
ನವದೆಹಲಿ(ಜು.06): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಕೋಚ್ ಆಗಿದ್ದ ಗ್ರ್ಯಾಂಟ್ ಫ್ಲವರ್ ಅವರ ಕುತ್ತಿಗೆಗೆ ಚಾಕನ್ನು ಇಟ್ಟಿದ್ದರು ಎನ್ನುವ ಒಂದು ಮಾತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿದೆ.
ಹೌದು, 2016ರ ಆಸ್ಪ್ರೇಲಿಯಾ ಪ್ರವಾಸದ ವೇಳೆ ಸಲಹೆ ನೀಡಲು ಮುಂದಾಗಿದ್ದಕ್ಕೆ ಹಿರಿಯ ಕ್ರಿಕೆಟಿಗ ಯೂನಿಸ್ ಖಾನ್ ಕುತ್ತಿಗೆಗೆ ಚಾಕು ಹಿಡಿದಿದ್ದರು ಎಂದು ಪಾಕಿಸ್ತಾನದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ವೇಳೆ ಭೋಜನ ಸೇವಿಸುತ್ತಿದ್ದಾಗ ಯೂನಿಸ್‌ಗೆ ಕೆಲ ಬ್ಯಾಟಿಂಗ್ ಸಲಹೆಗಳನ್ನು ನೀಡಲು ಮುಂದಾದೆ. ಅದು ಅವರಿಗೆ ಇಷ್ಟವಾಗಲಿಲ್ಲ. ತಕ್ಷಣ ಮೇಜಿನ ಮೇಲಿದ್ದ ಚಾಕುವನ್ನು ಕೈಗೆತ್ತಿಕೊಂಡು ನನ್ನ ಕುತ್ತಿಗೆ ಬಳಿ ಇಟ್ಟರು. ಪ್ರಧಾನ ಕೋಚ್ ಮಿಕ್ಕಿ ಆರ್ಥರ್, ಯೂನಿಸ್‌ರನ್ನು ತಡೆಯಬೇಕಾಯಿತು’ ಎಂದು ಫ್ಲವರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮೇಲೆ ಸ್ವಹಿತಾಸಕ್ತಿ ಆರೋಪ; ಬಿಸಿಸಿಐಗೆ ಪತ್ರ!
ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗ್ರ್ಯಾಂಟ್ ಫ್ಲವರ್ ಸದ್ಯ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಆ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. 2016ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಯೂನಿಸ್ ಖಾನ್ ಸೊನ್ನೆ ಸುತ್ತಿದ್ದರು. ಈ ವೇಳೆ ಸಲಹೆ ನೀಡಲು ಹೋಗಿದ್ದು ಜೀವ ಬಾಯಿಗೆ ಬಂದಂತೆ ಆಗಿತ್ತು ಎಂದು ಸಹೋದರ ಆಂಡಿ ಫ್ಲವರ್ ಜತೆ ನಡೆದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.