ಆಟಗಾರರಿಗೆ ಸೂಕ್ತವಲ್ಲ: ಇಂಪ್ಯಾಕ್ಟ್‌ ನಿಯಯಕ್ಕೆ ರಿಕಿ ಪಾಂಟಿಂಗ್‌ ಆಕ್ಷೇಪ..!

Published : Apr 20, 2024, 10:44 AM IST
ಆಟಗಾರರಿಗೆ ಸೂಕ್ತವಲ್ಲ: ಇಂಪ್ಯಾಕ್ಟ್‌ ನಿಯಯಕ್ಕೆ ರಿಕಿ ಪಾಂಟಿಂಗ್‌ ಆಕ್ಷೇಪ..!

ಸಾರಾಂಶ

‘ಇಂಪ್ಯಾಕ್ಟ್‌ ನಿಯಮದ ಬಗ್ಗೆ ರೋಹಿತ್ ಮಾತನಾಡಿದ್ದು ಗಮನಿಸಿದ್ದೇನೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡದ ಉದಾಹರಣೆಗಳನ್ನು ರೋಹಿತ್ ನೀಡಿದ್ದಾರೆ. ಇಂಪ್ಯಾಕ್ಟ್‌ ನಿಯಮ ಆಲ್ರೌಂಡರ್‌ಗಳನ್ನು ಪಂದ್ಯದಿಂದ ಹೊರಗಿಡುತ್ತಿದೆ. ಆದರೆ ಇದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ಹೀಗಾಗಿ ಏನೂ ಮಾಡಲಾಗದು’ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಐಪಿಎಲ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್‌ ಆಟಗಾರ ನಿಯಮದ ಬಗ್ಗೆ ರೋಹಿತ್‌ ಶರ್ಮಾ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ರಿಕಿ ಪಾಂಟಿಂಗ್‌ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ವೀಕ್ಷಕರಿಗೆ ಮನರಂಜನೆ ಒದಗಿಸಬಹುದು. ಆದರೆ ಕೋಚ್‌ಗಳು ಹಾಗೂ ಆಟಗಾರರಿಗೆ ಸೂಕ್ತವಲ್ಲ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇಂಪ್ಯಾಕ್ಟ್‌ ನಿಯಮದ ಬಗ್ಗೆ ರೋಹಿತ್ ಮಾತನಾಡಿದ್ದು ಗಮನಿಸಿದ್ದೇನೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡದ ಉದಾಹರಣೆಗಳನ್ನು ರೋಹಿತ್ ನೀಡಿದ್ದಾರೆ. ಇಂಪ್ಯಾಕ್ಟ್‌ ನಿಯಮ ಆಲ್ರೌಂಡರ್‌ಗಳನ್ನು ಪಂದ್ಯದಿಂದ ಹೊರಗಿಡುತ್ತಿದೆ. ಆದರೆ ಇದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ಹೀಗಾಗಿ ಏನೂ ಮಾಡಲಾಗದು’ ಎಂದು ಅವರು ಹೇಳಿದ್ದಾರೆ.

IPL 2024: ಚೆನ್ನೈ ಸೂಪರ್ ಕಿಂಗ್ಸ್ ಬಗ್ಗುಬಡಿದು ಗೆಲುವಿನ ಹಳಿಗೆ ಮರಳಿದ ಲಖನೌ ಸೂಪರ್ ಜೈಂಟ್ಸ್‌

ಬುಧವಾರ ಇಂಪ್ಯಾಕ್ಟ್‌ ನಿಯಮದ ಬಗ್ಗೆ ರೋಹಿತ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಈ ಆಟಗಾರ ನಿಯಮದ ಬಗ್ಗೆ ನನಗೆ ಸಂತೃಪ್ತಿಯಿಲ್ಲ. ಇದು ಮನರಂಜನೆ ಒದಗಿಸಬಹುದು. ಆದರೆ ಭಾರತೀಯ ಕ್ರಿಕೆಟ್‌ಗೆ ಇದರಿಂದ ನಷ್ಟವಾಗಲಿದೆ. ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್‌ಗಳಿಗೆ ಬೌಲಿಂಗ್‌ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ನಿಧಾನ ಬೌಲಿಂಗ್‌: ಮುಂಬೈ ನಾಯಕ ಹಾರ್ದಿಕ್‌ಗೆ ದಂಡ

ಮುಲ್ಲಾನ್‌ಪುರ: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಮುಂಬೈ 9 ರನ್‌ ರೋಚಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ಏ.22ರಂದು ರಾಜಸ್ಥಾನ ವಿರುದ್ಧ ಸೆಣಸಾಡಲಿದೆ.

ಐಪಿಎಲ್ ಪ್ಲೇ ಆಫ್‌ಗೆ ಎಂಟ್ರಿ ನೀಡೋ ನಾಲ್ಕು ತಂಡಗಳು ಯಾವುವು..?

ವಿಶ್ವಕಪ್‌ನಲ್ಲಿ ಆಡುವಂತೆ ಮನವೊಲಿಕೆ ಮಾಡುತ್ತಿದ್ರೂ ಒಪ್ಪುತ್ತಿಲ್ಲ ಸುನಿಲ್‌ ನರೈನ್‌!

ಕೋಲ್ಕತಾ: ಐಪಿಎಲ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿರುವ ಸುನಿಲ್‌ ನರೈನ್‌ರನ್ನು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡಿಸಲು ವೆಸ್ಟ್‌ಇಂಡೀಸ್‌ ತಂಡದ ನಾಯಕ ರೋವ್ಮನ್‌ ಪೊವೆಲ್‌ ಮನವೊಲಿಸುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿದು ಟಿ20 ಲೀಗ್‌ಗಳ ಮೇಲೆ ಹೆಚ್ಚಿನ ಒಲವು ಹೊಂದಿರುವ ನರೈನ್‌ ಮನವೊಲಿಕೆಗೂ ಒಪ್ಪುತ್ತಿಲ್ಲ ಎಂದು ಗೊತ್ತಾಗಿದೆ. 

ಈ ಬಗ್ಗೆ ಪೋವೆಲ್‌ ಮಾತನಾಡಿದ್ದು, ‘ನರೈನ್‌ರ ಮನವೊಲಿಸಲು ಕಳೆದ 12 ತಿಂಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಒಪ್ಪುತ್ತಿಲ್ಲ. ಪೊಲ್ಲಾರ್ಡ್‌, ಬ್ರಾವೋ, ಪೂರನ್‌ ಮೂಲಕವೂ ಪ್ರಯತ್ನಿಸುತ್ತಿದ್ದೇನೆ’ ಎಂದಿದ್ದಾರೆ. ನರೈನ್‌ 2019ರಲ್ಲಿ ವಿಂಡೀಸ್‌ ಪರ ಕೊನೆ ಬಾರಿ ಟಿ20 ಆಡಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಅಂ.ರಾ. ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ.

ಕಾವ್ಯ ಮಾರನ್ ಜಾತಕದಿಂದ ಸನ್‌ರೈಸರ್ಸ್ ಲಕ್ ಚೇಂಜ್..! ಹೈದರಾಬಾದ್‌ ಸಕ್ಸಸ್‌ಗೆ ಕಾರಣ ಏನು ಗೊತ್ತಾ..?

ಸಿಎಸ್‌ಕೆಗೆ ಕಾನ್‌ವೇ ಬದಲು ಗ್ಲೀಸನ್‌ ಸೇರ್ಪಡೆ

ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಇಂಗ್ಲೆಂಡ್‌ ವೇಗಿ ರಿಚರ್ಡ್‌ ಗ್ಲೀಸನ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಇಂಗ್ಲೆಂಡ್‌ ಪರ 6 ಟಿ20 ಪಂದ್ಯಗಳನ್ನು ಆಡಿರುವ ಗ್ಲೀಸನ್‌, ನ್ಯೂಜಿಲೆಂಡ್‌ನ ಡೆವೊನ್‌ ಕಾನ್‌ವೇ ಬದಲು ತಂಡ ಕೂಡಿಕೊಳ್ಳಲಿದ್ದಾರೆ. ಐಪಿಎಲ್‌ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ಕಾನ್‌ವೇ ಕೈಬೆರಳಿನ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಟ್ಟಾರೆ 90 ಟಿ20 ಪಂದ್ಯಗಳಲ್ಲಿ 101 ವಿಕೆಟ್‌ ಕಿತ್ತಿರುವ ಗ್ಲೀಸನ್‌ಗೆ ಸಿಎಸ್‌ಕೆ 50 ಲಕ್ಷ ರು. ಸಂಭಾವನೆ ನೀಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!
ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌