PAK Vs AFG ಪಾಕಿಸ್ತಾನಕ್ಕೆ ರೋಚಕ ಗೆಲುವು, ಆಫ್ಘಾನ್ ಜೊತೆಗೆ ಭಾರತವೂ ಏಷ್ಯಾಕಪ್‌ನಿಂದ ಔಟ್!

By Suvarna NewsFirst Published Sep 7, 2022, 11:03 PM IST
Highlights

ಆಫ್ಘಾನಿಸ್ತಾನ ವಿರುದ್ದದ ಏಷ್ಯಾಕಪ್ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಆಫ್ಘಾನಿಸ್ತಾನ ಹಾಗೂ ಭಾರತ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದೆ.

ದುಬೈ(ಸೆ.07):  ಏಷ್ಯಾಕಪ್ ಟೂರ್ನಿಯಿಂದ ಭಾರತ ಹೊರಬಿದ್ದಿದೆ. ಟೀಂ ಇಂಡಿಯಾದ ಅಂತಿಮ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ. ಪಾಕಿಸ್ತಾನ ವಿರುದ್ಧ ಆಫ್ಘಾನಿಸ್ತಾನ ಗೆಲುವಿಗೆ ಪ್ರಾರ್ಥಿಸಿದ ಅಭಿಮಾನಿಗಳು ನಿರಾಸೆಯಾಗಿದೆ. ಆದರೆ ಪಾಕಿಸ್ತಾನ 1 ವಿಕೆಟ್ ರೋಚಕ ಗೆಲುವಿನೊಂದಿಗೆ ಮೊದಲ ತಂಡವಾಗಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಆಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್ ಗೆಲುವು ದಾಖಲಿಸಿತು. ಸುಲಭ ಟಾರ್ಗೆಟ್ ಪಡೆದರೂ ಪಾಕಿಸ್ತಾನ ಗೆಲುವಿಗಾಗಿ ಕಠಿಣ ಹೋರಾಟ ನಡೆಸಬೇಕಾಯಿತು. ಅಂತಿಮವಾಗಿ ಪಾಕ್ ಗೆಲುವು ಏಷ್ಯಾಕಪ್ ಫೈನಲ್ ಸ್ಥಾನ ಖಚಿತಪಡಿಸಿತು. ಆದರೆ ಪಾಕ್ ವಿರುದ್ಧ ಮುಗ್ಗರಿಸಿದ ಆಫ್ಘಾನಿಸ್ತಾನ ಟೂರ್ನಿಯಿದ ಹೊರಬಿದ್ದಿದೆ. ಇತ್ತ ಭಾರತ ತಂಡ ಆಫ್ಘಾನಿಸ್ತಾನ ವಿರುದ್ದದ ಪಂದ್ಯ ಮುಗಿಸಿ ಬ್ಯಾಗ್ ಪ್ಯಾಕ್ ಮಾಡಲಿದೆ. 

ಪಾಕಿಸ್ತಾನ(Pakistan vs Afhganistan) ಗೆಲುವಿಗೆ 130 ರನ್ ಟಾರ್ಗೆಟ್ ನೀಡಲಾಗಿತ್ತು. ಆದರೆ ಮೊದಲ ಓವರ್‌ನಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಫಕರ್ ಜಮಾನ್ 5 ರನ್ ಸಿಡಿಸಿ ಔಟಾದರು. ಇತ್ತ ಮೊಹಮ್ಮದ್ ರಿಜ್ವಾನ್ 20 ರನ್ ಸಿಡಿಸಿ ನಿರ್ಗಮಿಸಿದರು. 45 ರನ್‌ಗಳಿಗೆ ಪಾಕಿಸ್ತಾನ 3 ಪ್ರಮುಖ ವಿಕೆಟ್ ಕಳೆದುಕೊಂಡಿತು.

Asia cup 2022 ಪಾಕ್ ವಿರುದ್ಧ ಆಫ್ಘಾನ್ ಗೆದ್ದರೆ ಭಾರತಕ್ಕಿದೆಯಾ ಫೈನಲ್ ಅವಕಾಶ?

ಇಫ್ತಿಕರ್ ಅಹಮ್ಮದ್ ಹಾಗೂ ಶದಬ್ ಖಾನ್ ಹೋರಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು. ಇಫ್ತಿಕರ್ ಅಹಮ್ಮದ್ 30 ರನ್ ಸಿಡಿಸಿ ಔಟಾದರು. ಶದಬ್ ಖಾನ್ 36 ರನ್ ಸಿಡಿಸಿ ಔಟಾದರು. ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಶದಬ್ ಹಾಗೂ ಇಫ್ತಿಕರ್ ವಿಕೆಚ್ ಪತನ ಮತ್ತೆ ಪಾಕ್ ತಂಡದಲ್ಲಿ ಆತಂಕ ಹೆಚ್ಚಿಸಿತು. ಶದಬ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತು. ಮೊಹಮ್ಮದ್ ನವಾಜ್ ಕೇವಲ 4 ರನ್ ಸಿಡಿಸಿ ಔಟಾದರು.

ಖುಶ್ದಿಲ್ ಶಾ 1 ರನ್ ಸಿಡಿಸಿ ನಿರ್ಗಮಿಸಿದರು. ಹ್ಯಾರಿಸ್ ರೌಫ್ ಡಕೌಟ್ ಆದರು.  ಆಸಿಫ್ ಆಲಿ 16 ರನ್ ಸಿಡಿಸಿ ಔಟಾದರು. ಪಾಕಿಸ್ತಾನ ಗೆಲುುವಿಗೆ ಅಂತಿಮ 6 ಎಸೆತದಲ್ಲಿ 11 ರನ್ ಅವಶ್ಯಕತೆ ಇತ್ತು. ನಶೀಮ್ ಶಾ ಭರ್ಜರಿ ಸಿಕ್ಸರ್ ಮೂಲಕ ಪಂದ್ಯದ ಗತಿ ಬದಲಿಸಿದರು. ಮರು ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿ ಶಾ ಪಾಕಿಸ್ತಾನಕ್ಕೆ ರೋಚಕ ಗೆಲುವು ತಂದುಕೊಟ್ಟರು. 1 ವಿಕೆಟ್ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ ಫೈನಲ್(Asia cup Final) ಪ್ರವೇಶ ಖಚಿತಪಡಿಸಿದೆ. 

Asia Cup 2022 ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದ ಸುನಿಲ್ ಗವಾಸ್ಕರ್..!

ಆಫ್ಘಾನಿಸ್ತಾನ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಪ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಆಫ್ಘಾನಿಸ್ತಾನ ಕಠಿಣ ಹೋರಾಟ ನಡೆಸಿತ್ತು. ಅಂತಿಮ ಹಂತದಲ್ಲಿ ಪಂದ್ಯ ಸಂಪೂರ್ಣವಾಗಿ ಆಫ್ಘಾನಿಸ್ತಾನ ಕಡೆಗೆ ವಾಲಿತ್ತು. ಆದರೆ ನಸೀಮ್ ಶಾ ಸಿಡಿಸಿದ ಎರಡು ಭರ್ಜರಿ ಸಿಕ್ಸರ್ ಮೂಲಕ ಪಂದ್ಯ ಪಾಕಿಸ್ತಾನ ಕೈವಶವಾಯಿತು. ಆದರೆ ಬಲಿಷ್ಠ ತಂಡವಾಗಿ ಏಷ್ಯಾಕಪ್ ಟೂರ್ನಿಗೆ(Asia cup 2022) ಎಂಟ್ರಿ ಕೊಟ್ಟ ಭಾರತ(Team India) ಕನಿಷ್ಠ ಹೋರಾಟ ನೀಡಿದ ಟೂರ್ನಿಯಿಂದ ಹೊರಬಿದ್ದಿದೆ. 
 

click me!