ಬ್ಯಾಟಿಂಗ್‌ ಬಿಟ್ಟು ’ಅದನ್ನು’ ಮಾಡಲು ಓಡಿದ ಕ್ರಿಕೆ​ಟಿ​ಗ! ವಿಡಿಯೋ ವೈರಲ್

Published : Oct 24, 2019, 01:12 PM IST
ಬ್ಯಾಟಿಂಗ್‌ ಬಿಟ್ಟು ’ಅದನ್ನು’ ಮಾಡಲು ಓಡಿದ ಕ್ರಿಕೆ​ಟಿ​ಗ! ವಿಡಿಯೋ ವೈರಲ್

ಸಾರಾಂಶ

ಕ್ರಿಕೆಟ್’ನಲ್ಲಿ ಕೆಲವು ಚಿತ್ರವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೈಜೀರಿಯಾದ ಬ್ಯಾಟ್ಸ್’ಮನ್ ಮಾಡಿದ ಘಟನೆ ಸ್ವತಃ ತಮ್ಮ ತಂಡದವರೇ ಬಿಕ್ಕಿ ಬಿಕ್ಕಿ ನಗುವಂತೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

ಅಬುಧಾಬಿ[ಅ.24]: ಬ್ಯಾಟಿಂಗ್‌ ಮಾಡು​ವು​ದನ್ನು ಬಿಟ್ಟು ಮೂತ್ರ ವಿಸ​ರ್ಜನೆಗಾಗಿ ಡ್ರೆಸ್ಸಿಂಗ್‌ ರೂಮ್‌ಗೆ ಬ್ಯಾಟ್ಸ್‌ಮನ್‌ ಒಬ್ಬ ಓಡಿದ ಪ್ರಸ​ಂಗ, ಮಂಗ​ಳ​ವಾರ ಇಲ್ಲಿ ನಡೆದ ಟಿ20 ವಿಶ್ವ​ಕಪ್‌ ಅರ್ಹತಾ ಟೂರ್ನಿಯ ಪಂದ್ಯ​ವೊಂದ​ರಲ್ಲಿ ನಡೆ​ದಿದೆ. 

ಬಿಸಿಸಿಐಗೆ ಗಂಗೂಲಿ ಬಾಸ್, 'ದಾದಾಗಿರಿ'ಯ ಆ ದಿನಗಳು ಮತ್ತೆ ಬಂದಿವೆ

ಕೆನಡಾ ವಿರುದ್ಧದ ಪಂದ್ಯ​ದಲ್ಲಿ ನೈಜೀ​ರಿಯಾ ತಂಡದ ಬ್ಯಾಟ್ಸ್‌ಮನ್‌ ಸುಲೈ​ಮಾನ್‌ ರನ್ಸೀವಿ, 7ನೇ ಓವರ್‌ ಮುಕ್ತಾ​ಯ​ಗೊ​ಳ್ಳು​ತ್ತಿ​ದ್ದಂತೆ ನಾಪತ್ತೆಯಾದರು. ಸಹ ಆಟ​ಗಾರ, ಕೆನಡಾ ಆಟ​ಗಾ​ರರು, ಅಂಪೈರ್‌ಗಳು, ಡಗೌಟ್‌ನಲ್ಲಿದ್ದ ನೈಜೀ​ರಿಯಾ ಆಟ​ಗಾ​ರರಿಗೆ ಸುಲೈ​ಮಾನ್‌ ಎಲ್ಲಿ ಎನ್ನು​ವು​ದು ತಿಳಿ​ಯ​ಲಿಲ್ಲ. ಹೀಗಾಗಿ ನೈಜೀ​ರಿಯಾ ನಾಯಕ ಅಡೆ​ಮೊಲಾ ಒನಿ​ಕೊಯಿ ಬ್ಯಾಟ್‌ ಮಾಡಲು ಮೈದಾ​ನ​ಕ್ಕಿ​ಳಿ​ದರು. 

ಇಲ್ಲಿದೆ ನೋಡಿ ಆ ವಿಡಿಯೋ:

ಅಷ್ಟ​ರಲ್ಲಿ ಡ್ರೆಸ್ಸಿಂಗ್‌ ಕೊಠ​ಡಿ​ಯಿಂದ ಹೊರ​ಬಂದ ಸುಲೈ​ಮಾನ್‌, ಪ್ಯಾಡ್‌ ಕಟ್ಟಿ ಕ್ರೀಸ್‌ಗಿಳಿ​ದರು. ಈ ಪ್ರಸಂಗ ಮೈದಾ​ನ​ದ​ಲ್ಲಿದ್ದ ಪ್ರತಿ​ಯೊ​ಬ್ಬ​ರಲ್ಲೂ ನಗು ತರಿ​ಸಿತು. ಜತೆಗೆ ಈ ಪ್ರಸಂಗದ ವಿಡಿಯೋ ಸಾಮಾ​ಜಿಕ ತಾಣ​ಗ​ಳಲ್ಲಿ ವೈರಲ್‌ ಆಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?