ಬಾಂಗ್ಲಾ ಸರ​ಣಿಗೆ ಧೋನಿ, ಕೊಹ್ಲಿ ಆಯ್ಕೆ ಡೌಟ್?

Published : Oct 24, 2019, 09:58 AM IST
ಬಾಂಗ್ಲಾ ಸರ​ಣಿಗೆ ಧೋನಿ, ಕೊಹ್ಲಿ ಆಯ್ಕೆ ಡೌಟ್?

ಸಾರಾಂಶ

ನವೆಂಬರ್ 03ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಧೋನಿ ಭವಿಷ್ಯದ ಬಗ್ಗೆ ಇಂದು ಸ್ಪಷ್ಟನೆ ಸಿಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮುಂಬೈ[ಅ.24]: ಬಾಂಗ್ಲಾದೇಶ ವಿರುದ್ಧದ ಟಿ20 ಸರ​ಣಿಗೆ ಗುರು​ವಾರ ಭಾರತ ತಂಡದ ಆಯ್ಕೆ ನಡೆ​ಯ​ಲಿದ್ದು, ಎಲ್ಲರ ಗಮನ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರತ್ತ ಕೇಂದ್ರೀಕರಿಸಿದೆ. 

ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ

ಇಂಗ್ಲೆಂಡ್‌ನಲ್ಲಿ ನಡೆದ 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಧೋನಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಆಡಿಲ್ಲ. ಈ ಸರ​ಣಿಗೆ ಸ್ಥಾನ ಸಿಗ​ಲಿ​ದೆಯೇ ಎನ್ನುವ ಕುತೂ​ಹಲವಿದೆ. ಮೂಲ​ಗಳ ಪ್ರಕಾರ, ಧೋನಿಯನ್ನು ಆಯ್ಕೆ ಮಾಡು​ವು​ದಿಲ್ಲ ಎನ್ನ​ಲಾ​ಗಿದ್ದು, ರಿಷಭ್‌ ಪಂತ್‌ಗೆ ಮತ್ತೊಂದು ಅವ​ಕಾಶ ಸಿಗುವ ನಿರೀಕ್ಷೆ ಇದೆ.

ಟೀಂ ಇಂಡಿಯಾ ಕ್ರಿಕೆಟಿಗ to ಬಿಸಿಸಿಐ ಅಧ್ಯಕ್ಷ; ಗಂಗೂಲಿ ಹೋರಾಟದ ಹಾದಿ!

ಸಂಜು ಸ್ಯಾಮ್ಸನ್‌ರಿಂದ ಭಾರೀ ಪೈಪೋಟಿ ಇದ್ದರೂ, ಪಂತ್‌ರನ್ನೇ ಆಯ್ಕೆ ಮಾಡಲು ಎಂ.ಎಸ್‌.ಕೆ.​ಪ್ರ​ಸಾದ್‌ ನೇತೃ​ತ್ವದ ಆಯ್ಕೆ ಸಮಿತಿ ನಿರ್ಧ​ರಿ​ಸಿದೆ ಎನ್ನ​ಲಾ​ಗಿದೆ. ಆದರೆ ತಂಡದ ಆಡ​ಳಿತದ ವಾದವೇನು ಎನ್ನುವುದು ನಿರೀಕ್ಷೆ ಹುಟ್ಟಿ​ಸಿ​ದೆ.

ಮಾಧ್ಯ​ಮ​ಗ​ಳ ವರದಿ ಪ್ರಕಾರ ವಿರಾಟ್‌ ಕೊಹ್ಲಿ, ಟಿ20 ಸರ​ಣಿ​ಗೆ ವಿಶ್ರಾಂತಿ ಪಡೆ​ಯ​ಲಿ​ದ್ದಾರೆ ಎನ್ನ​ಲಾ​ಗಿದೆ. ಕೊಹ್ಲಿ ನಿರಂತರವಾಗಿ ಕ್ರಿಕೆಟ್‌ ಆಡು​ತ್ತಿದ್ದು ಅವ​ರಿಗೆ ವಿಶ್ರಾಂತಿ ಅಗ​ತ್ಯ​ವಿದೆ ಎಂದು ತಂಡದ ಫಿಟ್ನೆಸ್‌ ಟ್ರೈನರ್‌ ಸಲಹೆ ನೀಡಿ​ದ್ದಾರೆ ಎನ್ನ​ಲಾ​ಗಿದೆ. ಆದರೆ ಕೆಲ ಮೂಲ​ಗಳ ಪ್ರಕಾರ, ಕೊಹ್ಲಿ ಟಿ20 ಸರಣಿ ಆಡಲು ಇಚ್ಛಿ​ಸಿ​ದ್ದಾರೆ ಎಂದು ಹೇಳ​ಲಾ​ಗಿದೆ.

INDvSA ಟೆಸ್ಟ್ ಸರಣಿಯಲ್ಲಿ ನಿರ್ಮಾಣವಾಯ್ತು ಹಲವು ದಾಖಲೆ!

ಟೆಸ್ಟ್‌ ಸರ​ಣಿಗೂ ತಂಡ: ಪ್ರಸಾದ್‌ ನೇತೃ​ತ್ವದ ಆಯ್ಕೆ ಸಮಿತಿಯ ಕೊನೆ ಸಭೆ ಇದಾ​ಗಿದ್ದು, 2 ಪಂದ್ಯಗಳ ಟೆಸ್ಟ್‌ ಸರ​ಣಿಗೂ ತಂಡದ ಆಯ್ಕೆ ನಡೆ​ಯ​ಲಿದೆ. ಬಹು​ತೇಕ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ತಂಡ​ವನ್ನೇ ಉಳಿ​ಸಿ​ಕೊ​ಳ್ಳುವ ನಿರೀಕ್ಷೆ ಇದೆ. ವೃದ್ಧಿ​ಮಾನ್‌ ಸಾಹ ಕೈಬೆ​ರ​ಳಿಗೆ ಗಾಯ ಮಾಡಿ​ಕೊಂಡಿ​ದ್ದು ಅವರು ಫಿಟ್‌ ಆಗ​ಲಿ​ದ್ದಾರೆಯೇ ಎನ್ನುವ ಪ್ರಶ್ನೆ ಇದೆ. ವೇಗಿ ಜಸ್‌ಪ್ರೀತ್‌ ಬುಮ್ರಾ ಸಹ ತಂಡಕ್ಕೆ ಮರ​ಳ​ಲಿ​ದ್ದಾರೆ ಎನ್ನ​ಲಾ​ಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!