*ಸತತ 2 ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿರುವ ಪಾಕ್
*ಹ್ಯಾಟ್ರಿಕ್ ಜಯ ಸಾಧಿಸಿದರೆ ಸೆಮೀಸ್ ಹೊಸ್ತಿಲಿಗೆ ತಂಡ
*ಭಾರತದ ವಿರುದ್ಧ ರೋಚಕ ಜಯ ಸಾಧಿಸಿದ್ದ ಪಾಕ್!
ದುಬೈ(ಅ. 29): ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಎರಡು ತಂಡಗಳಿಗೆ ಸೋಲಿನ ರುಚಿ ತೋರಿಸಿರುವ ಪಾಕಿಸ್ತಾನ (Pakistan), ಸೂಪರ್-12ರ ಹಂತದ 3ನೇ ಪಂದ್ಯದಲ್ಲಿ ಇಂದು(ಅ. 29) ಅಫ್ಘಾನಿಸ್ತಾನ (Afghanistan) ವಿರುದ್ಧ ಸೆಣಸಾಡಲಿದೆ. ಮಾಜಿ ಚಾಂಪಿಯನ್ ಪಾಕಿಸ್ತಾನ ಈ ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯತೆ ಇರುವ ಪ್ರಮುಖ ತಂಡವಾಗಿದ್ದು, ಯುಎಇ ಪಿಚ್‌ಗಳಲ್ಲಿ ಹೊಂದಿರುವ ಉತ್ತಮ ದಾಖಲೆಯನ್ನು ಮುಂದುವರಿಸುವ ಯೋಚನೆಯಲ್ಲಿದೆ.
T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!
ಈ ಪಂದ್ಯದಲ್ಲೂ ಗೆದ್ದರೆ ಸೆಮಿಫೈನಲ್ (Semi-Final) ಸ್ಥಾನ ಬಹುತೇಕ ಖಚಿತವಾಗಲಿದೆ. ಉಭಯ ತಂಡಗಳು ಟಿ20ಯಲ್ಲಿ ಕೇವಲ 2ನೇ ಬಾರಿ ಮುಖಾಮುಖಿಯಾಗುತ್ತಿವೆ. 2013ರಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಪಾಕ್ ತಂಡ ಜಯಗಳಿಸಿತ್ತು. ಪಾಕಿಸ್ತಾನ ತಂಡದಲ್ಲಿ ಅನುಭವಿಗಳೇ ದಂಡೇ ಇದೆ. ಇನ್ನು ಪಾಕಿಸ್ತಾನ, ಯುಎಇನಲ್ಲಿ ಆಡಿರುವ ಕಳೆದ 13 ಪಂದ್ಯಗಳಲ್ಲೂ ಗೆದ್ದಿರುವುದು ತಂಡದ ಲಯವನ್ನು ತೋರಿಸುತ್ತದೆ.
T20 World Cup: ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್
ಮತ್ತೊಂದೆಡೆ, ಯಾವುದೇ ಬಲಿಷ್ಠ ತಂಡಕ್ಕೂ ಸೋಲುಣಿಸುವ ಸಾಮರ್ಥ್ಯ ಹೊಂದಿರುವ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಶಾಕ್ ನೀಡಿದರೆ ಅಚ್ಚರಿ ಇಲ್ಲ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳ ಭರ್ಜರಿ ಜಯ ಸಾಧಿಸಿರುವ ತಂಡ ಈ ಪಂದ್ಯದಲ್ಲಿ ಪಾಕಿಸ್ತಾನದ ಜಯದ ಓಟಕ್ಕೆ ಬ್ರೇಕ್ ಹಾಕಲು ಕಾತರಿಸುತ್ತಿದೆ. ಆಫ್ಘನ್ ತಂಡದಲ್ಲೂ ಟಿ20 ತಜ್ಞರೇ ದಂಡೇ ಇದ್ದು, ಈ ಪಂದ್ಯ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
2ನೇ ಸ್ಥಾನಕ್ಕೆ ಜಿಗಿದ ಆಸ್ಟ್ರೇಲಿಯಾ!
ಡೇವಿಡ್ ವಾರ್ನರ್(David Warner) ಸ್ಫೋಟಕ ಬ್ಯಾಟಿಂಗ್ ಹಾಗೂ ಆಸೀಸ್(Australia) ತಂಡದ ಮಿಂಚಿನ ಬೌಲಿಂಗ್ ದಾಳಿಯಿಂದ ಶ್ರೀಲಂಕಾ(Srilanka) ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್ ಗೆಲುುವು ಸಾಧಿಸಿದೆ. ಈ ಮೂಲಕ T20 World Cup 2021 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ(Points Table) 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದೆ. ಇತ್ತ ಗೆಲುವಿನ ವಿಶ್ವಾಸದಲ್ಲಿದ್ದ ಶ್ರೀಲಂಕಾ ನಿರಾಸೆ ಅನುಭವಿಸಿದೆ.
ಪಾಕಿಸ್ತಾನದ ಗೆಲುವಿನ ಓಟ
ಭಾರತದ ವಿರುದ್ಧ 10 ವಿಕೇಟ್‌ಗಳ ರೋಚಕ ಜಯ ಸಾಧಿಸಿದ್ದ ಪಾಕಿಸ್ತಾನ ನ್ಯೂಜೆಲೆಂಡ್ (New Zealand) ವಿರುದ್ಧ ಗೆದ್ದು ಜಯದ ಹಾದಿ ಮುಂದುವರೆಸಿತ್ತು. ಅಕ್ಟೋಬರ್ 26 ರಂದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ 5 ವಿಕೆಟ್ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ ಗೆಲುವಿನ ಓಟ ಮುಂದುವರಿಸಿತ್ತು. ಇತ್ತ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಅಫ್ಘಾನ್ ತಂಡ ಈ ಪಂದ್ಯದಲ್ಲಿ ಪಾಕಿಸ್ತಾನದ ಜಯದ ಓಟಕ್ಕೆ ಬ್ರೇಕ್ ಹಾಕಲು ಕಾತರಿಸುತ್ತಿದೆ
ಅಂಕಪಟ್ಟಿ:
ಶ್ರೀಲಂಕಾ (Sri Lanka) ವಿರುದ್ಧದ ಗೆಲುವಿನ ಬಳಿಕ ಆಸ್ಟ್ರೇಲಿಯಾ (Australia) ಮೊದಲ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ (England) ಕೂಡ 2 ಪಂದ್ಯದಿಂದ 2 ಗೆಲುವು ಸಾಧಿಸಿ 4 ಅಂಕ ಸಂಪಾದಿಸಿದೆ. ಆದರೆ ಆಸ್ಟ್ರೇಲಿಯಾಗಿಂತ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ಮೊದಲ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಾರಿದೆ.
Black Lives Matter: ಮಂಡಿಯೂರದೆ ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ ಡಿ ಕಾಕ್..!
ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ 2 ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿದೆ. ಇನ್ನು ತಲಾ ಒಂದೊಂದು ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ಹಾಗೂ ನಮಿಬಿಯಾ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿದೆ. ಒಂದೊಂದು ಸೋಲು ಕಂಡಿರುವ ನ್ಯೂಜಿಲೆಂಡ್ ಹಾಗೂ ಭಾರತ 4 ಮತ್ತು 5ನೇ ಸ್ಥಾನದಲ್ಲಿದೆ. ಇತ್ತ 2 ಸೋಲು ಅನುಭವಿಸಿರುವ ಸ್ಕಾಟ್‌ಲೆಂಡ್ ಅಂತಿಮ ಸ್ಥಾನದಲ್ಲಿದೆ.