INDvNZ: ಏಕದಿನಕ್ಕೆ ಪದಾರ್ಪಣೆ ಮಾಡಿದ ವಿಶ್ವದ 2ನೇ ಅತೀ ಎತ್ತರದ ಕ್ರಿಕೆಟಿಗ!

By Suvarna News  |  First Published Feb 8, 2020, 7:31 AM IST

ನ್ಯೂಜಿಲೆಂಡ್‌ನ ಅತೀ ಎತ್ತರದ ಕ್ರಿಕೆಟಿಗ ಕೈಲ್ ಜ್ಯಾಮಿಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗ ಡೆಬ್ಯೂ ಮಾಡಿದ್ದಾರೆ. ಹಾಲಿ ಕ್ರಿಕೆಟಿಗರ ಪೈಕಿ ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ ಬಳಿಕ ಅತೀ ಎತ್ತರದ ಕ್ರಿಕೆಟಿಗ ಅನ್ನೋ ಖ್ಯಾತಿಗೆ ಕೈಲ್ ಪಾತ್ರರಾಗಿದ್ದಾರೆ.


ಆಕ್ಲೆಂಡ್(ಫೆ.08): ಬರೋಬ್ಬರಿ 6.8 ಅಡಿ ಎತ್ತರ. ಇದು ನ್ಯೂಜಿಲೆಂಡ್ ವೇಗಿ ಕೈಲ್ ಜ್ಯಾಮಿಸನ್ ಎತ್ತರ. ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೈಲ್ ಜ್ಯಾಮಿಸನ್ ಹಾಲಿ ಕ್ರಿಕೆಟಿಗರ ಪೈಕಿ ವಿಶ್ವದ ಅತಿ ಎತ್ತರದ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: INDvNZ: ಟಾಸ್ ಗೆದ್ದ ಭಾರತ ಫೀಲ್ಡಿಂಗ್; ತಂಡದಲ್ಲಿ 2 ಬದಲಾವಣೆ!

Latest Videos

undefined

ವಿಶ್ವದ ಅತೀ ಎತ್ತರದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ ಪಾತ್ರರಾಗಿದ್ದಾರೆ. ಇರ್ಫಾನ್ 7.1 ಅಡಿ ಎತ್ತರ ಹೊಂದಿದ್ದಾರೆ. ಸಕ್ರೀಯ ಕ್ರಿಕೆಟಿಗರ ಪೈಕಿ ಕೈಲ್ ಜ್ಯಾಮಿಸನ್ 6.8 ಅಡಿ ಎತ್ತರದೊಂದಿಗೆ 2ನೇ ಟಾಲೆಸ್ಟ್ ಕ್ರಿಕೆಟಿಗರ್ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಕೋಚ್‌ಗೆ ಹಿಗ್ಗಾಮುಗ್ಗಾ ಬಾರಿಸಿದ ಚಹಲ್...!

ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಜೊಯೆಲ್ ಗಾರ್ನರ್, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಪೀಟರ್ ಜಾರ್ಜ್, ಇಂಗ್ಲೆಂಡ್  ಹಾಗೂ ಐರ್ಲೆಂಡ್‌ನ ಬಾಯ್ಡ್ ರಾನ್ಕಿನ್  6.8 ಅಡಿ ಎತ್ತರ ಹೊಂದಿದ್ದರು.

ಭಾರತ ಎ ವಿರುದ್ಧ ಆಡಿದ್ದ ಕೈಲ್ ಜ್ಯಾಮಿಸನ್ ಮೊದಲ ಪಂದ್ಯದಲ್ಲಿ ವಿಕೆಟ್ ಇಲ್ಲದೆ ನಿರಾಸೆ ಅನುಭಲಿಸಿದ್ದರು. ಆದರೆ 2ನೇ ಪಂದ್ಯದಲ್ಲಿ 2 ಹಾಗೂ 3ನೇ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದರು.  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಕೈಲ್ ಆಡೋ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

"

click me!