ಟಿ20 ವಿಶ್ವಕಪ್‌: ಬೌಲಿಂಗ್‌ನಲ್ಲಿ 1 ಸ್ಥಾನ ಮಾತ್ರ ಬಾಕಿ; ತಂಡ ಬಹಿರಂಗ ಪಡಿಸಿದ ಕೊಹ್ಲಿ!

By Web Desk  |  First Published Dec 5, 2019, 7:35 PM IST

2020ರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಬಹುತೇಕ ಅಂತಿಮಗೊಂಡಿದೆ. ಬೌಲಿಂಗ್ ವಿಭಾಗದಲ್ಲಿ 1 ಸ್ಥಾನ ಮಾತ್ರ ಬಾಕಿ ಅನ್ನೋ ಮೂಲಕ ನಾಯಕ ಕೊಹ್ಲಿ ತಂಡದ ವಿವರ ಬಹಿರಂಗ ಪಡಿಸಿದ್ದಾರೆ.


ಹೈದರಾಬಾದ್(ಡಿ.05): ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾ ಹೈದರಾಬಾದ್‌ನಲ್ಲಿ ಸಕಲ ತಯಾರಿ ನಡೆಸಿದೆ. ಡಿಸೆಂಬರ್ 6 ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ.  ಪಂದ್ಯಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಹಾಗೂ ಟೀಂ ಇಂಡಿಯಾ ಕುರಿತ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: INDvWI: ಮೊದಲ ಟಿ20 ಪಂದ್ಯಕ್ಕೆ ಯಾರು ಇನ್? ಯಾರು ಔಟ್? ಸಂಭವನೀಯ ತಂಡ!

Latest Videos

undefined

ಟಿ20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ಭಾರತ ತಂಡ  ತಯಾರಿ ನಡೆಸುತ್ತಿದೆ. ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಕೇವಲ 1 ಸ್ಥಾನ ಮಾತ್ರ ಬಾಕಿ ಉಳಿದಿದೆ  ಎಂದು ಕೊಹ್ಲಿ ತಂಡದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ವಿಶ್ವಕಪ್ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನ ಬಹುತೇಕ ಪಕ್ಕಾ. ಹೀಗಾಗಿ ಇನ್ನೊಂದು ಸ್ಥಾನಕ್ಕೆ ಪೈಪೋಟಿ ಇದೆ ಎಂದು ಕೊಹ್ಲಿ ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೆರಿಬಿಯನ್ನರನ್ನು ಹಣಿಯಲು ಟೀಂ ಇಂಡಿಯಾ ರೆಡಿ

ಬಾಕಿ ಉಳಿದಿರುವ ಒಂದು ಸ್ಥಾನಕ್ಕೆ ಸದ್ಯದ ಪ್ರದರ್ಶನ ಆಧರಿಸಿ ದೀಪಕ್ ಚಹಾರ್ ಆಯ್ಕೆಯಾಗುುದು ಬಹುತೇಕ ಖಚಿತ. ಈಗಾಗಲೇ ಕೊಹ್ಲಿ ಕೂಡ ದೀಪಕ್ ಚಹಾರ್ ಬೌಲಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಸದ್ಯ ಟೀಂ ಇಂಡಿಯಾ ಟಿ20 ತಂಡದ ಪ್ರಮುಖ ವೇಗಿಯಾಗಿ ಗುರಿತಿಸಿಕೊಂಡಿದ್ದಾರೆ. 
 

click me!