ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಶುಕ್ರವಾರ ಟೀಮ್ ಇಂಡಿಯಾ ನೆಟ್ಸ್ ಅಭ್ಯಾಸಕ್ಕೆ ಇಳಿದ ಚಿತ್ರಗಳು ವೈರಲ್ ಆಗಿವೆ. ಸಾಮಾನ್ಯವಾಗಿ ನೀಲಿ ಬಣ್ಣದ ಜೆರ್ಸಿ ಧರಿಸುವ ಟೀಮ್ ಇಂಡಿಯಾ, ಈ ಬಾರಿ ಅಭ್ಯಾಸಕ್ಕೆ ಕೇಸರಿ ಬಣ್ಣದ ಕಿಟ್ ಧರಿಸಿತ್ತು.
ಚೆನ್ನೈ (ಅ.6): ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಟೂರ್ನಿಗೆ ತನ್ನ ಅಭ್ಯಾಸ ಆರಂಭಿಸಿದೆ. ಅಕ್ಟೋಬರ್ 8 ರಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಇದಕ್ಕಾಗಿ ಭಾರತ ತಂಡ ಶುಕ್ರವಾರ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿತು. ಇದರ ಬೆನ್ನಲ್ಲಿಯೇ ಟೀಮ್ ಇಂಡಿಯಾದ ಅಭ್ಯಾಸ ಅವಧಿಯ ಚಿತ್ರಗಳು ವೈರಲ್ ಆಗಿವೆ. ಅದಕ್ಕೆ ಕಾರಣ, ವೈಬ್ರೆಂಟ್ ಕೇಸರಿ ಬಣ್ಣವನ್ನು ಟೀಮ್ ಇಂಡಿಯಾ ತನ್ನ ಅಭ್ಯಾಸದ ಕಿಟ್ ಆಗಿ ಬಳಸಿಕೊಂಡಿದೆ. ಸಾಮಾನ್ಯವಾಗಿ ಟೀಮ್ ಇಂಡಿಯಾ ಅಭ್ಯಾಸ ಸಮಯದಲ್ಲೂ ನೀಲಿ ಬಣ್ಣದ ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಹಿಂದೊಮ್ಮೆ ನೇರಳೆ ಬಣ್ಣವನ್ನು ಕೂಡ ಟೀಮ್ ಇಂಡಿಯಾ ಬಳಸಿದ ಇತಿಹಾಸವಿದೆ. ಆದರೆ, ವಿಶ್ವಕಪ್ ವೇದಿಕೆಯಲ್ಲಿ ಕೇಸರಿ ಬಣ್ಣದ ಪ್ರ್ಯಾಕ್ಟೀಸ್ ಜೆರ್ಸಿ ಬಳಸಿರುವುದು ಬಹಳ ಅಪರೂಪ. ಇನ್ನು ಟೀಮ್ ಇಂಡಿಯಾ ಕೇಸರಿ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಂಡ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗಿದೆ. ಕಣ್ಣುಕುಕ್ಕುವ ಕೇಸರಿ ಜರ್ಸಿಯನ್ನು ಧರಿಸಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಅವಧಿಯಲ್ಲಿ ಪಾಲ್ಗೊಂಡ ತಕ್ಷಣವೇ ಇದರ ಚಿತ್ರಗಳು ವೈರಲ್ ಆಗಿವೆ. ಹೆಚ್ಚಿನವರು ಟೀಮ್ ಇಂಡಿಯಾ ಆಟಗಾರರು ಸ್ವಿಗ್ಗಿ ಡೆಲಿವರಿ ಬಾಯ್ ರೀತಿ ಕಾಣುತ್ತಿದ್ದಾರೆ ಎಂದು ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ. ಫುಡ್ ಅಗ್ರಿಗೇಟರ್ ಆಪ್ ಆಗಿರುವ ಸ್ವಿಗ್ಗಿಯ ಡೆಲಿವರಿ ಬಾಯ್‌ಗಳು ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿರುತ್ತಾರೆ.
ದೇಶ ಪ್ರಖ್ಯಾತ ಫುಡ್ ಡೆಲಿವರಿ ಆಪ್‌ಗಳಲ್ಲಿ ಒಂದಾಗಿರುವ ಸ್ವಿಗ್ಗಿ ಕೂಡ ಈ ಕುರಿತಾದ ಚರ್ಚೆಯಿಂದ ಹೊರಗುಳಿಯಲಿಲ್ಲ. ಟೀಮ್ ಇಂಡಿಯಾ ಆಟಗಾರರು ಅಭ್ಯಾಸದ ಸಮಯದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ರೀತಿ ಕಾಣುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಸಮಯದಲ್ಲಿಯೇ ತಮಾಷೆಯಾಗಿ ಟ್ವೀಟ್ ಮಾಡಿದ ಸ್ವಿಗ್ಗಿ, 'ಕೇಸರಿ ಬಣ್ಣದ ಜೆರ್ಸಿ ಧರಿಸಿರುವ ನಮ್ಮ ಬಾಯ್ಸ್ ವಿಶ್ವಕಪ್ ಡೆಲಿವರಿ ಮಾಡಲು ರೆಡಿಯಾಗಿದ್ದಾರೆ' ಎಂದು ಟ್ವೀಟ್ ಮಾಡಿದೆ. ಸ್ವಿಗ್ಗಿಯ ಈ ತಮಾಷೆಯ ಟ್ವೀಟ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಸಿದ್ದತೆಯ ಎಕ್ಸೈಟ್‌ಮೆಂಟ್‌ಅನ್ನು ಹೆಚ್ಚಿಸಿದೆ.
ಆನ್‌ಲೈನ್ ಫುಡ್ ಡೆಲಿವರಿ ವೇದಿಕೆಯ ತಮಾಷೆಯ ಹಾಗೂ ಅಷ್ಟೇ ಪರಿಣಾಮಕಾರಿಯ ಪ್ರತಿಕ್ರಿಯೆಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಮಾರ್ಕೆಟಿಂಗ್ ಮಾಡಲು ಸಿಗುವ ಒಂದು ಸಣ್ಣ ಅವಕಾಶವನ್ನೂ ಸ್ವಿಗ್ಗಿ ತಪ್ಪಿಸೋದಿಲ್ಲ ಹಾಗೂ ಯಾರಿಗೂ ನಿರಾಸೆಯನ್ನೂ ಮಾಡೋದಿಲ್ಲ' ಎಂದು ಬರೆದುಕೊಂಡಿದ್ದಾರೆ. ಇನ್ನು ಸ್ವಿಗ್ಗಿಯ ಈ ಟ್ವೀಟ್‌ಗೆ ಪ್ರತಿಕ್ರಿಯೆ ಮಾಡಿರುವ ಇನ್ನೊಬ್ಬರು, 'ಮುಂದಿನ 45 ದಿನಗಳಲ್ಲಿ ಈ ಡೆಲಿವರಿಯನ್ನು ನೀವು ಮಾಡಬೇಕು' ಎಂದು ಬರೆದಿದ್ದಾರೆ. ಹೆಚ್ಚೂ ಕಡಿಮೆ ಟೀಮ್ ಇಂಡಿಯಾ ಆಟಗಾರರು ಸ್ವಿಗ್ಗಿ ಡೆಲಿವರಿ ಬಾಯ್ ರೀತಿಯೇ ಕಾಣುತ್ತಿದ್ದಾರೆ ಎಂದು ಬರೆದಿದ್ದಾರೆ.
World Cup 2023: ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ
ಹೆಚ್ಚಿವರು ಟೀಮ್ ಇಂಡಿಯಾದ ಹೊಸ ಪ್ರ್ಯಾಕ್ಟೀಸ್ ಕಿಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಟೀಮ್ ಇಂಡಿಯಾ ನೀಲಿ ಬಣ್ಣದ ಜೆರ್ಸಿಯಲ್ಲಿ ಅಭ್ಯಾಸದಲ್ಲಿ ಕಾಣುತ್ತಿತ್ತು. ಟೀಮ್ ಇಂಡಿಯಾದ ಜೆರ್ಸಿಯನ್ನು ಸ್ವಿಗ್ಗಿ ಡಿಸೈನ್ ಮಾಡಿದ್ದಕ್ಕೆ ಬಹಳ ಖುಷಿಯಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗಳು ಝೋಮೋಟೋಗೆ ಸಂದರ್ಶನಕ್ಕೆ ಹೋಗುತ್ತಿರುವಂತೆ ಕಾಣುತ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
undefined
ಪಾಕಿಸ್ತಾನದ ಕ್ರಿಕೆಟಿಗ ರಮೀಜ್ ರಾಜಾಗೆ ದೀಪಿಕಾ ಪಡುಕೋಣೆ ಫೇವರೇಟ್ ಅಂತೆ!