ಐಪಿಎಲ್‌ನಲ್ಲಿ ಮರೀಚಿಕೆಯಾದ ಸೂಪರ್ ಓವರ್..! ಎರಡು ವರ್ಷದಿಂದ ಒಂದೂ ನಡೆದಿಲ್ಲ ಸೂಪರ್ ಓವರ್..!

By Suvarna News  |  First Published Apr 20, 2024, 1:43 PM IST

ಟಿ20 ಪಂದ್ಯ ಟೈ ಆದ್ರೆ ಫಲಿತಾಂಶಕ್ಕಾಗಿ ನಡೆಸುವುದೇ ಸೂಪರ್ ಓವರ್. ಸೂಪರ್ ಓವರ್ ಟೈ ಆದ್ರೂ ಮತ್ತೆ ರಿಸಲ್ಟ್ ಬರುವವರೆಗೂ ಸೂಪರ್ ಓವರ್ ನಡೆಯುತ್ತಲೇ ಇರುತ್ತೆ. ಟಿ20 ಕ್ರಿಕೆಟ್‌ನ ಕಿಕ್ ಹೆಚ್ಚಿಸಿದ್ದೇ ಇಂತಹ ಸೂಪರ್ ಓವರ್ ಪಂದ್ಯಗಳು. ಮ್ಯಾಚ್ ಟೈ ಆಗ್ಲಿ ಅಂತ ಫ್ಯಾನ್ಸ್ ಸಹ ಬೇಡಿಕೊಳ್ಳುತ್ತಿದ್ದರು. ಕಾರಣ ಸೂಪರ್ ಓವರ್. ಆ ಒಂದು ಓವರ್, ಪಂದ್ಯದ ಥ್ರಿಲ್ ಅನ್ನ ದುಪ್ಪಟ್ಟು ಮಾಡಿ ಬಿಡುತ್ತೆ.


ಬೆಂಗಳೂರು(ಏ.20): ಟಿ20 ಪಂದ್ಯದ ಕಿಕ್ ಏರಿಸೋದು ಬೌಂಡರಿ-ಸಿಕ್ಸರ್‌ಗಳಿಂದಲ್ಲ. ಬದಲಿಗೆ ಟೈ ಪಂದ್ಯಗಳು. ಮ್ಯಾಚ್ ಟೈ ಆದ್ರೆ ಸಾಕು ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟುತ್ತೆ. ಕಾರಣ ಸೂಪರ್ ಓವರ್. ಐಪಿಎಲ್ ಸಹ ಸಾಕಷ್ಟು ಸೂಪರ್ ಓವರ್ ಪಂದ್ಯಗಳನ್ನ ಕಂಡಿದೆ. ಆದ್ರೆ ಎರಡು ವರ್ಷದಿಂದ ಮಾತ್ರ ಒಂದೇ ಒಂದು ಸೂಪರ್ ಓವರ್ ಮ್ಯಾಚ್ ನೋಡಲು ಸಾಧ್ಯವಾಗಿಲ್ಲ.

ಐಪಿಎಲ್‌ನಲ್ಲಿ ಮರೀಚಿಕೆಯಾಗಿವೆ ಸೂಪರ್ ಓವರ್..!

Tap to resize

Latest Videos

ಟಿ20 ಪಂದ್ಯ ಟೈ ಆದ್ರೆ ಫಲಿತಾಂಶಕ್ಕಾಗಿ ನಡೆಸುವುದೇ ಸೂಪರ್ ಓವರ್. ಸೂಪರ್ ಓವರ್ ಟೈ ಆದ್ರೂ ಮತ್ತೆ ರಿಸಲ್ಟ್ ಬರುವವರೆಗೂ ಸೂಪರ್ ಓವರ್ ನಡೆಯುತ್ತಲೇ ಇರುತ್ತೆ. ಟಿ20 ಕ್ರಿಕೆಟ್‌ನ ಕಿಕ್ ಹೆಚ್ಚಿಸಿದ್ದೇ ಇಂತಹ ಸೂಪರ್ ಓವರ್ ಪಂದ್ಯಗಳು. ಮ್ಯಾಚ್ ಟೈ ಆಗ್ಲಿ ಅಂತ ಫ್ಯಾನ್ಸ್ ಸಹ ಬೇಡಿಕೊಳ್ಳುತ್ತಿದ್ದರು. ಕಾರಣ ಸೂಪರ್ ಓವರ್. ಆ ಒಂದು ಓವರ್, ಪಂದ್ಯದ ಥ್ರಿಲ್ ಅನ್ನ ದುಪ್ಪಟ್ಟು ಮಾಡಿ ಬಿಡುತ್ತೆ.

IPL 2024 ಸನ್‌ರೈಸರ್ಸ್‌ ಹೈದರಾಬಾದ್ ಆರ್ಭಟಕ್ಕೆ ಬ್ರೇಕ್‌ ಹಾಕುತ್ತಾ ಡೆಲ್ಲಿ ಕ್ಯಾಪಿಟಲ್ಸ್?

IPLನಲ್ಲಿ ಇದುವರೆಗೂ 14 ಸೂಪರ್ ಓವರ್ ಪಂದ್ಯಗಳು ನಡೆದಿವೆ. 2009 ಮೊದಲ ಬಾರಿ ಸೂಪರ್ ಓವರ್ ಪಂದ್ಯ ನಡೆದರೆ, 2020ರಲ್ಲಿ ಐದು ಸೂಪರ್ ಓವರ್ ಫೈಟ್ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿತ್ತು. ಆದ್ರೆ ಕಳೆದ 3 ವರ್ಷಗಳಿಂದ IPLನಲ್ಲಿ ಸೂಪರ್ ಓವರ್ ಪೈಪೋಟಿ ಕಂಡು ಬಂದಿಲ್ಲ.

ಈ ಸಲದ IPL ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಇದುವರೆಗೆ ನಡೆದಿರುವ 34 ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ 287 ರನ್ ಬಾರಿಸಿ ಹೊಸ ದಾಖಲೆ ಬರೆದರೆ, ಗುಜರಾತ್ ಟೈಟಾನ್ಸ್ 89 ರನ್ ಗಳಿಸಿ, ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಇನ್ನು ಕೊಲ್ಕತಾ ನೈಟ್ ರೈಡರ್ಸ್ ನೀಡಿದ 224 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲ್ಲೋ ಮೂಲಕ ರಾಜಸ್ಥಾನ ರಾಯಲ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಇದಾಗ್ಯೂ ಇದುವರೆಗೆ ಯಾವುದೇ ಮ್ಯಾಚ್ ಸೂಪರ್ ಓವರ್‌ನತ್ತ ಸಾಗಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್ನಲ್ಲಿ ಸೂಪರ್ ಓವರ್ ಪೈಪೋಟಿ ಕಂಡು ಬಂದು ಮೂರು ವರ್ಷಗಳೇ ಕಳೆದಿದೆ.

ಪಂಜಾಬ್ ಮೇಲೆ ಮೋಸ ಮಾಡಿ ಪಂದ್ಯ ಗೆಲ್ತಾ ಮುಂಬೈ ಇಂಡಿಯನ್ಸ್..? ಮೈದಾನದಲ್ಲೇ ಕರ್ರನ್ ಅಸಮಾಧಾನ

2021ರ ಬಳಿಕ ಐಪಿಎಲ್‌ನಲ್ಲಿ ನಡೆದಿಲ್ಲ ಸೂಪರ್ ಓವರ್..!

ಕೊನೆಯ ಬಾರಿ ಐಪಿಎಲ್‌ನಲ್ಲಿ ಸೂಪರ್ ಓವರ್ ನಡೆದಿದ್ದು 2021ರಲ್ಲಿ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ನಡುವೆ ಸೂಪರ್ ಓವರ್ ನಡೆದ ಬಳಿಕ ಯಾವುದೇ ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿಲ್ಲ. ಇದರ ನಡುವೆ 200ಕ್ಕಿಂತ ಹೆಚ್ಚು ಐಪಿಎಲ್ ಪಂದ್ಯಗಳು ನಡೆದಿವೆ. ಆದರೆ ಐಪಿಎಲ್‌ನಲ್ಲಿ 6 ಎಸೆತಗಳ ರಣರೋಚಕ ಓವರ್ ವೀಕ್ಷಿಸುವ ಅವಕಾಶ ಮಾತ್ರ ಅಭಿಮಾನಿಗಳಿಗೆ ಸಿಕ್ಕಿಲ್ಲ.

2020ರಲ್ಲಿ 5 ಸೂಪರ್ ಓವರ್ ಪೈಪೋಟಿ ನಡೆದಿದ್ದವು. ಆದರೆ ಇದಾದ ಬಳಿಕ ಕೇವಲ ಒಮ್ಮೆ ಮಾತ್ರ 6 ಎಸೆತಗಳ ಪಂದ್ಯ ನಡೆದಿದೆ. ಈ ಬಾರಿ ಕೂಡ ಹಲವು ಪಂದ್ಯಗಳು ಕೊನೆಯ ಎಸೆತದವರೆಗೆ ಸಾಗಿದರೂ ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿಲ್ಲ ಎಂಬುದು ವಿಶೇಷ. ಹೀಗಾಗಿಯೇ ಸೂಪರ್ ಓವರ್ ಪೈಪೋಟಿಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಎದುರು ನೋಡುವಿಕೆ ಕಳೆದ ಮೂರು ಸೀಸನ್‌ಗಳಿಂದ ಚಾಲ್ತಿಯಲ್ಲಿದ್ದು, ಈ ಬಾರಿಯಾದರೂ ಸೂಪರ್ ಓವರ್ ಫೈಟ್ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!