T20 World Cup Champions: ನೆಲಕಚ್ಚಿದ್ದ ಆಸ್ಪ್ರೇಲಿಯಾ ಈಗ ವಿಶ್ವವಿಜೇತ!

By Kannadaprabha News  |  First Published Nov 16, 2021, 6:27 AM IST

*ಟಿ20 ವಿಶ್ವಕಪ್‌ಗೂ ಮುನ್ನಾ ಸತತ 5 ಟಿ20 ಸರಣಿಯಲ್ಲಿ ಸೋಲು
*ಚುಟುಕು ಕ್ರಿಕೆಟ್‌ನಲ್ಲಿ ದಯನೀಯ ಸ್ಥಿತಿ : ಕಳಪೆ ಪ್ರದರ್ಶನ
*ಆದರೆ ಟಿ20 ವಿಶ್ವಕಪ್‌ನಲ್ಲಿ ಪುಟಿದೆದ್ದ ಕಾಂಗರೂ ಪಡೆ
*ಬಲಾಡ್ಯ ತಂಡಗಳನ್ನೇ ಮಣಿಸಿ ಚಾಂಪಿಯನ್‌ ಪಟ್ಟಕ್ಕೇರಿಕೆ
*ಸ್ಟಾರ್ಕ್-ಅಲಿಸ್ಸಾ ದಂಪತಿ ಟಿ20 ವಿಶ್ವ ಚಾಂಪಿಯನ್ಸ್‌
 


ದುಬೈ(ನ.16): ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಅತ್ಯಂತ ಕಳಪೆ ಪ್ರದರ್ಶನ. ಆಡಿದ ಐದೂ ಟಿ20 ಸರಣಿಯಲ್ಲಿ ಸೋಲು. ಹೀಗೆ ಸೋಲಿನ ಮೇಲೆ ಸೋಲು ಅನುಭವಿಸುತ್ತಾ ಬಂದ ಆಸ್ಪ್ರೇಲಿಯಾ ಚುಟುಕು ಕ್ರಿಕೆಟ್‌ನಲ್ಲಿ ದಯನೀಯ ಪ್ರದರ್ಶನ ನೀಡುತ್ತಿತ್ತು. ವಿಶ್ವಕಪ್‌ನಲ್ಲೂ ಕಾಂಗರೂ ಪಡೆಯಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವನ್ನೇ ಮೀರಿನಿಂತ ಆಸ್ಪ್ರೇಲಿಯನ್ನರು (Australian cricket Team) , ಚುಟುಕು ವಿಶ್ವಕಪ್‌ನಲ್ಲಿ ಮೋಡಿ ಮಾಡಿದರು. ಐಸಿಸಿ (ICC) ಟೂರ್ನಿಯಲ್ಲಿ ತನ್ನ ಪಾರುಪತ್ಯ ಮುಂದುವರೆಸಿದ ಆಸ್ಪ್ರೇಲಿಯಾ, ಸಾಂಘಿಕ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಸತತ 5 ಸರಣಿ ಸೋಲು:

Tap to resize

Latest Videos

undefined

ಟಿ20 ವಿಶ್ವಕಪ್‌ಗೂ ಆಸ್ಪ್ರೇಲಿಯಾ ತಂಡ ಟಿ20 ಮಾದರಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಒಂದಲ್ಲ, ಎರಡಲ್ಲ ಐದು ಸರಣಿಯಲ್ಲಿ ಸೋಲುಂಡಿತ್ತು. ಅದರಲ್ಲೂ ವಿಶ್ವಕಪ್‌ಗೂ ಕೆಲ ದಿನಗಳ ಮುನ್ನ ಬಾಂಗ್ಲಾದೇಶದ (Bangladesh) ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಆಸ್ಪ್ರೇಲಿಯನ್ನರಿಗೆ ಸಾಧ್ಯವಾಗಿರಲಿಲ್ಲ.

Sachin Tendulkar Debut; ಕ್ರಿಕೆಟ್ ದೇವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆಗೆ 32 ವರ್ಷದ ಸಂಭ್ರಮ!

2020ರ ಸೆಪ್ಟೆಂಬರ್‌ನಲ್ಲಿ 1-2 ಅಂತರದಿಂದ ಇಂಗ್ಲೆಂಡ್‌ಗೆ ತಲೆ ಬಾಗಿದ್ದ ಆಸ್ಪ್ರೇಲಿಯಾ, ನಂತರ ಭಾರತದ ವಿರುದ್ಧದ ಸರಣಿಯಲ್ಲೂ 1-2ಯಿಂದ ಮಂಡಿಯೂರಿತ್ತು. ಬಳಿಕ ನ್ಯೂಜಿಲೆಂಡ್‌ ವಿರುದ್ಧ 2-3ರಲ್ಲಿ ಸರಣಿ ಕೈಚೆಲ್ಲಿತ್ತು. ಈ ಮೂರು ಸರಣಿ ಸೋಲಿನ ಬಳಿಕ ವೆಸ್ಟ್‌ಇಂಡೀಸ್‌ ಹಾಗೂ ಬಾಂಗ್ಲಾದೇಶದ ವಿರುದ್ಧದ ಸೋಲು ಆಸ್ಪ್ರೇಲಿಯನ್ನರಿಗೆ ಭಾರೀ ಆಘಾತವನ್ನುಂಟು ಮಾಡಿತ್ತು. ಪ್ರಮುಖ ಆಟಗಾರರ ಗೈರಲ್ಲಿ ಕಣಕ್ಕಿಳಿದ ಆಸೀಸ್‌ ಪಡೆ ಎರಡೂ ಸರಣಿಯಲ್ಲೂ 1-4 ಅಂತರದಿಂದ ಸೋಲುಂಡಿತ್ತು. ಹೀಗೆ ಸೋಲಿನ ಕಹಿಯೊಂದಿಗೆ ಟಿ20 ವಿಶ್ವಕಪ್‌ ಅಭಿಯಾನ ಆರಂಭಿಸಿದ ಆಸ್ಪ್ರೇಲಿಯಾ ನಂತರ ಇತಿಹಾಸ ಬರೆಯಿತು. ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು.

ಕೈ ಹಿಡಿದ ಅದೃಷ್ಟ:

ಈ ಬಾರಿ ಗುಂಪು-1ರಲ್ಲಿ ಸ್ಥಾನ ಪಡೆದಿದ್ದ ಆಸ್ಪ್ರೇಲಿಯಾದ ಹಾದಿ ಅಷ್ಟೇನು ಸುಲಭವಾಗಿರಲಿಲ್ಲ. ಸೂಪರ್‌ 12 ಹಂತದಲ್ಲಿ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌, ಶ್ರೀಲಂಕಾದಂತಹ ಪ್ರಬಲ ಪೈಪೋಟಿ ಆಸ್ಪ್ರೇಲಿಯಾಗೆ ಎದುರಾಗಿತ್ತು. ಸೆಮಿಫೈನಲ್‌ ಪ್ರವೇಶಿಸಲು ದಕ್ಷಿಣ ಆಫ್ರಿಕಾ ಭಾರೀ ಸವಾಲೊಡ್ಡಿತ್ತು. ಸೂಪರ್‌ 12ರಲ್ಲಿ ತಲಾ ನಾಲ್ಕರಲ್ಲಿ ಜಯ ಸಾಧಿಸಿದ್ದ ಆಸ್ಪ್ರೇಲಿಯಾ ಮತ್ತು ದ.ಆಫ್ರಿಕಾ ನಡುವೆ ಸೆಮೀಸ್‌ ಸ್ಥಾನಕ್ಕಾಗಿ ಸಾಕಷ್ಟುಪೈಪೋಟಿ ನಡೆದಿತ್ತು. ಕೊನೆಗೆ ನೆಟ್‌ ರನ್‌ರೇಟ್‌ನಲ್ಲಿ (Net Run Rate) ಆಫ್ರಿಕನ್ನರನ್ನು ಹಿಂದಿಕ್ಕಿ ಆಸ್ಪ್ರೇಲಿಯಾ ಸೆಮೀಸ್‌ ಪ್ರವೇಶಿಸಿತ್ತು. ಉಪಾಂತ್ಯದಲ್ಲಿ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಪಾಕಿಸ್ತಾನವನ್ನು (Pakistan) ಬಗ್ಗು ಬಡಿದು ಫೈನಲ್‌ ಪ್ರವೇಶಿಸಿದ ಆ್ಯರೋನ್‌ ಫಿಂಚ್‌ (Arom Finch) ಪಡೆ, ಫೈನಲ್‌ನಲ್ಲಿ ಸುಲಭವಾಗಿ ನ್ಯೂಜಿಲೆಂಡ್‌ (New Zealand) ಅನ್ನು ಮಣಿಸಿ ಚಾಂಪಿಯನ್‌ ಪಟ್ಟಕ್ಕೇರಿತು.

ಫೈನಲ್‌ನಲ್ಲಿ ಮಾಷ್‌ರ್‍ ವೇಗದ ಅರ್ಧಶತಕ

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಆಸ್ಪ್ರೇಲಿಯಾ ಬ್ಯಾಟರ್‌ ಮಿಚೆಲ್‌ ಮಾಷ್‌ರ್‍ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಮಾಷ್‌ರ್‍ 31 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಇದೇ ಪಂದ್ಯದಲ್ಲಿ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ 32 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು. ಇದಕ್ಕೂ ಮೊದಲು ಟಿ20 ವಿಶ್ವಕಪ್‌ ಫೈನಲ್‌ ವೇಗದ ಫಿಫ್ಟಿಶ್ರೀಲಂಕಾದ ಕುಮಾರ ಸಂಗಕ್ಕಾರ ಹೆಸರಲ್ಲಿತ್ತು. ಸಂಗಕ್ಕಾರ 2014ರಲ್ಲಿ 33 ಎಸೆತದಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು.

ಸ್ಟಾರ್ಕ್-ಅಲಿಸ್ಸಾ ದಂಪತಿ ಟಿ20 ವಿಶ್ವ ಚಾಂಪಿಯನ್ಸ್‌

ಆಸ್ಪ್ರೇಲಿಯಾ ವೇಗಿ ಮಿಚೆಲ್‌ ಸ್ಟಾರ್ಕ್ (Michel Starc) ಹಾಗೂ ಅವರ ಪತ್ನಿ, ಆಸೀಸ್‌ ವಿಕೆಟ್‌ ಕೀಪರ್‌ ಅಲಿಸ್ಸಾ ಹೀಲಿ (alisa Hili) ಇಬ್ಬರೂ ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯರು. ಅಲಿಸ್ಸಾ 2010, 2012, 2014, 2018 ಹಾಗೂ 2020ರಲ್ಲಿ ಟಿ20 ವಿಶ್ವಕಪ್‌ ವಿಜೇತ ಆಸೀಸ್‌ ಮಹಿಳಾ ತಂಡದ ಸದಸ್ಯೆಯಾಗಿದ್ದು, ಸ್ಟಾರ್ಕ್ ಭಾನುವಾರವಷ್ಟೇ ಟಿ20 ವಿಶ್ವಕಪ್‌ ಗೆದ್ದ ಆಸ್ಪ್ರೇಲಿಯಾ ಪುರುಷರ ತಂಡದಲ್ಲಿದ್ದರು. ಸ್ಟಾರ್ಕ್ 2015ರಲ್ಲಿ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯರಾಗಿದ್ದರು.

ICC T20 World Cup: ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು..?

ಡೇವಿಡ್ ವಾರ್ನರ್‌ ಗ್ರೇಟ್‌ ಕಮ್‌ಬ್ಯಾಕ್‌

14ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಿಂದಲೇ ಹೊರಬಿದ್ದಿದ್ದ ಡೇವಿಡ್‌ ವಾರ್ನರ್‌ (David Warner) ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸತತ ಸೋಲಿನಿಂದಾಗಿ ವಾರ್ನರ್‌ ಸನ್‌ರೈಸ​ರ್‍ಸ್ ಹೈದರಾಬಾದ್‌ (SRH) ತಂಡದ ನಾಯಕತ್ವ ಕಳೆದುಕೊಂಡಿದ್ದರು. 2ನೇ ಭಾಗದಲ್ಲಿ ಕಳಪೆ ಆಟ ಮುಂದುವರಿಸಿದ ವಾರ್ನರ್‌ ತಂಡದಿಂದಲೇ ಹೊರಬಿದ್ದಿದ್ದರು. ಆದರೆ ವಿಶ್ವಕಪ್‌ನಲ್ಲಿ ಅಮೋಘ ಆಟವಾಡಿದ ವಾರ್ನರ್‌, 7 ಪಂದ್ಯಗಳಲ್ಲಿ 289 ರನ್‌ ಕಲೆಹಾಕಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

click me!