T20 World Cup: ಅನುಭವಿ ಆಟಗಾರರಿದ್ದರೂ ನ್ಯೂಜಿಲೆಂಡ್‌ಗೆ ಒಲಿಯದ ಅದೃಷ್ಟ !

By Kannadaprabha NewsFirst Published Nov 16, 2021, 6:50 AM IST
Highlights

*ಅನುಭವಿ ಆಟಗಾರರಿದ್ದರೂ ಒಲಿಯದ ಅದೃಷ್ಟ
*ಪ್ರತಿಷ್ಠಿತ ಟೂರ್ನಿಗಳ ಫೈನಲ್‌, ಸೆಮೀಸ್‌ನಲ್ಲಿ ಸೋಲು
*ನೆಲಕಚ್ಚಿದ್ದ ಆಸ್ಪ್ರೇಲಿಯಾ ಈಗ ವಿಶ್ವವಿಜೇತ!
*ಶೂನಲ್ಲಿ ಮದ್ಯ ಆಸೀಸ್ ಸೇವಿಸಿ ಸಂಭ್ರಮಾಚರಣೆ

ದುಬೈ(ನ.16): ಅನುಭವಿ ಆಟಗಾರರ ಒಳಗೊಂಡಿರುವ ನ್ಯೂಜಿಲೆಂಡ್‌ (NewZ ealand) ತಂಡದಲ್ಲಿ ಎಂಬ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಅದೃಷ್ಟವೆಂಬುದು ಕಿವೀಸ್‌ ಪಾಲಿಗೆ ದೂರದ ಮಾತಾಗಿದ್ದು, ಈ ನತದೃಷ್ಟತಂಡ ಈ ಬಾರಿಯೂ ಐಸಿಸಿ ಟೂರ್ನಿಯಲ್ಲಿ (ICC T20 World Cup) ಫೈನಲ್‌ನಲ್ಲಿ ಮುಗ್ಗರಿಸಿದೆ. ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುವ ಕಿವೀಸ್‌, ಕೊನೆಯಲ್ಲಿ ಕಳಪೆ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಲು ವಿಫಲವಾಗುವುದು ಇದೇ ಮೊದಲಲ್ಲ. 

Cricket in Olympics: ಅಮೆರಿಕದಲ್ಲಿ 2024ರ ಟಿ20 ವಿಶ್ವಕಪ್‌ ಟೂರ್ನಿ..?

1975ರ ಐಸಿಸಿ ಏಕದಿನ ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲೇ ಸೆಮೀಸ್‌ (Semi final) ತಲುಪಿದ್ದ ಕಿವೀಸ್‌, ಬಳಿಕ 2011ರ ವರೆಗೆ ಒಟ್ಟು 5 ಬಾರಿ ಸೆಮೀಸ್‌ ಪ್ರವೇಶಿಸಿದ್ದರೂ ಫೈನಲ್‌ಗೆ ಟಿಕೆಟ್‌ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ 2015 ಹಾಗೂ 2019ರಲ್ಲಿ ಸೆಮೀಸ್‌ ಸೋಲನ್ನು ಮೆಟ್ಟಿನಿಂತು ಫೈನಲ್‌ ಪ್ರವೇಶಿಸಿದ್ದ ‘ಡಾರ್ಕ್ ಹಾರ್ಸ್‌’ ನ್ಯೂಜಿಲೆಂಡ್‌, ಕ್ರಮವಾಗಿ ಆಸ್ಪ್ರೇಲಿಯಾ (Australia) ಹಾಗೂ ಇಂಗ್ಲೆಂಡ್‌ (England) ವಿರುದ್ಧ ಸೋತು ಚೊಚ್ಚಲ ಏಕದಿನ ವಿಶ್ವಕಪ್‌ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿತ್ತು.

ಟಿ20 ವಿಶ್ವಕಪ್‌ನಲ್ಲೂ ಕೈ ಹಿಡಿಯದ ಅದೃಷ್ಟ!

ಇನ್ನು, ಟಿ20 ವಿಶ್ವಕಪ್‌ನಲ್ಲೂ ತಂಡಕ್ಕೆ ಇನ್ನೂ ಅದೃಷ್ಟಕೈ ಹಿಡಿಯಲಿಲ್ಲ. 2007ರ ಚೊಚ್ಚಲ ಆವೃತ್ತಿ ಹಾಗೂ 2016ರಲ್ಲಿ ಕಿವೀಸ್‌ ಅಂತಿಮ ನಾಲ್ಕರ ಹಂತ ಪ್ರವೇಶಿಸಿದ್ದರೂ ಫೈನಲ್‌ ತಲುಪಲು ವಿಫಲವಾಗಿತ್ತು. 2021ರಲ್ಲಿ ಮೊದಲ ಬಾರಿ ಫೈನಲ್‌ ತಲುಪಿದರೂ ಆಸ್ಪ್ರೇಲಿಯಾಗೆ ಶರಣಾಯಿತು. ಇದುವರೆಗೆ ಐಸಿಸಿ ಟೂರ್ನಿಗಳಲ್ಲಿ ಕಿವೀಸ್‌ಗೆ ಮೊದಲ ಯಶಸ್ಸು ಸಿಕ್ಕಿದ್ದು 2000ರ ಐಸಿಸಿ ನಾಕೌಟ್‌ ಟ್ರೋಫಿ(2002ರ ಬಳಿಕ ಚಾಂಪಿಯನ್ಸ್‌ ಟ್ರೋಫಿ ಎಂದು ಮರುನಾಮಕರಣ) ಟೂರ್ನಿಯಲ್ಲಿ. 

ಅಮೂಲ್ಯ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ICC

ಬಳಿಕ ಕಿವೀಸ್‌ 2006ರಲ್ಲಿ ಸೆಮೀಸ್‌ ತಲುಪಿದ್ದರೆ, 2009ರಲ್ಲಿ ರನ್ನರ್‌-ಅಪ್‌ ಆಗಿತ್ತು. ಇನ್ನು, 2020-21ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಕಳೆದ 6 ವರ್ಷಗಳಲ್ಲಿ ಕಿವೀಸ್‌ 4 ಬಾರಿ ಐಸಿಸಿ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದು, 3 ಬಾರಿ ಪ್ರಶಸ್ತಿ ಪಡೆಯಲು ವಿಫಲವಾಗಿದೆ.

ನೆಲಕಚ್ಚಿದ್ದ ಆಸ್ಪ್ರೇಲಿಯಾ ಈಗ ವಿಶ್ವವಿಜೇತ!

20 ವಿಶ್ವಕಪ್‌ಗೂ (T20 World Cup) ಮುನ್ನ ಅತ್ಯಂತ ಕಳಪೆ ಪ್ರದರ್ಶನ. ಆಡಿದ ಐದೂ ಟಿ20 ಸರಣಿಯಲ್ಲಿ ಸೋಲು. ಹೀಗೆ ಸೋಲಿನ ಮೇಲೆ ಸೋಲು ಅನುಭವಿಸುತ್ತಾ ಬಂದ ಆಸ್ಪ್ರೇಲಿಯಾ ಚುಟುಕು ಕ್ರಿಕೆಟ್‌ನಲ್ಲಿ ದಯನೀಯ ಪ್ರದರ್ಶನ ನೀಡುತ್ತಿತ್ತು. ವಿಶ್ವಕಪ್‌ನಲ್ಲೂ ಕಾಂಗರೂ ಪಡೆಯಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವನ್ನೇ ಮೀರಿನಿಂತ ಆಸ್ಪ್ರೇಲಿಯನ್ನರು (Australian cricket Team) , ಚುಟುಕು ವಿಶ್ವಕಪ್‌ನಲ್ಲಿ ಮೋಡಿ ಮಾಡಿದರು. ಐಸಿಸಿ (ICC) ಟೂರ್ನಿಯಲ್ಲಿ ತನ್ನ ಪಾರುಪತ್ಯ ಮುಂದುವರೆಸಿದ ಆಸ್ಪ್ರೇಲಿಯಾ, ಸಾಂಘಿಕ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಶೂನಲ್ಲಿ ಮದ್ಯ ಸೇವಿಸಿ ಸಂಭ್ರಮಾಚರಣೆ

ಟಿ20 ವಿಶ್ವಕಪ್‌ ಗೆದ್ದ ಖುಷಿಯಲ್ಲಿದ್ದ ಆಸ್ಪ್ರೇಲಿಯಾ ಆಟಗಾರರು ತಮ್ಮ ಶೂನಲ್ಲಿ (Shoe) ಮದ್ಯ ಸೇವಿಸಿ ಸಂಭ್ರಮಾಚರಣೆ ನಡೆಸಿದ್ದು, ವಿಡಿಯೋ ವೈರಲ್‌ (Viral)ಆಗಿದೆ. ಆಟಗಾರರು ಟ್ರೋಫಿ (trophy) ಜೊತೆ ಡ್ರೆಸ್ಸಿಂಗ್‌ ಕೋಣೆಯಲ್ಲಿ ಕುಣಿದಾಡುತ್ತಿದ್ದಾಗ ಮ್ಯಾಥ್ಯೂ ವೇಡ್‌ (mathew wade) ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ತಮ್ಮ ಶೂಗೆ ಮದ್ಯ ಸುರಿದು ಕುಡಿದು ಸಂಭ್ರಮಿಸಿದ್ದಾರೆ. ಈ ವಿಶೇಷ ಸಂಭ್ರಮಾಚರಣೆ ಆಸ್ಪ್ರೇಲಿಯಾದಲ್ಲಿ ಸಾಮಾನ್ಯವಾಗಿದ್ದು, 2016ರಲ್ಲಿ ಆಸ್ಪ್ರೇಲಿಯಾದ ಫಾರ್ಮುಲಾ ಒನ್‌ ರೇಸರ್‌ ಡೇನಿಯಲ್‌ ರಿಕಿಯಾರ್ಡೊ ಮೊದಲ ಬಾರಿ ಈ ರೀತಿ ಸಂಭ್ರಮಿಸಿದ್ದರು.

click me!