Aus vs Pak: ರೋಚಕ ಘಟ್ಟದತ್ತ ಆಸೀಸ್-ಪಾಕ್ ಎರಡನೇ ಟೆಸ್ಟ್

By Naveen KodaseFirst Published Dec 29, 2023, 9:38 AM IST
Highlights

ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಅಬ್ದುಲ್ಲಾ ಶಫೀಕ್(4) ಹಾಗೂ ಇಮಾಮ್ ಉಲ್ ಹಕ್(12) ಆರಂಭದಲ್ಲೇ ವಿಕೆಟ್ ಕೈಚೆಲ್ಲಿದರು. ಆದರೆ ನಾಯಕ ಶಾನ್ ಮಸೂದ್‌ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದರು.

ಮೆಲ್ಬರ್ನ್‌(ಡಿ.29): ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಎರಡನೇ  ಟೆಸ್ಟ್‌ ರೋಚಕ ಘಟ್ಟದತ್ತ ಸಾಗುತ್ತಿದ್ದು, ಗೆಲ್ಲಲು 317 ರನ್ ಗುರಿ ಪಡೆದಿರುವ ಪಾಕಿಸ್ತಾನ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಎರಡನೇ ಇನಿಂಗ್ಸ್‌ ಆರಂಭಿಸಿರು ಪಾಕಿಸ್ತಾನ ತಂಡವು ಮೊದಲ 30 ಓವರ್ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 121 ರನ್ ಬಾರಿಸಿದ್ದು ಇನ್ನು ಗೆಲ್ಲಲು 196 ರನ್ ಗಳಿಸಬೇಕಿದೆ.

ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಅಬ್ದುಲ್ಲಾ ಶಫೀಕ್(4) ಹಾಗೂ ಇಮಾಮ್ ಉಲ್ ಹಕ್(12) ಆರಂಭದಲ್ಲೇ ವಿಕೆಟ್ ಕೈಚೆಲ್ಲಿದರು. ಆದರೆ ನಾಯಕ ಶಾನ್ ಮಸೂದ್‌ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿದರು. ಶಾನ್ ಮಸೂದ್‌ 71 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 7 ಬೌಂಡರಿ ಸಹಿತ 60 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ ಬಾಬರ್ ಅಜಂ 30 ರನ್ ಹಾಗೂ ಸೌದ್ ಶಕೀಲ್ 8 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಬರ್ಗರ್‌ ದಾಳಿಗೆ ಬೆಂಡಾದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಸೋಲು!

ಇದಕ್ಕೂ ಮೊದಲು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 16 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಿಚೆಲ್ ಮಾರ್ಷ್‌ 96 ಹಾಗೂ ಸ್ಟೀವ್ ಸ್ಮಿತ್ 50 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ 53 ರನ್ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಆಸೀಸ್‌ 262 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಕಾಂಗರೂ ಪಡೆ ಪಾಕಿಸ್ತಾನಕ್ಕೆ 317 ರನ್ ಗುರಿ ನೀಡಿದೆ

3ನೇ ಅಂಪೈರ್‌ ಲಿಫ್ಟ್‌ನಲ್ಲಿ ಬಾಕಿ: ಪಾಕ್‌-ಆಸೀಸ್‌ 2ನೇ ಅವಧಿಯ ಆಟ ವಿಳಂಬ!

ಮೆಲ್ಬರ್ನ್‌: 3ನೇ ಅಂಪೈರ್‌ ಕ್ರೀಡಾಂಗಣದ ಲಿಫ್ಟ್‌ನಲ್ಲಿ ಬಾಕಿಯಾದ ಕಾರಣ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ 2ನೇ ಟೆಸ್ಟ್‌ ಪಂದ್ಯದ 2ನೇ ಅವಧಿ ವಿಳಂಬವಾಗಿ ಆರಂಭಗೊಂಡ ಪ್ರಸಂಗ ಗುರುವಾರ ನಡೆಯಿತು. ಊಟದ ವಿರಾಮದ ಬಳಿಕ ಆಟಗಾರರು, ಅಂಪೈರ್‌ಗಳು ಸರಿಯಾದ ಸಮಯಕ್ಕೆ ಮೈದಾನಕ್ಕೆ ಆಗಮಿಸಿದರೂ, 3ನೇ ಅಂಪೈರ್‌ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ತಮ್ಮ ಆಸನದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರು ಲಿಫ್ಟ್‌ನಲ್ಲಿ ಬಾಕಿಯಾದ ಕಾರಣ ಪಂದ್ಯ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿಲ್ಲ. 10 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಬಾಕಿಯಾಗಿದ್ದ ಇಲ್ಲಿಂಗ್‌ವರ್ಥ್‌, ಕ್ರೀಡಾಂಗಣಕ್ಕೆ ಆಗಮಿಸಿದ ಬಳಿಕ ಪಂದ್ಯ ಆರಂಭಗೊಂಡಿತು.

ಈ ಎರಡು ಕ್ವಾಲಿಟಿ ಇರೋ ಹುಡುಗನನ್ನೇ ಮದುವೆಯಾಗೋದಂತೆ ನ್ಯಾಷನಲ್ ಕ್ರಶ್ ಸ್ಮೃತಿ ಮಂಧನಾ..!

ಟಿ20: ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸೋಲಿನ ಶಾಕ್‌

ನೇಪಿಯರ್‌: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ 5 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 9 ವಿಕೆಟ್‌ಗೆ ಕೇವಲ 134 ರನ್‌ ಕಲೆಹಾಕಿತು. ನೀಶಮ್‌(29 ಎಸೆತದಲ್ಲಿ 48) ಏಕಾಂಗಿ ಹೋರಾಟದಿಂದಾಗಿ ತಂಡ 130ರ ಗಡಿ ದಾಟಿತು. ಸುಲಭ ಗುರಿಯನ್ನು ಬಾಂಗ್ಲಾ 18.4 ಓವರ್‌ಗಳಲ್ಲಿ ಬೆನ್ನತ್ತಿ ಜಯಿಸಿತು. ಲಿಟನ್‌ ದಾಸ್‌ 42 ರನ್‌ ಗಳಿಸಿದರು.
 

click me!