ಟೀಕೆ ಮಾಡಿದವರೇ ಈಗ ಹೊಗಳುತ್ತಿದ್ದಾರೆ: ಕೆ ಎಲ್ ರಾಹುಲ್‌

By Kannadaprabha News  |  First Published Dec 29, 2023, 10:50 AM IST

ಈ ಬಗ್ಗೆ ಪಂದ್ಯದ 2ನೇ ದಿನ ಮಾತನಾಡಿದ ಅವರು, ‘ನಾನು ಶತಕ ಸಿಡಿಸಿದ್ದಕ್ಕೆ ಈಗ ಹಲವರು ನನ್ನನ್ನು ಕೊಂಡಾಡುತ್ತಿದ್ದಾರೆ. ಆದರೆ ಇದೇ ಜನ 3-4 ತಿಂಗಳ ಹಿಂದೆ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದರು. ಆದರೆ ಇದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಒಳಿತು’ ಎಂದಿದ್ದಾರೆ.


ಸೆಂಚೂರಿಯನ್‌(ಡಿ29): ದ.ಆಫ್ರಿಕಾ ವಿರುದ್ಧ ಹೋರಾಟದ ಶತಕದ ಮೂಲಕ ನಿರ್ಣಾಯಕ ಘಟ್ಟದಲ್ಲಿ ಭಾರತಕ್ಕೆ ಆಪತ್ಬಾಂಧವರಾಗಿ ಮೂಡಿಬಂದ ಭಾರತದ ತಾರಾ ಬ್ಯಾಟರ್‌ ಕೆ.ಎಲ್‌.ರಾಹುಲ್‌, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಟೀಕೆಗಳನ್ನು ಕಡೆಗಣಿಸಿದ್ದರಿಂದ ಯಶಸ್ಸು ಲಭಿಸಿತು ಎಂದಿದ್ದಾರೆ. 

ಈ ಬಗ್ಗೆ ಪಂದ್ಯದ 2ನೇ ದಿನ ಮಾತನಾಡಿದ ಅವರು, ‘ನಾನು ಶತಕ ಸಿಡಿಸಿದ್ದಕ್ಕೆ ಈಗ ಹಲವರು ನನ್ನನ್ನು ಕೊಂಡಾಡುತ್ತಿದ್ದಾರೆ. ಆದರೆ ಇದೇ ಜನ 3-4 ತಿಂಗಳ ಹಿಂದೆ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದರು. ಆದರೆ ಇದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಒಳಿತು’ ಎಂದಿದ್ದಾರೆ.

Latest Videos

undefined

ಮಾಜಿ ಕ್ರಿಕೆಟಿಗ ರಾಯುಡು ರಾಜಕೀಯ ಇನ್ನಿಂಗ್ಸ್‌ ಶುರು

ವಿಜಯವಾಡ: ಭಾರತದ ಮಾಜಿ ಕ್ರಿಕೆಟಿಗ ಅಂಬಡಿ ರಾಯುಡು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2023ರ ಐಪಿಎಲ್‌ ಬಳಿಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ 37 ವರ್ಷದ ರಾಯುಡು ಗುರುವಾರ ಅಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರು ರಾಜಕೀಯ ಪ್ರವೇಶಿಸುವುದಾಗಿ ಕಳೆದ ಜೂನ್‌ನಲ್ಲೇ ಘೋಷಿಸಿದ್ದರು.

Aus vs Pak: ರೋಚಕ ಘಟ್ಟದತ್ತ ಆಸೀಸ್-ಪಾಕ್ ಎರಡನೇ ಟೆಸ್ಟ್

ಆಫ್ರಿಕಾದಲ್ಲಿ ಅತಿಹೆಚ್ಚು ರನ್‌: ಸಚಿನ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ ಅವರು ಸಚಿನ್‌ ತೆಂಡುಲ್ಕರ್‌ರ ಮತ್ತೊಂದು ದಾಖಲೆ ಮುರಿದಿದ್ದಾರೆ. ಅವರು ದ.ಆಫ್ರಿಕಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್‌ ಆಫ್ರಿಕಾದಲ್ಲಿ 29 ಪಂದ್ಯಗಳಲ್ಲಿ 5 ಶತಕಗಳೊಂದಿಗೆ 1750 ರನ್‌ ಕಲೆಹಾಕಿದ್ದಾರೆ. ಸಚಿನ್‌ 38 ಪಂದ್ಯಗಳಲ್ಲಿ 6 ಸೆಂಚುರಿ ಸಹಿತ 1724 ರನ್‌ ಸಿಡಿಸಿದ್ದರು. ರಾಹುಲ್‌ ದ್ರಾವಿಡ್ 1136 ರನ್‌ ಗಳಿಸಿದ್ದಾರೆ.

ಲಕ್ಷ್ಮಣ್‌ರನ್ನು ಹಿಂದಿಕ್ಕಿದ ರನ್‌ ಮೆಷಿನ್‌ ವಿರಾಟ್‌!

ಏಕಾಂಗಿ ಹೋರಾಟ ನಡೆಸಿ 76 ರನ್‌ ಸಿಡಿಸಿದ ವಿರಾಟ್‌ ಕೊಹ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಭಾರತೀಯರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು. ಕೊಹ್ಲಿ ಸದ್ಯ 189 ಇನ್ನಿಂಗ್ಸ್‌ಗಳಲ್ಲಿ 8790 ರನ್‌ ಗಳಿಸಿದ್ದಾರೆ. ಇದರೊಂದಿಗೆ ವಿವಿಎಸ್‌ ಲಕ್ಷ್ಮಣ್‌(8781) 5ನೇ ಸ್ಥಾನಕ್ಕೆ ಜಾರಿದರು. ಸಚಿನ್‌ 15921 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ರಾಹುಲ್‌ ದ್ರಾವಿಡ್‌(13265), ಸುನಿಲ್‌ ಗವಾಸ್ಕರ್‌(10122) ನಂತರದ 2 ಸ್ಥಾನಗಳಲ್ಲಿದ್ದಾರೆ.

ಪಂದ್ಯದ ನಡುವೆ ಜೋಡಿ ಮೇಲೆ ಕ್ಯಾಮೆರಾ ಕಣ್ಮು, ಮರುಕ್ಷಣದಲ್ಲೇ ಜಾಗ ಖಾಲಿ ಮಾಡಿದ ಕಪಲ್!

13 ವರ್ಷದ ಬಳಿಕ ಇನ್ನಿಂಗ್ಸ್‌ ಸೋಲು

3 ದಶಕದಿಂದಲೂ ಗೆಲ್ಲಲಾಗದ ಟೆಸ್ಟ್‌ ಸರಣಿಯನ್ನು ಈ ಬಾರಿಯಾದರೂ ಪಡೆದೇ ತೀರುತ್ತೇವೆ ಎಂದು ದ.ಆಫ್ರಿಕಾಕ್ಕೆ ವಿಮಾನವೇರಿದ್ದ ಟೀಂ ಇಂಡಿಯಾ, ಸರಣಿ ಶುರುವಾದ 3ನೇ ದಿನಕ್ಕೇ ತನ್ನ ಕನಸಿಗೆ ಎಳ್ಳು ನೀರು ಬಿಟ್ಟಿದೆ. ಹರಿಣಗಳ ವಿರುದ್ಧದ 2 ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಗುರುವಾರ ಇನ್ನಿಂಗ್ಸ್‌ ಹಾಗೂ 32 ರನ್‌ಗಳ ಹೀನಾಯ ಸೋಲು ಎದುರಾಯಿತು. ಇದರೊಂದಿಗೆ 1-0 ಮುನ್ನಡೆ ಸಾಧಿಸಿದ ಆಫ್ರಿಕಾ, ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಭಾರತಕ್ಕೆ ದ.ಆಫ್ರಿಕಾ ವಿರುದ್ಧ 13 ವರ್ಷಗಳ ಬಳಿಕ ಮತ್ತೊಮ್ಮೆ ಇನ್ನಿಂಗ್ಸ್‌ ಸೋಲು ಎದುರಾಯಿತು. ಕೊನೆ ಬಾರಿ ಭಾರತ 2010ರಲ್ಲಿ ಈ ಮುಖಭಂಗಕ್ಕೊಳಗಾಗಿತ್ತು. ಸೆಂಚೂರಿಯನ್‌ನಲ್ಲೇ ನಡೆದಿದ್ದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 25 ರನ್‌ಗಳಿಂದ ಪರಾಭವಗೊಂಡಿತ್ತು.

01ನೇ ಬಾರಿ: ರೋಹಿತ್‌ ನಾಯಕತ್ವದಲ್ಲಿ ಭಾರತ ಮೊದಲ ಬಾರಿ ಇನ್ನಿಂಗ್ಸ್‌ ಸೋಲನುಭವಿಸಿತು. ಅವರ ನಾಯಕತ್ವದಲ್ಲಿ ಭಾರತ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 2 ಡ್ರಾಗೊಂಡರೆ, 3 ಪಂದ್ಯ ಸೋತಿದೆ.

click me!