
ಕಾನ್ಪುರ(ನ.26): ಕ್ರಿಕೆಟ್ ಪಂದ್ಯದ ನಡುವೆ ಅಭಿಮಾನಿಗಳು(Fans) ರಾತ್ರೋರಾತ್ರಿ ಹೀರೋಗಳಾಗುವುದು ಇದೇ ಮೊದಲಲ್ಲ. ಹಲವು ಪಂದ್ಯಗಳಲ್ಲಿ ವಿಶೇಷ ಅಭಿಮಾನಿಗಳು ಕ್ಯಾಮಾರ ಕಣ್ಣಿಗೆ ಸಿಕ್ಕಿ ಸಿಕ್ಕಾಪಟ್ಟೆ ಜನಪ್ರಿಯವಾದ ಅದೆಷ್ಟೋ ಉದಾಹರಣೆಗಳಿವೆ. 2019ರ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ನಡುವೆ ನಿರಾಸೆ ಗೊಂಡ ಪಾಕ್ ಅಭಿಮಾನಿ ಫೋಟೋ ಇನ್ನೂ ಹರಿದಾಡುತ್ತಲೇ ಇದೆ. ಇದೀಗ ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್(India vs New zealand test) ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿ ಫೇಮಸ್ ಆಗಿದ್ದಾನೆ. ಬಾಯಲ್ಲಿ ಗುಟ್ಕಾ ಹಾಕಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿರುವ ಈ ಅಭಿಮಾನಿ ಕುರಿತ ಮೀಮ್ಸ್ ಸಾಕಷ್ಟು ಸದ್ದು ಮಾಡುತ್ತಿದೆ.
ಉತ್ತರ ಪ್ರದೇಶದ ಕಾನ್ಪುರ ನಗರ ಪಾನ್ ಮಸಾಲೆಗೆ ಹೆಚ್ಚು ಪ್ರಸಿದ್ದಿ. ಇಲ್ಲಿ ಬಹುತೇಕರು ಪಾನ್ ಹಾಕದೆ ಒಂದು ಹೆಜ್ಜೆ ಮುಂದಿಡಲ್ಲ. ಹೀಗಾಗಿ ಗುಟ್ಕಾ ಅಭಿಮಾನಿ ಮತ್ತಷ್ಟು ಪ್ರಸಿದ್ಧಿಯಾಗಿದ್ದಾನೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ(Test Match) ಮೊದಲ ದಿನ ಈ ಗುಟ್ಕಾ ಅಭಿಮಾನಿ(Gutkha Fan) ಕ್ಯಾಮಾರ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಒಂದೆರಡು ಸೆಕೆಂಡ್ ಕ್ಯಾಮಾರದಲ್ಲಿ ಕಾಣಿಸಿಕೊಂಡ ಗುಟ್ಕಾ ಅಭಿಮಾನಿ, ಒಂದೇ ದಿನದಲ್ಲಿ ಭಾರತದಲ್ಲೇ ಫೇಮಸ್ ಆಗಿದ್ದಾನೆ.
Ind vs NZ Kanpur Test: ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ..!
ಶ್ರೇಯಸ್ ಅಯ್ಯರ್(Shreyas Iyer) ಹಾಗೂ ರವೀಂದ್ರ ಜಡೇಜಾ(Ravindra Jadeja) ಬ್ಯಾಟಿಂಗ್ ವೇಳೆ ಕ್ಯಾಮಾರ ಅಭಿಮಾನಿಗಳ ಗ್ಯಾಲರಿಯತ್ತ ತಿರುಗಿದೆ. ಈ ವೇಳೆ ಗುಟ್ಕಾ ಬಾಯಲ್ಲಿ ಹಾಕಿಕೊಂಡು ಕಷ್ಟಪಟ್ಟು ಫೋನ್‌ನಲ್ಲಿ ಮಾತನಾಡುತ್ತಿರು ಅಭಿಮಾನಿ ಸೆರೆ ಸಿಕ್ಕಿದ್ದಾನೆ. ಈತನ ಮಾತು, ಶೈಲಿ ಒಂದೇ ಕ್ಷಣದಲ್ಲಿ ಆಕರ್ಷಿತವಾಗಿದೆ. ಇದೇ ಕಾರಣಕ್ಕೆ ಟ್ರೋಲ್ ಹಾಗೂ ಮೀಮ್ಸ್‌ಗೆ ಗುಟ್ಕಾ ಅಭಿಮಾನಿ ಆಹಾರವಾಗಿದ್ದಾನೆ.
ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಈ ಕುರಿತು ಟ್ವಿಟರ್ ಮೂಲಕ ಮೀಮ್ಸ್(memes) ಹರಿಬಿಟ್ಟಿದ್ದರು. ಅಷ್ಟರಲ್ಲೇ ಗುಟ್ಕಾ ಕ್ರಿಕೆಟ್ ಅಭಿಮಾನಿ ಭಾರತದಲ್ಲಿ ಸಂಚಲನ ಮೂಡಿಸಿದ್ದಾನೆ. ಸೂಪಾರಿ ಉಗುಳಿ ಮಾತನಾಡು ಎಂದು ವಾಸಿಮ್ ಜಾಫರ್ ಮೀಮ್ಸ್ ಹಾಕಿದ್ದರು. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಗುಟ್ಕಾ ಕ್ರಿಕೆಟ್ ಅಭಿಮಾನಿಯ ಮೀಮ್ಸ್‌ನಿಂದ ತುಂಬಿಹೋಗಿದೆ.
Ind vs NZ Kanpur Test: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಚಚ್ಚಿ ದಾಖಲೆ ಬರೆದ ಶ್ರೇಯಸ್ ಅಯ್ಯರ್..!
ಗುಟ್ಕಾ ಕ್ರಿಕೆಟ್ ಅಭಿಮಾನಿ ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಿಂತ ಹೆಚ್ಚು ಸದ್ಧು ಮಾಡುತ್ತಿದ್ದಾನೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮೊತ್ತ ಪೇರಿಸಿದೆ. ಇತ್ತ ನ್ಯೂಜಿಲೆಂಡ್ ಕೂಡ ದಿಟ್ಟ ಹೋರಾಟ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 345 ರನ್ ಸಿಡಿಸಿದೆ. ಶ್ರೇಯಸ್ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನು ರವೀಂದ್ರ ಜಡೇಜಾ ಹಾಗೂ ಶುಭ್‌ಮನ್ ಗಿಲ್ ಹಾಫ್ ಸೆಂಚುರಿ ಮೂಲಕ ನೆರವಾಗಿದ್ದಾರೆ.
ಮಯಾಂಕ್ ಅಗರ್ವಾಲ್ 13 ರನ್ ಸಿಡಿಸಿದರೆ, ಶುಭ್‌ಮನ್ ಗಿಲ್ 52 ರನ್ ಕಾಣಿಕೆ ನೀಡಿದರು. ಚೇತೇಶ್ವರ್ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಬೃಹತ್ ಮೊತ್ತ ಪೇರಿಸಲಿಲ್ಲ. ಪೂಜಾರ 26 ರನ್ ಸಿಡಿಸಿ ಔಟಾದರೆ, ರಹಾನೆ 35 ರನ್ ಸಿಡಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಜೊತೆಯಾಟ ಟೀಂ ಇಂಡಿಯಾಗೆ ಚೇತರಿಕೆ ನೀಡಿತು. ಅಯ್ಯರ್ 105 ರನ್ ಸಿಡಿಸಿದರೆ, ಜಡೇಜಾ 50 ರನ್ ಸಿಡಿಸಿದರು. ವೃದ್ಧಿಮಾನ್ ಸಾಹ ಕೇವಲ 1 ರನ್ ಸಿಡಿಸಿದರು. ಆರ್ ಅಶ್ವಿನ್ 38 ರನ್ ಕಾಣಿಕೆ ನೀಡಿದರು.
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಾಮ್ ಲಾಥಮ್ ಹಾಗೂ ವಿಲ್ ಯಂಗ್ ಜೊತೆಯಾಟ ಟೀಂ ಇಂಡಿಯಾ ಚಿಂತೆ ಹೆಚ್ಚಿಸಿದೆ. ಆರಂಭಿಕರ ಜೊತೆಯಾಟಕ್ಕೆ 2ನೇ ದಿನದಲ್ಲಿ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಲಾಥಮ್ ಅಜೇಯ 50 ರನ್ ಸಿಡಿಸಿದ್ದರೆ, ವಿಲ್ ಯಂಗ್ ಅಜೇಯ 75 ರನ್ ಸಿಡಿಸಿದ್ದಾರೆ. ವಿಕೆಟ್ ನಷ್ಟವಿಲ್ಲದೆ ನ್ಯೂಜಿಲೆಂಡ್ 129 ರನ್ ಸಿಡಿಸಿದೆ. ಈ ಮೂಲಕ 216 ರನ್ ಹಿನ್ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.