ಐರ್ಲೆಂಡ್ ಎದುರು ಏಕೈಕ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಇಂಗ್ಲೆಂಡ್
ಬ್ಯಾಟಿಂಗ್, ಬೌಲಿಂಗ್ ಹಾಗೂ ವಿಕೆಟ್ ಕೀಪಿಂಗ್ ಮಾಡದೇ ಟೆಸ್ಟ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
146 ವರ್ಷಗಳ ಟೆಸ್ಟ್ ಇತಿಹಾಸ ವಿರುವ ಕ್ರಿಕೆಟ್‌ನಲ್ಲಿ ಹೊಸ ದಾಖಲೆ
ಲಂಡನ್(ಜೂ.05): ಐರ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 146 ವರ್ಷಗಳ ಟೆಸ್ಟ್ ಚರಿತ್ರೆಯಲ್ಲೇ ವಿಶಿಷ್ಟದಾಖಲೆ ಬರೆದರು. ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ಹಾಗೂ ಕೀಪಿಂಗ್ ಮಾಡದೆ ಪಂದ್ಯ ಗೆದ್ದ ಮೊತ್ತ ಮೊದಲ ನಾಯಕ ಎಂಬ ದಾಖಲೆ ಸ್ಟೋಕ್ಸ್ ಪಾಲಾಯಿತು. ಎರಡೂ ಇನ್ನಿಂಗ್್ಸಗಳಲ್ಲಿ ಅವರು ಪಂದ್ಯದಲ್ಲಿ ಒಂದೂ ಓವರ್ ಕೂಡಾ ಬೌಲಿಂಗ್ ಎಸೆಯಲಿಲ್ಲ. ಬ್ಯಾಟಿಂಗ್‌ಗೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಟೆಸ್ಟ್: ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ!
ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. 2ನೇ ಇನ್ನಿಂಗ್್ಸನಲ್ಲಿ ಗೆಲುವಿನ ಕೇವಲ 11 ರನ್ ಗುರಿ ಪಡೆದ ಇಂಗ್ಲೆಂಡ್ 4 ಎಸೆತಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಐರ್ಲೆಂಡನ್ನು ಮೊದಲ ಇನ್ನಿಂಗ್್ಸನಲ್ಲಿ ಕೇವಲ 172ಕ್ಕೆ ನಿಯಂತ್ರಿಸಿದ್ದ ಇಂಗ್ಲೆಂಡ್, ಓಲಿ ಪೋಪ್(205), ಡಕೆಟ್(182) ನೆರವಿನಿಂದ 4 ವಿಕೆಟ್ಗೆ 524 ರನ್ ಕಲೆಹಾಕಿ ಮೊದಲ ಇನ್ನಿಂಗ್‌್ಸ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಐರ್ಲೆಂಡ್ 2ನೇ ಇನ್ನಿಂಗ್್ಸನಲ್ಲಿ 162ಕ್ಕೆ 6 ವಿಕೆಟ್ ಕಳೆದುಕೊಂಡಿದ್ದರೂ ಮೆಕ್ಬ್ರೈನ್(86), ಮಾರ್ಕ್ ಅಡೈರ್(88) 7ನೇ ವಿಕೆಟ್ಗೆ ಗಳಿಸಿದ 163 ರನ್‌ಗಳ ಜೊತೆಯಾಟದಿಂದಾಗಿ 362 ರನ್ ಗಳಿಸಿ ಇನ್ನಿಂಗ್‌್ಸ ಸೋಲು ತಪ್ಪಿಸಿಕೊಂಡಿತ್ತು.
ಏಕದಿನ: ಆಫ್ಘನ್ ವಿರುದ್ಧ ಲಂಕಾಕ್ಕೆ 132 ರನ್ ಗೆಲುವು
ಹಂಬನ್ತೋಟ: ಅಷ್ಘಾನಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 132 ರನ್ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಲಂಕಾ 6 ವಿಕೆಟ್ಗೆ 323 ರನ್ ಕಲೆಹಾಕಿತು. ಕುಸಾಲ್ ಮೆಂಡಿಸ್ 78, ಕರುಣಾರತ್ನೆ 52, ಸಮರವಿಕ್ರಮ 44, ಪಥುಮ್ ನಿಸ್ಸಂಕ 43 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.
WTC ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಶಾಕ್, ಹೇಜಲ್‌ವುಡ್ ಟೂರ್ನಿಯಿಂದ ಔಟ್!
ಆದರೆ ಬೃಹತ್ ಮೊತ್ತ ಬೆನ್ನತ್ತಿದ ಆಫ್ಘನ್ 42.1 ಓವರ್ಗಳಲ್ಲಿ 191 ರನ್‌ಗೆ ಸರ್ವಪತನ ಕಂಡಿತು. ನಾಯಕ ಹಶ್ಮತುಲ್ಲಾ ಶಾಹಿದಿ 57, ಇಬ್ರಾಹಿಂ ಜದ್ರಾನ್ 54 ರನ್ ಸಿಡಿಸಿದರೂ ಉಳಿದವರು ಮಿಂಚಲಿಲ್ಲ. ಹಸರಂಗ, ಧನಂಜಯ ಡಿ ಸಿಲ್ವ ತಲಾ 3 ವಿಕೆಟ್ ಕಿತ್ತರು. ಕೊನೆ ಪಂದ್ಯ ಬುಧವಾರ ನಡೆಯಲಿದೆ.
2ನೇ ಏಕದಿನ: ನಮೀಬಿಯಾ ವಿರುದ್ಧ ರಾಜ್ಯಕ್ಕೆ ಸೋಲು
ವಿಂಡ್ಹೋಕ್: ನಮೀಬಿಯಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಕರ್ನಾಟಕ 5 ವಿಕೆಟ್ ಸೋಲನುಭವಿಸಿದ್ದು, 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ರಾಜ್ಯ ತಂಡ ಈ ಬಾರಿ ಬೌಲಿಂಗ್ನಲ್ಲಿ ವೈಫಲ್ಯ ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಎಲ್.ಆರ್.ಚೇತನ್(169) ಹಾಗೂ ನಿಕಿನ್ ಜೋಸ್(103), ಕೆ.ಸಿದ್ಧಾಥ್ರ್(59) ಅಬ್ಬರದ ಆಟದಿಂದಾಗಿ 4 ವಿಕೆಟ್ಗೆ 360 ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ ನಮೀಬಿಯಾ ಒಂದು ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ಮೈಕಲ್ ವ್ಯಾನ್ ಲಿಂಗನ್(104), ನಾಯಕ ಗೆರಾರ್ಡ್ ಎರಾಸ್ಮಸ್(91) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.