ಲಂಕಾ ಎದುರು ಗುಡುಗಿನ ಹರ್ಮನ್‌ಪ್ರೀತ್ ಕೌರ್: ಭಾರತದ ಸೆಮೀಸ್ ಆಸೆ ಜೀವಂತ

By Kannadaprabha News  |  First Published Oct 10, 2024, 10:47 AM IST

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಲಂಕಾ ಎದುರು ಭರ್ಜರಿ ಗೆಲುವು ಸಾಧಿಸುವುದರ ಜತೆಗೆ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ


ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಭಾರತದ ಕನಸು ಜೀವಂತವಾಗಿದೆ. ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾವನ್ನು 82 ರನ್‌ಗಳಿಂದ ಹೊಸಕಿ ಹಾಕಿದ ಭಾರತ, 'ಎ' ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಗಲಿದ್ದು, ಆ ಪಂದ್ಯದ ಫಲಿತಾಂಶ ಭಾರತದ ಸೆಮೀಸ್ ಭವಿಷ್ಯವನ್ನು ನಿರ್ಧರಿಸಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 20 ಓವರಲ್ಲಿ 3  ವಿಕೆಟ್‌ಗೆ 172 ರನ್ ಕಲೆಹಾಕಿದರೆ, ಭಾರತದ ಬೌಲಿಂಗ್ ದಾಳಿಗೆ ನಲುಗಿದ ಲಂಕಾ 19.5 ಓವರಲ್ಲಿ ಕೇವಲ 90 ರನ್‌ಗೆ ಆಲೌಟ್ ಆಯಿತು. ಭಾರತೀಯ ಇನ್ನಿಂಗ್ಸ್ ಆಕರ್ಷಕ ಆಟದಿಂದ ಕೂಡಿತ್ತು. ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 98 ರನ್ ಗಳ ಜೊತೆಯಾಟವಾಡಿ, ಭದ್ರ ಬುನಾದಿ ಹಾಕಿಕೊಟ್ಟರು. ಶಫಾಲಿ 43 ರನ್ ಗಳಿಸಿ ಔಟಾದರೆ, ಸ್ಮೃತಿ 38 ಎಸೆತದಲ್ಲಿ 50 ರನ್‌ಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಸತತ 2 ಎಸೆತಗಳಲ್ಲಿ ಆರಂಭಿಕರಿಬ್ಬ ರನ್ನೂ ಕಳೆದುಕೊಂಡ ಭಾರತಕ್ಕೆ ಸ್ವಲ್ಪ ಮಟ್ಟಿಗಿನ ಹಿನ್ನಡೆ ಆಯಿತು. ಆದರೆ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಬ್ಬರದ ಆಟ ಲಂಕನ್ನರನ್ನು ನಡುಗಿಸಿತು. ಕೇವಲ 27 ಎಸೆತದಲ್ಲಿ 8 ಬೌಂಡರಿ, ಸಿಕರ್‌ನೊಂದಿಗೆ 52 ರನ್ ಸಿಡಿಸಿ, ಭಾರತ ದೊಡ್ಡ ಮೊತ್ತ ದಾಖಲಿಸಲು ಕಾರಣರಾದರು.

Tap to resize

Latest Videos

undefined

ರಿಂಕು-ನಿತೀಶ್ ಅಬ್ಬರಕ್ಕೆ ಬಾಂಗ್ಲಾದೇಶ ತಬ್ಬಿಬ್ಬು; ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆದ್ದ ಭಾರತ

ಲಂಕಾ ಪತನ: ವಿಶ್ವಕಪ್‌ನಲ್ಲಿ ಬಳಕೆಯಾಗುತ್ತಿರುವ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಲಂಕಾ ಬೃಹತ್ ಗುರಿ ಬೆನ್ನತ್ತಬೇಕಾದ ಅನಿವಾರ್ಯತೆ ಸಿಲುಕಿದಂತೆ ಕಂಡು ಬಂತು. ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ರಾಧಾ ಯಾದವ್‌ ಹಿಡಿದ ಅಮೋಘ ಕ್ಯಾಚ್‌ನ ಪರಿಣಾಮ, ಭಾರತಕ್ಕೆ ಮೊದಲ ವಿಕೆಟ್ ದೊರೆಯಿತು. ಅಪಾಯಕಾರಿ ಚಾಮರಿ ಅಟಪಟ್ಟುರನ್ನು ಕನ್ನಡತಿ ಶ್ರೇಯಾಂಕ ಪಾಟೀಲ್ ಪೆವಿಲಿಯನ್‌ಗೆ ಕಳುಹಿಸಿದರು.
ನೋಡನೋಡುತ್ತಿದ್ದಂತೆ ಲಂಕನ್ನರ ವಿಕೆಟ್‌ಗಳು ಪತನಗೊಂಡವು. ಕವಿಶಾ ದಿಲ್ಟರಿ(21) ಹಾಗೂ ಅನುಷ್ಕಾ ಸಂಜೀವನಿ (20) ಹೊರತು ಪಡಿಸಿ ಲಂಕಾದ ಉಳಿದ್ಯಾವ ಬ್ಯಾಟರ್‌ಗಳು 20 ರನ್ ತಲುಪಲಿಲ್ಲ. ಲಂಕಾ 19.5 ಓವರಲ್ಲಿ 90 ರನ್‌ಗೆ ಆಲೌಟ್ ಆಯಿತು.

ಪಾಕಿಸ್ತಾನ, ಕಿವೀಸನ್ನು ಹಿಂದಿಕ್ಕಿದ ಭಾರತ ತಂಡ

ಈ ಪಂದ್ಯಕ್ಕೂ ಮುನ್ನ 'ಎ' ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಭಾರತ, ಬೃಹತ್ ಗೆಲುವಿನಿಂದ 2ನೇ ಸ್ಥಾನಕ್ಕೇ ರಿದೆ. -1.217 ಇದ್ದ ಭಾರತದ ನೆಟ್ ರನ್‌ಟ್ +0.576ಕ್ಕೆ ಏರಿಕೆಯಾಗಿದ್ದು, ತಂಡ ಸೆಮೀಸ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಹೇಳಿದ್ದು ಒಂದೇ ಸುಳ್ಳು ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟಿಗನ ಬದುಕು ನುಚ್ಚುನೂರು; ಈಗ ಈತ ಯೂಟ್ಯೂಬರ್!

ಸ್ಕೋರ್: 
ಭಾರತ 20 ಓವರಲ್ಲಿ 172/3 (ಹರ್ಮನ್‌ ಪ್ರೀತ್ 52*, ಸ್ಮೃತಿ 50, ಶಫಾಲಿ 43, ಚಾಮರಿ 1-34), 
ಶ್ರೀಲಂಕಾ 19.5 ಓವರಲ್ಲಿ 90/10 (ಕವಿಶಾ 21, ಅನುಷ್ಕಾ 20, ಆಶಾ 3-19, ಅರುಂಧತಿ 3-19) 
ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್ ಕೌರ್
 

click me!