'ಆಡಲು ಹಸಿವಿಲ್ಲದವರನ್ನು ಆಡಿಸೋದ್ರಲ್ಲಿ ಅರ್ಥವಿಲ್ಲ': ಟೀಂ ಇಂಡಿಯಾ ಕ್ಯಾಪ್ಟನ್ ಹೀಗಂದಿದ್ದೇಕೆ?

By Naveen Kodase  |  First Published Feb 27, 2024, 1:56 PM IST

ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಯುವ ಕ್ರಿಕೆಟಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೇಂದ್ರಿಯ ಗುತ್ತಿಗೆ ಹೊಂದಿರುವವರು ರಾಷ್ಟ್ರೀಯ ತಂಡದಿಂದ ಹೊರಗುಳಿದಾಗ ಅವರು ದೇಶಿ ಟೂರ್ನಿಯಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬೇಕಾದ ಎಲ್ಲಾ ಏರ್ಪಾಡುಗಳನ್ನು ಬಿಸಿಸಿಐ ಮಾಡುತ್ತಲೇ ಬಂದಿದೆ.


ರಾಂಚಿ(ಫೆ.27): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರು ರಾಂಚಿ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. 

ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಯುವ ಕ್ರಿಕೆಟಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೇಂದ್ರಿಯ ಗುತ್ತಿಗೆ ಹೊಂದಿರುವವರು ರಾಷ್ಟ್ರೀಯ ತಂಡದಿಂದ ಹೊರಗುಳಿದಾಗ ಅವರು ದೇಶಿ ಟೂರ್ನಿಯಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬೇಕಾದ ಎಲ್ಲಾ ಏರ್ಪಾಡುಗಳನ್ನು ಬಿಸಿಸಿಐ ಮಾಡುತ್ತಲೇ ಬಂದಿದೆ. ಹೀಗಿದ್ದೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ರಣಜಿ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಯಾವುದೇ ಗಾಯದ ಸಮಸ್ಯೆ ಇಲ್ಲದಿದ್ದರೂ ಶ್ರೇಯಸ್ ಅಯ್ಯರ್ ಕೂಡಾ ಮುಂಬೈ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದರು. ಇದೀಗ ಇಂತಹ ಆಟಗಾರನ್ನು ಉದ್ದೇಶಿಸಿ ರೋಹಿತ್ ಶರ್ಮಾ ಖಡಕ್ ಚಾಟಿ ಬೀಸಿದ್ದಾರೆ.

Latest Videos

undefined

IPL 2024: ಈ ಬಾರಿ ಮೊಹಾಲಿಯಾಚೆ ಹೊಸ ಸ್ಟೇಡಿಯಂನಲ್ಲಿ ತವರಿನ ಪಂದ್ಯ ಆಡಲು ಪಂಜಾಬ್ ಕಿಂಗ್ಸ್ ರೆಡಿ..!

"ಯಾರಿಗೆಲ್ಲಾ ಟೆಸ್ಟ್ ಆಡಬೇಕು ಎನ್ನುವ ಹಸಿವು ಇದೆಯೋ ನಾವು ಅಂತಹವರಿಗೆ ಅವಕಾಶ ನೀಡುತ್ತೇವೆ" ಎಂದು ರೋಹಿತ್ ಶರ್ಮಾ ಟೀಂ ಮ್ಯಾನೇಜ್‌ಮೆಂಟ್ ಆಸಕ್ತಿ ಇಲ್ಲದ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಒಂದು ವೇಳೆ ಯಾರಿಗೆ ಟೆಸ್ಟ್ ಆಡುವ ಹಸಿವಿಲ್ಲವೋ ಅಂತಹ ಆಟಗಾರರಿಗೆ ಅವಕಾಶ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವ ಮೂಲಕ ಟೀಂ ಇಂಡಿಯಾ ನಾಯಕ ಕೆಲವು ಆಟಗಾರರಿಗೆ ಟೆಸ್ಟ್ ಆಡುವ ಅವಕಾಶ ಬಂದ್ ಎನ್ನುವುದನ್ನು ಪರೋಕ್ಷವಾಗಿಯೇ ಖಚಿತಪಡಿಸಿದ್ದಾರೆ.

Ranji Trophy: ವಿದರ್ಭ ಎದುರು ಸೆಮೀಸ್‌ಗೇರಲು ಕರ್ನಾಟಕ ದಿಟ್ಟ ಹೋರಾಟ..!

"ನನ್ನ ಪ್ರಕಾರ ಈಗ ತಂಡದಲ್ಲಿರುವ ಆಟಗಾರರಲ್ಲಿ ಯಾರಿಗೂ ತುಡಿತವಿಲ್ಲ ಎಂದು ಅನಿಸುತ್ತಿಲ್ಲ. ತಂಡದೊಳಗೆ ಆಡಿದ ಹಾಗೂ ಹೊರಗಿದ್ದ ಎಲ್ಲರೂ ಟೆಸ್ಟ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಹಾತೊರೆಯುತ್ತಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಕೆಲವೇ ಕೆಲವರಿಗೆ ಸಿಗುತ್ತದೆ. ಒಂದು ವೇಳೆ ನೀವದನ್ನು ಉಪಯೋಗಿಸಿಕೊಳ್ಳಲಿಲ್ಲ ಎಂದರೆ ನೀವು ಮರೆಯಾಗಿ ಹೋಗುತ್ತೀರ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ತವರಿನಲ್ಲಿ ಸತತ 17ನೇ ಸರಣಿ ಗೆಲುವು!

ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಇಂಗ್ಲೆಂಡ್‌ಗೆ ಈ ಬಾರಿಯೂ ಸಾಧ್ಯವಾಗಲಿಲ್ಲ. 2013ರಿಂದ ಭಾರತ ತವರಿನಲ್ಲಿ ಆಡಿರುವ 17 ಟೆಸ್ಟ್ ಸರಣಿಯಲ್ಲೂ ಜಯಭೇರಿ ಬಾರಿಸಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧವೇ ಸರಣಿ ಸೋತಿದ್ದ ಟೀಂ ಇಂಡಿಯಾ ಆ ಬಳಿಕ ಎಲ್ಲಾ ಸರಣಿಯಲ್ಲೂ ಪರಾಕ್ರಮ ಮೆರೆದು ಗೆದ್ದಿದೆ. ಭಾರತ ಹೊರತುಪಡಿಸಿ ಬೇರೆ ಯಾವ ತಂಡವೂ ತವರಿನಲ್ಲಿ ಸತತ 10ಕ್ಕಿಂತ ಹೆಚ್ಚು ಸರಣಿ ಗೆದ್ದ ಚರಿತ್ರೆಯಿಲ್ಲ.

ಪ್ರಥಮ ದರ್ಜೆ ಕ್ರಿಕೆಟಲ್ಲಿ ರೋಹಿತ್‌ 9,000 ರನ್‌

2ನೇ ಇನ್ನಿಂಗ್ಸ್‌ನಲ್ಲಿ 55 ರನ್‌ ಸಿಡಿಸಿದ ರೋಹಿತ್‌ ಶರ್ಮಾ ಟೆಸ್ಟ್‌ನಲ್ಲಿ 17ನೇ ಅರ್ಧಶತಕವನ್ನು ಪೂರೈಸಿಸುವುದರ ಜೊತೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9000 ರನ್‌ ಮೈಲಿಗಲ್ಲು ಸಾಧಿಸಿದರು. ಅವರು 119 ಪಂದ್ಯಗಳನ್ನಾಡಿದ್ದು, 28 ಶತಕ, 37 ಅರ್ಧಶತಕ ಸೇರಿದಂತೆ 9020 ರನ್‌ ಗಳಿಸಿದ್ದಾರೆ.

click me!