ಮುಂಬೈ ಇಂಡಿಯನ್ಸ್ ತಂಡ ತನ್ನ ನಾಯಕ ರೋಹಿತ್ ಶರ್ಮಾರನ್ನೇ ಟ್ರೋಲ್ ಮಾಡಿದೆ. ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಕಾಲೆಳೆದಿದ್ದು ಯಾಕೆ? ಇಲ್ಲಿದೆ ವಿವರ.
ಮುಂಬೈ(ಫೆ.27): ಆಸ್ಟ್ರೇಲಿಯಾ ವಿರದ್ಧದ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಐಪಿಎಲ್ ತಯಾರಿ ಆರಂಭಿಸಲಿದ್ದಾರೆ. ಸದ್ಯ ಟೀಂ ಇಂಡಿಯಾ ಜೊತೆಗಿರುವ ರೋಹಿತ್ ಶರ್ಮಾರನ್ನ ಮುಂಬೈ ಇಂಡಿಯನ್ಸ್ ತಂಡ ಟ್ರೋಲ್ ಮಾಡಿದೆ.
ಇದನ್ನೂ ಓದಿ: ಕ್ರಿಕೆಟ್ ಅಭಿಮಾನಗಳಿಗೆ ಸಿಹಿ ಸುದ್ದಿ ನೀಡಿದ ಡಿವಿಲಿಯರ್ಸ್!
undefined
ನಮಗೆ ರೋಹಿತ್‌ಗಿಂತ ಉತ್ತಮ ಬ್ಯಾಟ್ಸ್‌ಮನ್ ಸಿಕ್ಕಿದ್ದಾನೆ. ಅಭಿನವ್ ಸಿಂಗ್ ಅನ್ನೋ 265 ರನ್ ಸಿಡಿಸೋ ಮೂಲಕ ರೋಹಿತ್ 264 ರನ್ ದಾಖಲೆ ಮುರಿದಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಿದೆ. ಮುಂಬೈ ಇಂಡಿಯನ್ಸ್ ನಾಯಕನನ್ನೇ ಟ್ರೋಲ್ ಮಾಡಿರುವ ಈ ಟ್ವೀಟ್ ಇದೀಗ ಭಾರಿ ಸದ್ದು ಮಾಡುತ್ತಿದೆ.
., we've got someone who has bettered your 264 😋
Rizvi Springfield's Abhinav Singh struck 265 in his side's win on Day 1 of the MI Inter-School Cricket Tournament 😲👏 pic.twitter.com/SUwVbi0dkO
ಇದನ್ನೂ ಓದಿ: ಐಪಿಎಲ್ 2019: ಮುಂಬೈ ಇಂಡಿಯನ್ಸ್‌ಗೆ ಹೊಸ ಜರ್ಸಿ!
ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಲು ಕಾರಣವೂ ಇದೆ. ಸ್ಕೂಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಿಜ್ವಿ ಸ್ಪ್ರಿಂಗ್‌ಫೀಲ್ಡ್ ತಂಡದ ಅಭಿನವ್ ಸಿಂಗ್ 265 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 264 ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ಸರದಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಅಭಿನವ್ ಸ್ಕೂಲ್ ಕ್ರಿಕೆಟ್‌ನಲ್ಲಿ 265 ರನ್ ಸಿಡಿಸಿ ರೋಹಿತ್ ದಾಖಲೆ ಮುರಿದಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಮಾಷೆಯಾಗಿ ರೋಹಿತ್ ಕಾಲೆಳೆದಿದೆ.