ಅಮಾಯಕನ ಸಾವಿಗೆ ಕಾರಣ ಆರೋಪದ ಮೇಲೆ ಲಂಕಾ ಕ್ರಿಕೆಟಿಗ ಕುಸಾಲ್ ಮೆಂಡೀಸ್ ಅರೆಸ್ಟ್!

Published : Jul 05, 2020, 08:23 PM IST
ಅಮಾಯಕನ ಸಾವಿಗೆ ಕಾರಣ ಆರೋಪದ ಮೇಲೆ ಲಂಕಾ ಕ್ರಿಕೆಟಿಗ ಕುಸಾಲ್ ಮೆಂಡೀಸ್ ಅರೆಸ್ಟ್!

ಸಾರಾಂಶ

ಶ್ರೀಲಂಕಾ ಕ್ರಿಕೆಟಿಗ ಕುಸಾಲ್ ಮೆಂಡೀಸ್ ದಿಢೀರ್ ಬೆಳವಣಿಗೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಒರ್ವ ಅಮಾಯಕನ ಸಾವಿನ ಆರೋಪದಲ್ಲಿ ಕುಸಾಲ್ ಮೆಂಡಿಸ್ ಆರೆಸ್ಟ್ ಆಗಿದ್ದಾರೆ.

ಕೊಲೊಂಬೊ(ಜು.05): ಶ್ರೀಲಂಕಾ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ಕುಸಾಲ್ ಮೆಂಡೀಸ್‌ನನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ. ಕೊಲೊಂಬೊ ನಗರದ ಹೊರಭಾಗದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಕುಸಾಲ್ ಮೆಂಡೀಸ್ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ ಲಂಕಾ ಪೊಲೀಸರು ಬಂಧಿಸಿದ್ದಾರೆ.

ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!..

ಕುಸಾಲ್ ಮೆಂಡೀಸ್ ತುರ್ತು ಕೆಲಸದ ನಿಮಿತ್ತ ಕಾರು ಡ್ರೈವ್ ಮಾಡುತ್ತಾ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಭೀಕರ ಅಪಘಾತದಿಂದ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಮುಖ ಆರೋಪಿ ಕುಸಾಲ್ ಮೆಂಡೀಸ್‌ನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಐಪಿಎಲ್‌ನಲ್ಲಿ ಈ ಮೂರು ತಂಡಗಳ ಪರ ಆಡಲು ಬಯಸಿದ ವೇಗಿ ಶ್ರೀಶಾಂತ್

ಶ್ರೀಲಂಕಾದಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಲ್ಲಿ ಸೆಲೆಬ್ರೆಟಿಗಳು, ಕ್ರಿಕೆಟಿಗರೂ ಕಾಣಿಸಿಕೊಳ್ಳುತ್ತಿರುವುದು ಆತಂಕಾರಿಯಾಗಿದೆ. ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ಸೆಲೆಬ್ರೆಟಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ