗೊಂಡಿತ್ತು.
ಕಳೆದ ವಾರ ಬಿಸಿಸಿಐ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿ ಐಸಿಸಿಗೆ ನೀಡಿದಲ್ಲದೇ, ಟೂರ್ನಿಯಲ್ಲಿ ಪಾಲ್ಗೊಳ್ಳುವ ದೇಶಗಳಿಗೆ ನೀಡಿ ಸಲಹೆಗಳನ್ನು ಕೇಳಿತ್ತು. ಆದರೆ ವೇಳಾಪಟ್ಟಿಗೆ ಸಹಮತ ಸೂಚಿಸದ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಬೆಂಗಳೂರಿನಲ್ಲಿ ನಿಗದಿಯಾಗಿರುವ ಆಸ್ಪ್ರೇಲಿಯಾ ವಿರುದ್ಧದ ತನ್ನ ಪಂದ್ಯ ಹಾಗೂ ಚೆನ್ನೈನಲ್ಲಿ ನಡೆಯಬೇಕಿರುವ ಅಷ್ಘಾನಿಸ್ತಾನ ವಿರುದ್ಧದ ಪಂದ್ಯಗಳನ್ನು ಸ್ಥಳಾಂತರಿಸಲು ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ.
undefined
Aus vs Eng: ರೋಚಕ ಘಟ್ಟಕ್ಕೆ ಆ್ಯಷಸ್ ಮೊದಲ ಟೆಸ್ಟ್!
ಪಾಕ್ ಹಿಂಜರಿಕೆ ಯಾಕೆ?: ಅಹ್ಮದಾಬಾದ್ನಲ್ಲಿ ನಿಗದಿಯಾಗಿರುವ ಭಾರತ ವಿರುದ್ಧದ ಪಂದ್ಯವನ್ನು ಭದ್ರತಾ ಕಾರಣ ನೀಡಿ ಪಿಸಿಬಿ ಸ್ಥಳಾಂತರಕ್ಕೆ ಮನವಿ ಮಾಡಿತ್ತು. ಆದರೆ ಬೆಂಗಳೂರು, ಚೆನ್ನೈ ವಿಚಾರದಲ್ಲಿ ಬೇರೆ ಕಾರಣಗಳನ್ನು ನೀಡಿದೆ. ಬ್ಯಾಟರ್ ಸ್ನೇಹಿಯಾಗಿರುವ ಬೆಂಗಳೂರಿನ ಪಿಚ್ನಲ್ಲಿ ಆಸ್ಪ್ರೇಲಿಯಾವನ್ನು ಎದುರಿಸುವುದು ಸವಾಲಾಗಬಹುದು ಎಂಬ ಆತಂಕ ಪಾಕ್ ತಂಡವನ್ನು ಕಾಡುತ್ತಿದೆ. ಅದೇ ರೀತಿ ಆಫ್ಘನ್ ತಂಡದಲ್ಲಿ ತಜ್ಞ ಸ್ಪಿನ್ನರ್ಗಳಿದ್ದು, ಅವರ ವಿರುದ್ಧ ಚೆನ್ನೈನ ಸ್ಪಿನ್ ಪಿಚ್ನಲ್ಲಿ ಆಡುವುದು ಹೇಗೆ ಎಂಬ ಭಯ ಪಾಕ್‌ಗೆ ಇದೆ. ಇದೇ ಕಾರಣಕ್ಕೆ ಈ ಎರಡು ಪಂದ್ಯಗಳನ್ನು ಸ್ಥಳಾಂತರಿಸಲು ಬಿಸಿಸಿಐಗೆ ಸೂಚಿಸಿದೆ ಎಂದು ವರದಿಯಾಗಿದೆ. ಈಗಿರುವ ವೇಳಾಪಟ್ಟಿಗೆ ಒಪ್ಪಿಗೆ ಸೂಚಿಸದಂತೆ ಪಾಕ್ ಆಯ್ಕೆ ಸಮಿತಿಯು ಪಿಸಿಬಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಒಪ್ಪುತ್ತಾ ಬಿಸಿಸಿಐ?
ಪಂದ್ಯಗಳನ್ನು ಸ್ಥಳಾಂತರಿಸಲು ಪಿಸಿಬಿ ಮನವಿ ಮಾಡಿದ್ದರೂ ಬಿಸಿಸಿಐ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಕಡಿಮೆ. ಬಲವಾದ ಕಾರಣವಿದ್ದರೆ ಮಾತ್ರ ಪಂದ್ಯ ಸ್ಥಳಾಂತರ ಸಾಧ್ಯವಿದ್ದು, ತಮ್ಮ ದೌರ್ಬಲ್ಯ, ಪ್ರಾಬಲ್ಯದ ಕಾರಣ ನೀಡಿ ಪಂದ್ಯ ಸ್ಥಳಾಂತರಿಸಲು ಮನವಿ ಮಾಡಿದರೆ ಒಪ್ಪಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ಪಿಸಿಬಿಯ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದೆ ಎಂದು ತಿಳಿದುಬಂದಿದೆ.
1,000 ಕೋಟಿ ರುಪಾಯಿ ಗಡಿದಾಟಿದ ಕಿಂಗ್ ಕೊಹ್ಲಿ ಆಸ್ತಿ ಮೌಲ್ಯ..! ವಿರಾಟನ ಮತ್ತೊಂದು ಅವತಾರ ಅನಾವರಣ
ಮುಂದಿನ ವಾರ ಪಟ್ಟಿ ಅಧಿಕೃತ ಬಿಡುಗಡೆ?
ಟೂರ್ನಿಯ ಅಧಿಕೃತ ವೇಳಾಪಟ್ಟಿಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಈಗಿರುವ ತಾತ್ಕಾಲಿಕ ವೇಳಾಪಟ್ಟಿಗೆ ಪಿಸಿಬಿ ಆಕ್ಷೇಪಿಸಿದ ಹೊರತಾಗಿಯೂ ಬಿಸಿಸಿಐ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ತಾತ್ಕಾಲಿಕ ವೇಳಾಪಟ್ಟಿಯನ್ನೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಹೆಚ್ಚು. ತಾತ್ಕಾಲಿಕ ಪಟ್ಟಿಪ್ರಕಾರ ಅ.5ರಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಪ್ರೇಲಿಯಾ ಮುಖಾಮುಖಿಯಾಗಲಿವೆ. ಭಾರತ ಆರಂಭಿಕ ಪಂದ್ಯವನ್ನು ಅ.8ರಂದು ಆಸ್ಪ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಬೇಕಿದೆ.