ಪಾಕಿಸ್ತಾನ ಕ್ರಿಕೆಟ್ ಮಂಡಳಿ[ಪಿಸಿಬಿ] ತನ್ನ ತವರಿನಲ್ಲಿ ಟಿ20 ಸರಣಿ ಆಡಲು ದಕ್ಷಿಣ ಆಫ್ರಿಕಾ ತಂಡವನ್ನು ಆಹ್ವಾನಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಕರಾಚಿ (ನ.03): 2020ರ ಮಾರ್ಚ್’ನಲ್ಲಿ ಟಿ20 ಸರಣಿ ಆಡುವುದಕ್ಕಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ (ಪಿಸಿಬಿ) ಆಹ್ವಾನಿಸಿದೆ. ವಿಶ್ವ ಟಿ20 ಟೂರ್ನಿ ತಯಾರಿ ನಡೆಸಲು ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಸರಣಿ ಆಯೋಜಿಸಲು ಪಾಕಿಸ್ತಾನ ಮುಂದಾಗಿದೆ.
ಇಂಡೋ-ಪಾಕ್ ಚೊಚ್ಚಲ ಪಂದ್ಯ ನಡೆದದ್ದು, ಗೆದ್ದಿದ್ದು..?
undefined
‘ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ಪಾಕಿಸ್ತಾನಕ್ಕೆ ಮರಳಲಿದೆ. ಪಾಕಿಸ್ತಾನದ ಅವಕಾಶಗಳ ಬಾಗಿಲು ತೆರೆದುಕೊಂಡಿದೆ. ಇತ್ತೀಚೆಗಿನ ಶ್ರೀಲಂಕಾ ವಿರುದ್ಧದ ತವರಿನ ಟಿ20, ಏಕದಿನ ಸರಣಿ ಬಹಳ ನೆರವಾಯಿತು’ ಎಂದು ಪಿಸಿಬಿ ಸಿಇಒ ವಾಸಿಮ್ ಖಾನ್ ತಿಳಿಸಿದರು. ಡಿಸೆಂಬರ್ನಲ್ಲಿ ರಾವಲ್ಪಿಂಡಿ ಹಾಗೂ ಕರಾಚಿಯಲ್ಲಿ ಶ್ರೀಲಂಕಾ 2 ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ ಪಂದ್ಯಗಳನ್ನೂ ಆಡಲಿದೆಯೆಂಬ ಭರವಸೆ ವ್ಯಕ್ತಪಡಿಸಿದರು.
ನಾಯಕತ್ವದಿಂದ ಸರ್ಫರಾಜ್’ಗೆ ಗೇಟ್ ಪಾಸ್ ನೀಡಿದ ಪಾಕ್..!
ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನ ತಂಡವನ್ನು ತವರಿನಲ್ಲೇ ಇತ್ತೀಚೆಗೆ ಶ್ರೀಲಂಕಾ ಮಣಿಸಿ ಗೆಲುವಿನ ನಗೆ ಬೀರಿತ್ತು. ಶ್ರೀಲಂಕಾ ತಂಡವು ಬರೋಬ್ಬರಿ ದಶಕಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡು ಸುರಕ್ಷಿತವಾಗಿ ವಾಪಾಸ್ಸಾಗಿತ್ತು. ಇದೀಗ ಹರಿಣಗಳ ಪಡೆಯನ್ನು ಪಾಕ್ ಕ್ರಿಕೆಟ್ ಮಂಡಳಿ ಆಹ್ವಾನಿಸಿದೆ.