T20 World Cup 2021: ಆಸ್ಟ್ರೇಲಿಯಾಗೆ 155 ರನ್ ಟಾರ್ಗೆಟ್ ನೀಡಿದ ಲಂಕಾ, ಗೆಲುವು ಯಾರಿಗೆ?

Published : Oct 28, 2021, 09:17 PM ISTUpdated : Oct 28, 2021, 09:23 PM IST
T20 World Cup 2021: ಆಸ್ಟ್ರೇಲಿಯಾಗೆ 155 ರನ್ ಟಾರ್ಗೆಟ್ ನೀಡಿದ ಲಂಕಾ, ಗೆಲುವು ಯಾರಿಗೆ?

ಸಾರಾಂಶ

ಕಾಂಗರೂಗಳಿಗೆ 155 ರನ್ ಟಾರ್ಗೆಟ್ ನೀಡಿದ ಶ್ರೀಲಂಕಾ ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಆಸಿಸ್ ದಾಳಿಗೆ ತತ್ತರಿಸಿದರೂ ದಿಟ್ಟ ಹೋರಾಟ

ದುಬೈ(ಅ.28):  ಮೊದಲು ಬ್ಯಾಟಿಂಗ್, ಆಸ್ಟ್ರೇಲಿಯಾ(Australia) ಬೌಲಿಂಗ್ ದಾಳಿಯಿಂದ ಶ್ರೀಲಂಕಾ(Srilanka) ಹಿನ್ನಡೆ ಅನುಭವಿಸಿತು. ಕುಸಾಲ್ ಪರೇರಾ ಹಾಗೂ ಚಾರಿಯತ್ ಅಸಲಂಕ ಹೋರಾಟದ ನಡುವೆ ಲಂಕಾ ತಂಡ ಕುಸಿದಿದೆ. ಪರಿಣಾಮ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿದೆ. ಈ T20 World Cup 2021 ಹೋರಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Black Lives Matter: ಮಂಡಿಯೂರದೆ ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ ಡಿ ಕಾಕ್..!

ಟಾಸ್(Toss) ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ಆರಂಭದಲ್ಲೇ ಪಥುಮ್ ನಿಸಂಕ ವಿಕೆಟ್ ಕಳೆದುಕೊಂಡಿತು. ಪಥುಮ್ ಕೇವಲ 7 ರನ್ ಸಿಡಿಸಿ ಔಟಾದರು. 15 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಡಕ್ಕೆ ಕುಸಾಲ್ ಪರೇರಾ(Kusal Perera) ಹಾಗೂ ಚಾರಿಯತ್ ಅಸಲಂಕ(Charith Asalanka) ಜೊತೆಯಾಟ ನೆರವಾಯಿತು. ಈ ಜೋಡಿ 52ರನ್ ಜೊತೆಯಾಟ ನೀಡಿತು.

ಅಸಲಂಕ 27 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 35 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ 25 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 35 ರನ್ ಸಿಡಿಸಿದ ಕುಸಾಲ್ ಪರೇರಾ ವಿಕೆಟ್ ಪತನಗೊಂಡಿತು. 86 ರನ್‌ಗೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಲಂಕಾ ಮತ್ತೆ ಸಂಕಷ್ಟಕ್ಕೆ ಸಿಲುಕಿಸಿತು.

T20 World Cup 2021: ಮೊಹಮ್ಮದ್ ಶಮಿ ನಿಂದನೆ ಹಿಂದೆ ಪಾಕಿಸ್ತಾನ ಪಿತೂರಿ ಬಯಲು!

ಆವಿಷ್ಕಾ ಫರ್ನಾಂಡೋ ಹಾಗೂ ವಾವಿಂಡು ಹಸರಂಗ ಅಬ್ಬರಿಸಲಿಲ್ಲ. ಅವಿಷ್ಕಾ 4 ಹಾಗೂ ವಾವಿಂಡು 4 ರನ್ ಸಿಡಿಸಿ ಔಟಾದರು. ಆದರೆ ಭಾನುಕಾ ರಾಜಪಕ್ಸೆ ಹೋರಾಟ ಮುಂದುವರಿಸಿದರು. ಇತ್ತ ದಸೂನ್ ಶನಕಾ ಉತ್ತಮ ಸಾಥ್ ನೀಡಿದರು. ಆದರೆ ಶನಕ 12 ರನ್ ಸಿಡಿಸಿ ಔಟಾದರು. 

ರಾಜಪಕ್ಸೆ ಹೋರಾಟ ಮುಂದುವರಿಸಿದರು. ಇತ್ತ ಚಮಿಕಾ ಕರುಣಾರತ್ನೆ ಸಾಥ್ ನೀಡಿದರು. ರಾಜಪಕ್ಸೆ ಎಸೆತದಲ್ಲಿ 26 ಅಜೇಯ 33 ರನ್ ಸಿಡಿಸಿದರು. ಇತತ್ತ ಕರುಣಾರತ್ನೆ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು. 

ದುಬೈ ಪಿಚ್:
ದುಬೈ ಕ್ರೀಡಾಂಗಣದಲ್ಲಿ(Dubai Stadium) ಚೇಸ್ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಅಲ್ಪ ಮೊತ್ತಕ್ಕೆ ಕುಸಿದ ಉದಾಹರಣೆ ಹೆಚ್ಚು. ಭಾರತ(India) ಹಾಗೂ ಪಾಕಿಸ್ತಾನ(Pakistan) ನಡುವಿನ ಪಂದ್ಯ ಕೂಡ ಇದಕ್ಕೆ ಹೊರತಾಗಿಲ್ಲ ಮೊದಲು ಬ್ಯಾಟಿಂಗ್ ಮಾಡಿದ  151 ರನ್ ಸಿಡಿಸಿತ್ತು. 152 ರನ್ ಚೇಸ್ ಮಾಡಿದ ಪಾಕಿಸ್ತಾನ 10 ವಿಕೆಟ್ ಭರ್ಜರಿ ಗೆಲುವು ಕಂಡಿತ್ತು. ಇದೀಗ ಆಸ್ಟ್ರೇಲಿಯಾ ತಂಡಕ್ಕೂ ಇದು ಸುಲಭ ಗುರಿಯಾಗಿದ್ದು, ಚೇಸಿಂಗ್ ಮತ್ತಷ್ಟೂ ನೆರವಾಗಲಿದೆ.

ಅಂಕಪಟ್ಟಿ:
ಮೊದಲ ಗುಂಪಿನಲ್ಲಿರುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ(Points Table) 3 ಮತ್ತು 4ನೇ ಸ್ಥಾನದಲ್ಲಿದೆ. ಎರಡೂ ಪಂದ್ಯ ಗೆದ್ದ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಸೆಮಿಫೈನಲ್(Semifinal) ಹೋರಾಟ ಸುಗಮವಾಗಿಸಲು ಇಂದಿನ ಪಂದ್ಯದ ಗೆಲುವು ಪ್ರಮುಖವಾಗಿದೆ. ಹೀಗಾಗಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.

ಕೊಹ್ಲಿ, ಕೆ.ಎಲ್‌.ರಾಹುಲ್‌ ICC T20 ranking ಕುಸಿತ!

ವೇಳಾಪಟ್ಟಿ:
ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಇಂದಿನ ಪಂದ್ಯದ ಬಳಿಕ ಅಕ್ಟೋಬರ್ 30 ರಂದು ಮತ್ತೆ ಅಖಾಡಕ್ಕಿಳಿಯಲಿದೆ. ಶ್ರೀಲಂಕಾ ತಂಡ ಸೌತ್ ಆಫ್ರಿಕಾ ವಿರುದ್ದ ಹೋರಾಟ ನಡೆಸಲಿದೆ. ಇತ್ತ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. 

ಭಾನುವಾರ ಅಂದರೆ ಅಕ್ಟೋಬರ್ 31ರಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಇದು ಉಭಯ ತಂಡಗಳಿಗೂ ಮಹತ್ವದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಪ್ರವೇಶದ ಅವಕಾಶ ಹೆಚ್ಚಾಗಿದೆ.

ನವೆಂಬರ್ 10 ರಂದು ಮೊದಲ ಸೆಮಿಫೈನ ಪಂದ್ಯ ಆಯೋಜಿಸಲಾಗಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್ 11 ರಂದು ನಡೆಯಲಿದೆ. ಇನ್ನು ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!