ಭಾರತ ಎದುರಿನ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ; ಬೆಂಗಳೂರು ಟೆಸ್ಟ್‌ಗಿಲ್ಲ ಮಾಜಿ ಕ್ಯಾಪ್ಟನ್

By Naveen Kodase  |  First Published Oct 10, 2024, 12:16 PM IST

ಭಾರತ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಕೇನ್ ವಿಲಿಯಮ್ಸನ್ ಬೆಂಗಳೂರು ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಆಕ್ಲೆಂಡ್‌: ಭಾರತ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಗೆ ಬುಧವಾರ 17 ಸದಸ್ಯರ ನ್ಯೂಜಿಲೆಂಡ್‌ ತಂಡ ಪ್ರಕಟಗೊಂಡಿದೆ. ಗಾಯದಿಂದ ಬಳಲುತ್ತಿರುವ ಹಿರಿಯ ಆಟಗಾರ ಕೇನ್‌ ವಿಲಿಯಮ್ಸನ್‌ ಮೊದಲ ಟೆಸ್ಟ್‌ನಲ್ಲಿ ಆಡುವುದು ಬಹುತೇಕ ಅನುಮಾನವೆನಿಸಿದ್ದು, ಅವರು ತಡವಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಕಿವೀಸ್ ಮಾಜಿ ನಾಯಕ ಕೇನ್ ವಿಲಿಯಮ್ಸನ್‌ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಅ.16ರಿಂದ ಬೆಂಗಳೂರಲ್ಲಿ ಮೊದಲ ಟೆಸ್ಟ್‌ ನಡೆಯಲಿದ್ದು, 2ನೇ ಹಾಗೂ 3ನೇ ಟೆಸ್ಟ್‌ಗಳು ಕ್ರಮವಾಗಿ ಪುಣೆ ಹಾಗೂ ಮುಂಬೈನಲ್ಲಿ ನಡೆಯಲಿವೆ. ಬೆಂಗಳೂರು ಟೆಸ್ಟ್ ಪಂದ್ಯಕ್ಕೆ ಮೈಕಲ್ ಬ್ರೇಸ್‌ವೆಲ್ ಉಪಸ್ಥಿತರಿರಲಿದ್ದಾರೆ. ಇದಾದ ಬಳಿಕ ತವರಿಗೆ ವಾಪಾಸ್ಸಾಗಲಿದ್ದಾರೆ. ಹೀಗಾಗಿ ಎರಡು ಹಾಗೂ ಮೂರನೇ ಟೆಸ್ಟ್ ಪಂದ್ಯಕ್ಕೆ ನೀಳಕಾಯದ ಲೆಗ್ ಸ್ಪಿನ್ನರ್ ಇಶ್ ಸೋಧಿ ಕಿವೀಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. 

Tap to resize

Latest Videos

undefined

ಲಂಕಾ ಎದುರು ಗುಡುಗಿನ ಹರ್ಮನ್‌ಪ್ರೀತ್ ಕೌರ್: ಭಾರತದ ಸೆಮೀಸ್ ಆಸೆ ಜೀವಂತ

ತಂಡ: ಟಾಮ್‌ ಲೇಥಮ್‌ (ನಾಯಕ), ಟಾಮ್‌ ಬ್ಲಂಡೆಲ್‌, ಮೈಕಲ್‌ ಬ್ರೇಸ್‌ವೆಲ್‌ (ಮೊದಲ ಟೆಸ್ಟ್‌ಗೆ ಮಾತ್ರ), ಮಾರ್ಕ್‌ ಚಾಪ್ಮನ್‌, ಡೆವೊನ್‌ ಕಾನ್‌ವೇ, ಮ್ಯಾಟ್‌ ಹೆನ್ರಿ, ಡ್ಯಾರೆಲ್‌ ಮಿಚೆಲ್‌, ವಿಲ್‌ ಓ’ ರೌರ್ಕೆ, ಅಜಾಜ್‌ ಪಟೇಲ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌, ಬೆನ್‌ ಸೀರ್ಸ್‌, ಇಶ್‌ ಸೋಧಿ (2, 3ನೇ ಟೆಸ್ಟ್‌ಗೆ), ಟಿಮ್‌ ಸೌಥಿ, ಕೇನ್‌ ವಿಲಿಯಮ್ಸನ್‌, ವಿಲ್‌ ಯಂಗ್‌.

ಟಿ20 ರ್‍ಯಾಂಕಿಂಗ್‌: 8ನೇ ಸ್ಥಾನಕ್ಕೆ ಏರಿಕೆ ಕಂಡ ಅರ್ಶ್‌ದೀಪ್ ಸಿಂಗ್

ದುಬೈ: ಭಾರತದ ಯುವ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಐಸಿಸಿ ಟಿ20 ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಅಗ್ರ -10ರಲ್ಲಿ ಪಡೆದಿದ್ದಾರೆ. ಬಾಂಗ್ಲಾದೇಶ ಸರಣಿ ಸೇರಿ ಇತ್ತೀಚಿಗಿನ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿ ರುವ ಅರ್ಶ್ ದೀಪ್ ಸದ್ಯ 8ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಟಿ20 ವಿಶ್ವಕಪ್‌ನಲ್ಲೂ ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದರು. ಅಗ್ರ -10ರ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಬೌಲರ್ ಎನಿಸಿದ್ದಾರೆ. ಇಂಗ್ಲೆಂಡ್‌ನ ಆದಿಲ್ ರಶೀದ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಟೆಸ್ಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಇಂಗ್ಲೆಂಡ್ ಆಟಗಾರ ಜೋ ರೂಟ್

ಮುಲ್ತಾನ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನ್ನುವ ದಾಖಲೆಯನ್ನು ಜೋ ರೂಟ್ ಬರೆದಿದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್ ಗಳಿಸಿದಾಗ ರೂಟ್, ಕುಕ್ ಅವರ 12,472 ರನ್‌ಗಳ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದರು. ಸದ್ಯ ರೂಟ್ ಸಾರ್ವಕಾಲಿಕ ಅಧಿಕ ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. 

ರಿಂಕು-ನಿತೀಶ್ ಅಬ್ಬರಕ್ಕೆ ಬಾಂಗ್ಲಾದೇಶ ತಬ್ಬಿಬ್ಬು; ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆದ್ದ ಭಾರತ

ಸಚಿನ್, ಪಾಂಟಿಂಗ್, ಕಾಲಿಸ್ ಹಾಗೂ ದ್ರಾವಿಡ್ ಮೊದಲ 4 ಸ್ಥಾನಗಳಲ್ಲಿದ್ದಾರೆ. ಇದೇ ವೇಳೆ ಟೆಸ್ಟ್‌ನಲ್ಲಿ 35ನೇ ಶತಕ ಪೂರೈಸಿದ ರೂಟ್, ತಲಾ 34 ಶತಕ ಬಾರಿಸಿರುವ ಗವಾಸ್ಕರ್, ಲಾರಾ, ಜಯವರ್ಧನೆ, ಯೂನಿಸ್ ಖಾನ್‌ರನ್ನು ಹಿಂದಿಕ್ಕಿದರು.

1ನೇ ಟೆಸ್ಟ್: ಪಾಕ್‌ಗೆ ಇಂಗ್ಲೆಂಡ್ ದಿಟ್ಟ ಉತ್ತರ

ಮುಲ್ತಾನ್: 'ಹೈವೇ' ಎಂದು ಕರೆಸಿಕೊಳ್ಳುತ್ತಿರುವ ಇಲ್ಲಿನ ಪಿಚ್‌ನಲ್ಲಿ ಆತಿಥೇಯ ಪಾಕಿಸ್ತಾನ ತಂಡದಂತೆಯೇ ಪ್ರವಾಸಿ ಇಂಗ್ಲೆಂಡ್ ಸಹ ರನ್ ಹೊಳೆಯನ್ನೇ ಹರಿಸುತ್ತಿದೆ. ಪಾಕ್‌ನ ಮೊದಲ ಇನ್ನಿಂಗ್ಸ್ ಮೊತ್ತ 556 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ನಲ್ಲಿ 3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 492 ರನ್ ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆ ಸಾಧಿಸುವತ್ತ ಚಿತ್ತ ನೆಟ್ಟಿದೆ. 

ಜೋ ರೂಟ್ ಔಟಾಗದೆ 176 ಹಾಗೂ ಹ್ಯಾರಿ ಬ್ರೂಕ್ ಔಟಾಗದೆ 141 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೆರಡು ದಿನ ಬಾಕಿ ಇದ್ದು, ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ.

click me!