Latest Videos

ನೆಟ್‌ಫ್ಲಿಕ್ಸ್‌ ಸೀರಿಸ್ ಆಗಲಿದೆ ಭಾರತ vs ಪಾಕಿಸ್ತಾನ ಕ್ರಿಕೆಟ್ ಕದನ..!

By Naveen KodaseFirst Published Mar 2, 2024, 11:53 AM IST
Highlights

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಸಾಕ್ಷ್ಯಚಿತ್ರ ಒಳಗೊಳ್ಳಲಿದೆ. ಕೇವಲ ಕ್ರಿಕೆಟ್‌ಗೆ ಸೀಮಿತವಾ ಗಿರದೆ ಭಾರತ-ಪಾಕ್‌ ನಡುವಿನ ಗಡಿ ಮತ್ತು ಇತರೆ ವಿಚಾರಗಳ ಮೇಲೂ ಬೆಳಕು ಚೆಲ್ಲಬಹುದು. ದೊಡ್ಡ ಮಟ್ಟದ ಸೆಣಸಾಟಗಳಲ್ಲಿ ಏರ್ಪಡುವ ಮಾನಸಿಕ ಘರ್ಷಣೆಯ ಕುರಿತು ವಿವರವಾದ ವಿಶ್ಲೇಷಣೆಯ ಮೂಲಕ ಕ್ರಿಕೆಟ್‌ ಜಗತ್ತಿನ ಇನ್ನಷ್ಟು ಆಳಕ್ಕೆ ಹೋಗುವ ನಿರೀಕ್ಷೆಯಿದೆ.

ನವದೆಹಲಿ(ಮಾ.02): ಕ್ರಿಕೆಟ್‌ ಜಗತ್ತಿನ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಸೆಣಸಾಟದ ಕುರಿತ ಸಾಕ್ಷ್ಯಚಿತ್ರ ನಿರ್ಮಿಸುವುದಾಗಿ ಖ್ಯಾತ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್‌ ಘೋಷಣೆ ಮಾಡಿದೆ. ಈಗಾಗಲೇ "ದಿ ಗ್ರೇಟೆಸ್ಟ್‌ ರೈವಲ್ರಿ" ಎಂಬ ಶೀರ್ಷಿಕೆಯಡಿ ಸಾಕ್ಷ್ಯಚಿತ್ರ ಸರಣಿಯ ಫಸ್ಟ್‌ಲುಕ್‌ ವಿಡಿಯೋ ಬಿಡುಗಡೆಯಾಗಿದೆ. ಕಪಿಲ್‌ ದೇವ್‌ ಹಾಗೂ ಇಮ್ರಾನ್‌ ಖಾನ್‌ ವಿಶ್ವಕಪ್‌ ಟ್ರೋಫಿ ಹಿಡಿದಿರುವ ಹಾಗೂ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕುರಿತ ದೃಶ್ಯಗಳು ಫಸ್ಟ್‌ಲುಕ್‌ನಲ್ಲಿದ್ದು, ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಸೀರಿಸ್‌ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಸಾಕ್ಷ್ಯಚಿತ್ರ ಒಳಗೊಳ್ಳಲಿದೆ. ಕೇವಲ ಕ್ರಿಕೆಟ್‌ಗೆ ಸೀಮಿತವಾ ಗಿರದೆ ಭಾರತ-ಪಾಕ್‌ ನಡುವಿನ ಗಡಿ ಮತ್ತು ಇತರೆ ವಿಚಾರಗಳ ಮೇಲೂ ಬೆಳಕು ಚೆಲ್ಲಬಹುದು. ದೊಡ್ಡ ಮಟ್ಟದ ಸೆಣಸಾಟಗಳಲ್ಲಿ ಏರ್ಪಡುವ ಮಾನಸಿಕ ಘರ್ಷಣೆಯ ಕುರಿತು ವಿವರವಾದ ವಿಶ್ಲೇಷಣೆಯ ಮೂಲಕ ಕ್ರಿಕೆಟ್‌ ಜಗತ್ತಿನ ಇನ್ನಷ್ಟು ಆಳಕ್ಕೆ ಹೋಗುವ ನಿರೀಕ್ಷೆಯಿದೆ.

ಐರ್ಲೆಂಡ್‌ಗೆ ಚೊಚ್ಚಲ ಟೆಸ್ಟ್‌ ಜಯದ ಸಿಹಿ!

ಅಬು ಧಾಬಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಐರ್ಲೆಂಡ್‌ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಚೊಚ್ಚಲ ಟೆಸ್ಟ್‌ ಗೆಲುವಿನ ಸಂಭ್ರಮ ಆಚರಿಸಿದೆ. ತಾನಾಡಿದ 8ನೇ ಪಂದ್ಯದಲ್ಲಿ ಐರ್ಲೆಂಡ್‌ಗೆ ಮೊದಲ ಜಯ ದಕ್ಕಿದೆ. ಗೆಲ್ಲಲು 111 ರನ್‌ ಗುರಿ ಬೆನ್ನತ್ತಿದ ಐರಿಷ್‌ ಪಡೆ 31.3 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಜಯಿಸಿತು. ನಾಯಕ ಆ್ಯಂಡಿ ಬಾಲ್ಬರ್ನಿ ಔಟಾಗದೆ 58 ರನ್‌ ಗಳಿಸಿದರು. 2ನೇ ಇನ್ನಿಂಗ್ಸಲ್ಲಿ ಆಫ್ಘನ್‌ 218 ರನ್‌ ಗಳಿಸಿತ್ತು.

ಅಯ್ಯರ್, ಕಿಶನ್ ಮಾತ್ರವಲ್ಲ; ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರಿವರು..!

ಸ್ಕೋರ್‌: ಅಫ್ಘಾನಿಸ್ತಾನ 155 ಹಾಗೂ 218, ಐರ್ಲೆಂಡ್‌ 263 ಹಾಗೂ 111/4

ಮೊದಲ ಟೆಸ್ಟ್‌ ಜಯಕ್ಕೆ ತೆಗೆದುಕೊಂಡ ಪಂದ್ಯಗಳು

ತಂಡ ಟೆಸ್ಟ್‌

ಆಸ್ಟ್ರೇಲಿಯಾ 01

ಇಂಗ್ಲೆಂಡ್‌ 02

ಪಾಕಿಸ್ತಾನ 02

ಅಫ್ಘಾನಿಸ್ತಾನ 02

ವಿಂಡೀಸ್‌ 06

ಐರ್ಲೆಂಡ್‌ 08

ಜಿಂಬಾಬ್ವೆ 11

ದ.ಆಫ್ರಿಕಾ 12

ಶ್ರೀಲಂಕಾ 14

ಭಾರತ 25

ಬಾಂಗ್ಲಾದೇಶ 35

ನ್ಯೂಜಿಲೆಂಡ್‌ 45

12 ವರ್ಷದಲ್ಲಿ ಮೊದಲ ಸಲ ಕೇನ್‌ ರನೌಟ್‌!

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ದಿಗ್ಗಜ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌ 12 ವರ್ಷಗಳಲ್ಲಿ ಮೊದಲ ಸಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ರನೌಟ್‌ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ 2ನೇ ದಿನವಾದ ಶುಕ್ರವಾರ, ಮೊದಲ ಇನ್ನಿಂಗ್ಸಲ್ಲಿ ಕೇನ್‌ ಖಾತೆ ತೆರೆಯದೆ ರನೌಟ್‌ ಆದರು. 2012ರಲ್ಲಿ ಅವರು ಕೊನೆಯ ಬಾರಿಗೆ ರನೌಟ್‌ ಬಲೆಗೆ ಬಿದ್ದಿದ್ದರು.

ಟೆಸ್ಟ್‌: ನ್ಯೂಜಿಲೆಂಡ್‌ ವಿರುದ್ಧ ಆಸೀಸ್‌ಗೆ ಇನ್ನಿಂಗ್ಸ್‌ ಮುನ್ನಡೆ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸಲ್ಲಿ ದೊಡ್ಡ ಮುನ್ನಡೆ ಪಡೆದ ಆಸ್ಟ್ರೇಲಿಯಾ, 2ನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಮೊತ್ತ ದಾಖಲಿಸಿ, ಆತಿಥೇಯರಿಗೆ ಗೆಲ್ಲಲು ದೊಡ್ಡ ಗುರಿ ನಿಗದಿಪಡಿಸುವ ನಿರೀಕ್ಷೆಯಲ್ಲಿದೆ. ಮೊದಲ ದಿನದಂತ್ಯಕ್ಕೆ 9 ವಿಕೆಟ್‌ಗೆ 279 ರನ್‌ ಗಳಿಸಿದ್ದ ಆಸೀಸ್‌, ಶುಕ್ರವಾರ ಆ ಮೊತ್ತಕ್ಕೆ ಇನ್ನೂ 104 ರನ್‌ ಸೇರಿಸಿತು. ಕ್ಯಾಮರೂನ್‌ ಗ್ರೀನ್‌ ಔಟಾಗದೆ 174 ರನ್‌ ಸಿಡಿಸಿ, 10ನೇ ವಿಕೆಟ್‌ಗೆ ಜೋಶ್‌ ಹೇಜಲ್‌ವುಡ್‌(22) ಜೊತೆ 116 ರನ್‌ ಕಲೆಹಾಕಿದರು. ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಕಿವೀಸ್‌, ಕೇವಲ 179 ರನ್‌ಗೆ ಆಲೌಟ್‌ ಆಯಿತು. 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 13 ರನ್‌ ಗಳಿಸಿರುವ ಆಸೀಸ್‌, ಒಟ್ಟಾರೆ 217 ರನ್‌ ಮುನ್ನಡೆ ಪಡೆದಿದೆ.
 

click me!