
ಲಂಡನ್(ಏ.02): ನಿಗದಿತ ಓವರ್ ಕ್ರಿಕೆಟ್ ಪಂದ್ಯದ ಮಡುವೆ ಮಳೆ ಬಂದು ತಾತ್ಕಾಲಿಕ ಸ್ಥಗಿತಗೊಂಡಾಗ, ಇತರ ಕಾರಣಗಳಿಂದ ಪಂದ್ಯದ ಸಮಯ ವ್ಯರ್ಥವಾದಾಗ ಡಕ್ವರ್ತ್ ಲೂಯಿಸ್ ನಿಮಯದ ಪ್ರಕಾರ ಮೊತ್ತ ನೀಡಲಾಗುತ್ತದೆ. 1999ರಿಂದ ಐಸಿಸಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಡಕ್‌ವರ್ತ್ ನಿಯಮ ಅನ್ವಯಿಸುತ್ತಿದೆ. ಇದೀಗ ಈ ನಿಯಮ ಅಭಿವೃದ್ದಿ ಪಡಿಸಿ ಕ್ರಿಕೆಟ್‌ನಲ್ಲಿ ಕ್ರಾಂತಿ ಮಾಡಿದ ಟೋನಿ ಲೂಯಿಸ್ ನಿಧನರಾಗಿದ್ದಾರೆ.
2011ರ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಇಲ್ಲಿದೆ ಟೀಂ ಇಂಡಿಯಾ ಐತಿಹಾಸಿಕ ಪಯಣದ ಚಿತ್ರ!.
78 ವರ್ಷದ ಲೂಯಿಸ್ ನಿಧನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂತಾಪ ಸೂಚಿಸಿದೆ. ಕ್ರಿಕೆಟ್‌ಗೆ ಲೂಯಿಸ್ ಕೊಡುಗೆ ಅಪಾರ. 2 ದಶಕಗಳ ಹಿಂದೆ ಲೂಯಿಸಿ ಅಭಿವೃದ್ದಿ ಪಡಿಸಿದ ನಿಯಮ ಈಗಲೂ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದೆ. ಲೂಯಿಸ್ ಕುಟುಂಬಕ್ಕೆ,ಗೆಳೆಯರಿಗೆ ಸಂತಾಪ ಸೂಚಿಸುತ್ತಿದ್ದೇವೆ ಎಂದು ಐಸಿಸಿ ಹೇಳಿದೆ.
ಗಣಿತಶಾಸ್ತ್ರಜ್ಞನಾಗಿದ್ದ ಟೋನಿ ಲೂಯಿಸ್ ಹಾಗೂ ಫ್ರಾಂಕ್ ಡಕ್ವರ್ತ್ ಜೊತೆಯಾಗಿ ಕ್ರಿಕೆಟ್ ನಿಯಮ ಅಭಿವೃದ್ಧಿ ಪಡಿಸಿದ್ದರು. ಬಳಿಕ ಇಬ್ಬರ ಹೆಸರನ್ನು ಈ ನಿಯಮಕ್ಕೆ ಇಡಲಾಯಿತು. ಶೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಹಾಗೂ ಸ್ಟಾಟಿಸ್ಟಿಕ್ಸ್ ಪದವಿ ಪಡೆದ ಲೂಯಿಸ್, ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.