ಜೀವನ ನಿರ್ವಹಣೆಗಾಗಿ ಪಿಕ್ ಅಪ್ ಚಾಲಕನಾದ ಪಾಕಿಸ್ತಾನ ಕ್ರಿಕೆಟಿಗ!

By Web DeskFirst Published Oct 12, 2019, 8:15 PM IST
Highlights

ಅಂಡರ್ 19, ಪಾಕಿಸ್ತಾನ ಎ ಹಾಗೂ ಪಾಕಿಸ್ತಾನ ಟೆಸ್ಟ್ ತಂಡದ ಆಯ್ಕೆಯಲ್ಲೂ ಈ ಕ್ರಿಕೆಟಿಗನ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಪಾಕಿಸ್ತಾನ ದೇಸಿ ಕ್ರಿಕೆಟಾದ ಡಿಪಾರ್ಟ್‌ಮೆಂಟ್ ಕ್ರಿಕೆಟ್ ಸಂಸ್ಥೆ ಮುಚ್ಚಿದ ಕಾರಣ, ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಆಟೋ ಚಾಲಕನಾಗಿ ದುಡಿಯಬೇಕಾಯಿತು.

ಕರಾಚಿ(ಅ.12): ಭಾರತದಲ್ಲಿ ದೇಸಿ ಕ್ರಿಕೆಟಿಗರಿಗೂ ಬಿಸಿಸಿಐ ಉತ್ತಮ ವೇತನ ನೀಡುತ್ತಿದೆ. ಶ್ರೀಮಂತ ಕ್ರಿಕೆಟ್ ರಾಷ್ಟ್ರವಾಗಿರುವ ಕಾರಣ, ಕ್ರಿಕೆಟಿಗರು ಯಾರು ಕೂಡ ಹಸಿವಿನಿಂದ ಬಳಲಿಲ್ಲ. ಆದರೆ ಇತರ ದೇಶದ ಕತೆ ಇದೇ ರೀತಿ ಇಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟಿಗ ತನ್ನ ಜೀವನ ನಿರ್ವಹಣೆಗಾಗಿ ಮಾರುತಿ ಸುಜುಕಿ ಪಿಕ್ ಅಪ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಘಟನೆ ಬೆಳೆಕಿಗೆ ಬಂದಿದೆ.

ಇದನ್ನೂ ಓದಿ: ಪಾಕ್‌ ಕ್ರಿಕೆಟ್‌ನಲ್ಲಿ ಸಮ​ಸ್ಯೆ​ಯಿದೆ: ಕೋಚ್ ಮಿಸ್ಬಾ

ಪಾಕಿಸ್ತಾನ ಅಂಡರ್ 19, ಪಾಕಿಸ್ತಾನ ಎ ತಂಡ ಹಾಗೂ ಪಾಕಿಸ್ತಾನ ಟೆಸ್ಟ್ ತಂಡಕ್ಕೂ ಆಯ್ಕೆಯಲ್ಲೂ ಹಲವು ಕ್ರಿಕೆಟಿಗರಿಗೆ ತೀವ್ರ ಪೈಪೋಟಿ ನೀಡಿದ್ದ ಫಝಲ್ ಸುಭಾನ್, ಇದೀಗ ಬೇರೆ ದಾರಿ ಕಾಣದೆ ಪಿಕ್ ಅಪ್ ಚಾಲಕನಾಗಿ ದುಡಿಯುತ್ತಿದ್ದಾರೆ. 31ರ ಹರೆಯದ ಪಝಲ್ ಪಾಕಿಸ್ತಾನ ಡಿಪಾರ್ಟ್‌ಮೆಂಟ್ ಕ್ರಿಕೆಟ್ ಅಡಿಯಲ್ಲಿ ಆಡುತ್ತಿದ್ದರು.

ಇದನ್ನೂ ಓದಿ: ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು!

ಹಣದ ಕೊರತೆ, ಆತಂರಿಕ ರಾಜಕೀಯದಿಂದ ಡಿಪಾರ್ಟ್‌ಮೆಂಟ್ ಕ್ರಿಕೆಟ್ ಸಂಸ್ಥೆ ಮುಚ್ಚಿಹೋಗಿದೆ. ಇದು ಹಲವು ಪಾಕಿಸ್ತಾನ ಕ್ರಿಕೆಟಿಗರ ಜೀವನವನ್ನೇ ಕಸಿದುಕೊಂಡಿದೆ. ಡಿಪಾರ್ಟ್‌ಮೆಂಟ್ ಕ್ರಿಕೆಟ್ ಸಂಸ್ಥೆ ಮುಚ್ಚಿಹೋದ ಕಾರಣ, ಇತರ ವೃತ್ತಿ ತಿಳಿಯದ ಫಝಲ್ ಜೀವನಕ್ಕಾಗಿ ಕೆಲಸ ಹುಡುಕಬೇಕಾಯಿತು. ಹೆಚ್ಚು ಓದಿಲ್ಲ, ಡ್ರೈವಿಂಗ್ ಬರುತ್ತಿದ್ದ ಕಾರಣ ಸಾಲ ಮಾಡಿ ಸುಜುಕಿ ಪಿಕ್ ಅಪ್ ಖರೀದಿಸಿದ್ದಾರೆ. 

ಇದನ್ನೂ ಓದಿ: ಕೊಹ್ಲಿಗೆ ಪಾಕ್ ಅಭಿಮಾನಿಯ ವಿಶೇಷ ಮನವಿ; ಭಾರತೀಯರಿಂದ ಸಕಾರಾತ್ಮಕ ಸ್ಪಂದನೆ!

ಕೆಲ ದಿನ ಹೆಚ್ಚು ಕೆಲಸ ಸಿಗುತ್ತೆ. ಇನ್ನು ಹಲವು ದಿನ ಏನೂ ಕೆಲಸವಿರುವುದಿಲ್ಲ. ಹೀಗಾದಾಗ ಊಟಕ್ಕೂ ಸಮಸ್ಯೆಯಾಗುತ್ತೆ. ಕುಟುಂಬದ ನಿರ್ವಹಣೆ ಕಷ್ಟವಾಗುತ್ತೆ. ಕ್ರಿಕೆಟ್‌ಗಾಗಿ ಕಠಿಣ ಪ್ರಯತ್ನ, ಅಭ್ಯಾಸ ಮಾಡಿದ್ದೆ. ಕ್ರಿಕೆಟ್ ಬಿಟ್ಟು ಬೇರೇನು ನನಗೆ ತಿಳಿಯದು. ಈಗ ಅನಿವಾರ್ಯ. ಹೀಗಾಗಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಫಜಲ್ ನೋವಿನಿಂದ ಹೇಳಿಕೊಂಡಿದ್ದಾರೆ.

 

SAD STORY OF 🇵🇰 🏏

Fazal Subhan was the player of HBL, he has played U19 & A side cricket for Pakistan, he was contender of Pak Test team,
After closing of Departmental cricket he is driving drive
“BHARE KE SUZUKI”

His salary was 1 lac & now earning is less then 40k
😭 😭 😭 pic.twitter.com/nq22vPY55v

— Shoaib Jatt (@Shoaib_Jatt)

ಫಜಲ್ ಪ್ರಥಮ ದರ್ಜೆ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 32.87. ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಆಗಿದ್ದ ಫಜಲ್‌ಗೆ ಉತ್ತಮ ವೇದಿಕೆಯೂ ಸಿಗಲಿಲ್ಲ. ಇತ್ತ ದೇಸಿ ಕ್ರಿಕೆಟ್‌ನಲ್ಲೂ ಅವಕಾಶ ಸಿಗಲಿಲ್ಲ.  ಫಜಲ್ ಮಾತ್ರವಲ್ಲ, ಪಾಕಿಸ್ತಾನ ದೇಸಿ ಕ್ರಿಕೆಟ್ ಆಡುತ್ತಿರುವ ಬಹುತೇಕ ಸಮಸ್ಯೆ.

click me!