
ಶಾರ್ಜಾ: 14 ವರ್ಷಗಳ ಬಳಿಕ ನ್ಯೂಜಿಲೆಂಡ್ ಮಹಿಳಾ ತಂಡ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಶುಕ್ರವಾರ ಇಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ 2016ರ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ 8 ರನ್‌ಗಳ ರೋಚಕ ಗೆಲುವು ಸಾಧಿಸಿ 3ನೇ ಬಾರಿಗೆ ಫೈನಲ್‌ಗೇರಿತು. ಭಾನುವಾರ (ಅ.20) ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ದಕ್ಷಿಣ ಆಫ್ರಿಕಾ ಎದುರಾಗಲಿದೆ. ಎರಡೂ ತಂಡಗಳು ಚೊಚ್ಚಲ ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿವೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರಲ್ಲಿ 9 ವಿಕೆಟ್‌ಗೆ 128 ರನ್ ಕಲೆಹಾಕಿತು. ಜಾರ್ಜಿಯಾ ಪ್ಲೈಮರ್ 33, ಸೂಜಿ ಬೇಟ್ಸ್ 26 ರನ್ ಕೊಡುಗೆ ನೀಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 48 ರನ್ ಜೊತೆಯಾಟ ಪಡೆದ ಹೊರತಾಗಿಯೂ ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ನ್ಯೂಜಿಲೆಂಡ್ ಸಾಧಾರಣ ಮೊತ್ತ ಕಲೆಹಾಕಿತು.
ಪ್ರೊ ಕಬಡ್ಡಿ ಲೀಗ್: ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ಸೋಲಿನ ಆರಂಭ
ಸುಲಭ ಗುರಿ ಬೆನ್ನತ್ತಿದ ವೆಸ್ಟ್‌ಇಂಡೀಸ್ 11ನೇ ಓವರಲ್ಲಿ ಕೇವಲ 51 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಹಿರಿಯ ಆಟಗಾರ್ತಿ ದಯೇಂದ್ರ ಡಾಟಿನ್ ಆಸರೆಯಾದರು. ಅವರ 33 ರನ್ ಕೊಡುಗೆ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತ್ತು. ಆದರೆ, 17ನೇ ಓವರಲ್ಲಿ ಡಾಟಿನ್ ಔಟಾಗುತ್ತಿದ್ದಂತೆ ವಿಂಡೀಸ್ ಪಡೆಯ ಆತ್ಮವಿಶ್ವಾಸ ಕುಸಿಯಿತು. ಕೊನೆಯ ಓವರಲ್ಲಿ ವಿಂಡೀಸ್‌ಗೆ ಗೆಲ್ಲಲು 15 ರನ್‌ಗಳು ಬೇಕಿದ್ದವು. ಆದರೆ ವಿಂಡೀಸ್ 8 ವಿಕೆಟ್‌ಗೆ 120 ರನ್ ಗಳಿಸಲಷ್ಟೇ ಶಕ್ತವಾಯಿತು.
ಸ್ಕೋರ್:
ನ್ಯೂಜಿಲೆಂಡ್ 20 ಓವರಲ್ಲಿ 128/9 (ಪ್ಲೈಮರ್ 33, ಬೇಟ್ಸ್ 26, ಡಾಟಿನ್ 4-22)
ವಿಂಡೀಸ್ 20 ಓವರಲ್ಲಿ 120/8 (ಡಾಟಿನ್ 33, ಕಾರ್ಸನ್ 3-29)
ರಣಜಿ: ರಾಜ್ಯ ವಿರುದ್ಧ ಕೇರಳ ಉತ್ತಮ ಆರಂಭ
ಬೆಂಗಳೂರು: ರಣಜಿ ಟ್ರೋಫಿ ಎಲೈಟ್ ‘ಸಿ’ ಗುಂಪಿನಲ್ಲಿರುವ ಕರ್ನಾಟಕ ಮೊದಲ ಜಯದತ್ತ ಎದುರು ನೋಡುತ್ತಿದ್ದು, ಶುಕ್ರವಾರದಿಂದ ಆರಂಭಗೊಂಡ ಕೇರಳ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದೆ. ಇಲ್ಲಿನ ಆಲೂರು ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಆರಂಭಗೊಳ್ಳಬೇಕಿದ್ದ ಪಂದ್ಯ, ಮೈದಾನ ಒದ್ದೆ ಇದ್ದ ಕಾರಣ ಮಧ್ಯಾಹ್ನ 3 ಗಂಟೆ ಬಳಿಕ ಶುರುವಾಯಿತು. ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡ್ ಮಾಡಲು ನಿರ್ಧರಿಸಿತು.
ಮೊದಲ ದಿನ ಕೇವಲ 23 ಓವರ್ ಆಟವಷ್ಟೇ ನಡೆಸಲು ಸಾಧ್ಯವಾಯಿತು. ಕೇರಳ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿದ್ದು, ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದೆ. ರೋಹನ್ ಕುನ್ನುಮಲ್ ಔಟಾಗದೆ 57, ವತ್ಸಲ್ ಔಟಾಗದೆ 31 ರನ್ ಗಳಿಸಿ, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.