New Covid 19 variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಅತಂತ್ರ..?

By Suvarna News  |  First Published Nov 27, 2021, 9:59 AM IST

* ಆಫ್ರಿಕಾದಾದ್ಯಂತ ಹೆಚ್ಚಾಗುತ್ತಿದೆ ಹೊಸ ಕೋವಿಡ್‌ ರೂಪಾಂತರ ತಳಿ

* ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿರುವ ಭಾರತ

* ಸರ್ಕಾರದ ತೀರ್ಮಾನವನ್ನು ಎದುರು ನೋಡುತ್ತಿದೆ ಬಿಸಿಸಿಐ


ನವದೆಹಲಿ(ನ.27): ಕೊರೋನಾ ವೈರಸ್‌ನ (Coronavirus) ರೂಪಾಂತರ ತಳಿ ಬೋಟ್ಸ್‌ವಾನಾ (Botswana) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಭಾರತ ಕ್ರಿಕೆಟ್‌ ತಂಡ (Indian Cricket Team) ಕೈಗೊಳ್ಳಬೇಕಿರುವ ದಕ್ಷಿಣ ಆಫ್ರಿಕಾ ಪ್ರವಾಸದ (South Africa Tour) ಮೇಲೆ ಕರಿನೆರಳು ಆವರಿಸಿದೆ. ಸರ್ಕಾರದ ಸಲಹೆ ಆಧರಿಸಿದ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ (BCCI) ಮೂಲಗಳು ತಿಳಿಸಿವೆ.

ಇನ್ನು 3 ಅನಧಿಕೃತ ಟೆಸ್ಟ್‌ ಒಳಗೊಂಡಂತೆ ಭಾರತ ‘ಎ’ (India 'A') ತಂಡ ಕೈಗೊಂಡಿರುವ ದಕ್ಷಿಣ ಆಫ್ರಿಕಾದ ಪ್ರವಾಸ  ಈ ಅನಿಶ್ಚಿತ ಪರಿಸ್ಥಿತಿಯಿಂದ ಅರ್ಧದಲ್ಲೇ ರದ್ದಾಗುವ ಸಾಧ್ಯತೆಯೂ ದಟ್ಟವಾಗಿದೆ. ಮಳೆದ ಕಾರಣ ಭಾರತ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ನಡುವಿನ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ನವೆಂಬರ್ 29ರಿಂದ 2ನೇ ಟೆಸ್ಟ್‌ ಆರಂಭಗೊಳ್ಳಲಿದೆ. ತಂಡ ಸದ್ಯ ಬಯೋ-ಬಬಲ್‌ನಲ್ಲಿದ್ದು(Bio Bubble), ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿವೆ.

Tap to resize

Latest Videos

undefined

ಇನ್ನು ಡಿಸೆಂಬರ್ 17ರಿಂದ ಆರಂಭವಾಗಲಿರುವ ಸುಮಾರು 7 ವಾರಗಳ ಪ್ರವಾಸದಲ್ಲಿ ಟೀಂ ಇಂಡಿಯಾ (Team India) 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ-20 ಪಂದ್ಯಗಳನ್ನು ಆಡಲಿದೆ. ಜೋಹಾನ್ಸ್‌ಬರ್ಗ್‌, ಸೆಂಚುರಿಯನ್‌, ಪಾರ್ಲ್‌ ಮತ್ತು ಕೇಪ್‌ಟೌನ್‌ನಲ್ಲಿ ಪಂದ್ಯಗಳು ನಡೆಯಲಿವೆ. ಟೆಸ್ಟ್‌ ಪಂದ್ಯಗಳು ನಡೆಯಲಿರುವ ದೇಶದ ಉತ್ತರ ಭಾಗವಾದ ಜೋಹಾನ್ಸ್‌ಬರ್ಗ್‌ ಹಾಗೂ ಪ್ರಿಟೋರಿಯ(ಸೆಂಚುರಿಯನ್‌ ಸಮೀಪ)ದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೂಪಾಂತರಿ ತಳಿ ಹರಡುವ ಆತಂಕ ಎದುರಾಗಿದೆ.

Botswana variant: ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ ಕೋವಿಡ್‌ನ ಹೊಸ ರೂಪಾಂತರಿ ಪತ್ತೆ!

‘ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ) (Cricket South Africa) ದಿಂದ ಅಲ್ಲಿನ ಪರಿಸ್ಥಿತಿ ಕುರಿತು ವಿವರವಾದ ಚಿತ್ರಣ ಸಿಗುವ ತನಕ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಂಬೈನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಮುಕ್ತಾಯ ಆಗುತ್ತಿದ್ದಂತೆ ಭಾರತ ತಂಡವು ಡಿಸೆಂಬರ್ 8 ಅಥವಾ 9ರಂದು ಆಫ್ರಿಕಾಗೆ ತೆರಳುವ ಸಾಧ್ಯತೆಯಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಮುಂದಿನ 24ರಿಂದ 48 ಗಂಟೆಯೊಳಗೆ ಸರಣಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ವಿಮಾನಗಳ ಲಭ್ಯತೆ ಸಹ ಪರಿಗಣಿಸಲಾಗುವುದು’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಈಗಾಗಲೇ ಯೂರೋಪಿಯನ್‌ ಒಕ್ಕೂಟವು ತಾತ್ಕಾಲಿಕವಾಗಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ನೆದರ್‌ಲೆಂಡ್ಸ್‌ ಪ್ರವಾಸ ರದ್ದು?

ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ನೆದರ್‌ಲೆಂಡ್ಸ್‌ ತನ್ನ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಲಿದ್ದು, ವಾಪಸ್‌ ಮರಳಲಿದೆ ಎಂದು ಹೇಳಲಾಗಿದೆ. ಮೊದಲ ಏಕದಿನ ಪಂದ್ಯವು ಕೋವಿಡ್ ಭೀತಿಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್ ಕಳೆದುಕೊಂಡು 277 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ನೆದರ್‌ಲೆಂಡ್‌ ತಂಡವು 2 ಓವರ್ ಅಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 11 ರನ್‌ ಗಳಿಸಿತ್ತು. ಇದಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಈ ಪಂದ್ಯವನ್ನು ರದ್ದು ಮಾಡಲಾಯಿತು.

ಟೆಸ್ಟ್‌: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಮೇಲುಗೈ

ಚಿತ್ತಗಾಂಗ್‌: ಲಿಟನ್‌ ದಾಸ್‌ (Liton Das) ಭರ್ಜರಿ ಶತಕ ಹಾಗೂ ಮುಷ್ಪಿಕುರ್‌ ರಹೀಂ (Mushfiqur Rahim) ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ತಂಡ (Bangladesh Cricket Team) ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಆರಂಭಿಕ ಕುಸಿತದ ಹೊರತಾಗಿಯೂ ಆತಿಥೇಯ ಬಾಂಗ್ಲಾ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿದೆ.

ಶದ್ಮನ್‌, ಸೈಫ್‌ ಹಾಗೂ ನಜ್ಮುಲ್‌ ತಲಾ 14 ರನ್‌ ಬಾರಿಸಿದರೆ, ನಾಯಕ ಮೋಮಿನುಲ್‌ ಹಕ್‌ 6 ರನ್‌ಗೆ ವಿಕೆಟ್‌ ಒಪ್ಪಿಸಿದರು. 49 ರನ್‌ಗೆ 4 ವಿಕೆಟ್‌ ಕಳೆದುಕೊಂಡ ತಂಡಕ್ಕೆ ರಹೀಂ-ದಾಸ್‌ ಜೋಡಿ ಮುರಿಯದ 204 ರನ್‌ ಜೊತೆಯಾಟದ ಮೂಲಕ ಆಸರೆಯಾದರು. ದಾಸ್‌ ಅಜೇಯ 113 ರನ್‌ ಸಿಡಿಸಿದರೆ, ರಹೀಂ 82 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

click me!