Emirates T20 League: ಟೂರ್ನಿಯಲ್ಲಿ ತಂಡ ಖರೀದಿಸಲು ಶಾರುಖ್, ಅಂಬಾನಿ ಆಸಕ್ತಿ..!

By Suvarna NewsFirst Published Nov 20, 2021, 12:37 PM IST
Highlights

* ಯುಎಇನಲ್ಲಿ ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್ ಆರಂಭ

* ಜನವರಿಯಲ್ಲಿ ಆರಂಭವಾಗುವ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಭಾಗಿ

* ತಂಡ ಖರೀದಿಸಲು ಐಪಿಎಲ್ ಫ್ರಾಂಚೈಸಿಗಳ ಒಲವು

ಮುಂಬೈ(ನ.20): ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) (Indian Premier League) ಮಾದರಿಯಲ್ಲಿ ಮುಂದಿನ ವರ್ಷ ಯುಎಇನಲ್ಲಿ ಆರಂಭಗೊಳ್ಳಲಿರುವ ಎಮಿರೇಟ್ಸ್‌ ಟಿ20 ಲೀಗ್‌ನಲ್ಲಿ ನಟ, ಕೆಕೆಆರ್‌ ಮಾಲಿಕ ಶಾರುಖ್‌ ಖಾನ್‌ (Shahrukh Khan) ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಮಾಲಿಕರು ತಂಡವನ್ನು ಖರೀದಿಸಲಿದ್ದಾರೆ ಎಂದು ವರದಿಯಾಗಿದೆ. 

ಜನವರಿಯಲ್ಲಿ ಆರಂಭವಾಗುವ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕರು, ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ನ ಸಿಡ್ನಿ ಸಿಕ್ಸ​ರ್ಸ್‌ (Sydney Sixers) ಮಾಲೀಕರು, ಡೆಲ್ಲಿ ಕ್ಯಾಪಿಟಲ್ಸ್‌ನ (Delhi Capitals) ಮಾಲೀಕರು, ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ನ ಮಾಲೀಕರು ತಂಡ ಖರೀದಿಸಲಿದ್ದಾರೆ ಎನ್ನಲಾಗಿದೆ.

ಎಮಿರೇಟ್ಸ್‌ ಟಿ20 ಲೀಗ್‌ (Emirates T20 League) ಟೂರ್ನಿ ಆರಂಭಿಸಲು 2019ರಿಂದಲೇ ಸಿದ್ದತೆಗಳು ಆರಂಭವಾಗಿದ್ದವು. ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಫ್ರಾಂಚೈಸಿ ಕೂಡಾ ಎಮಿರೇಟ್ಸ್‌ ಟಿ20 ಲೀಗ್‌ನಲ್ಲಿ ತಂಡವನ್ನು ಖರೀದಿಸಲು ಒಲವು ತೋರಿತ್ತು. ಆದರೆ ಆ ಬಳಿಕ ಇದರಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿತ್ತು. 

ಅಂಡರ್‌-19 ವಿಶ್ವಕಪ್‌ಗೆ ರಾಜ್ಯದ ಇಬ್ಬರು ಆಯ್ಕೆ?

ನವದೆಹಲಿ: ಅಂಡರ್‌-19 ವಿಶ್ವಕಪ್‌ಗೆ (Under 19 World Cup) ಭಾರತ ತಂಡವನ್ನು ಆಯ್ಕೆ ಮಾಡಲು ಭಾರತದ ಎರಡು ಅಂಡರ್‌-19 ತಂಡ ಹಾಗೂ ಬಾಂಗ್ಲಾದೇಶ ಕಿರಿಯರ ತಂಡದ ನಡುವೆ ತ್ರಿಕೋನ ಸರಣಿ ನಡೆಯಲಿದೆ. ಕರ್ನಾಟಕದ ಅನೀಶ್ವರ್‌ ಗೌಥಮ್‌ ಅಂಡರ್‌-19 ‘ಬಿ’ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು, ರಾಜ್ಯದ ಮತ್ತೋರ್ವ ಆಟಗಾರ ಧನುಷ್‌ ಗೌಡ ತಂಡದಲ್ಲಿದ್ದಾರೆ. ಇವರಿಬ್ಬರೂ ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಸರಣಿ ನವೆಂಬರ್ 28ರಿಂದ ಆರಂಭವಾಗಲಿದೆ. 

Under 19 World Cup: ವೇಳಾಪಟ್ಟಿ ಪ್ರಕಟ, ಭಾರತಕ್ಕೆ 'ಬಿ' ಗುಂಪಿನಲ್ಲಿ ಸ್ಥಾನ

2022ರ ಜನವರಿ 14ರಿಂದ ಫೆಬ್ರವರಿ 5ರ ವರೆಗೂ ಅಂಡರ್ 19 ವಿಶ್ವಕಪ್‌ ನಡೆಯಲಿದೆ. ವೆಸ್ಟ್ ಇಂಡೀಸ್ ಇದೇ ಮೊದಲ ಬಾರಿಗೆ ಕಿರಿಯರ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸಲಿದೆ.  ನಾಲ್ಕು ಬಾರಿಯ ಚಾಂಪಿಯನ್‌ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.  ‘ಬಿ’ ಗುಂಪಿನಲ್ಲಿ ಭಾರತ ಕ್ರಿಕೆಟ್ ತಂಡದ (Indian Cricket Team) ಜತೆಗೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಹಾಗೂ ಉಗಾಂಡ ಜೊತೆ ಸ್ಥಾನ ಪಡೆದಿದೆ. 

ಜನವರಿ 15ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಕಳೆದ ಆವೃತ್ತಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ಟಿ20: ಬಾಂಗ್ಲಾ ವಿರುದ್ಧ ಪಾಕ್‌ಗೆ 4 ವಿಕೆಟ್‌ ಜಯ

ಢಾಕಾ: ಬಾಂಗ್ಲಾದೇಶ (Bangladesh Cricket Team) ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವು (Pakistan Cricket Team) 4 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್ 1-0 ಮುನ್ನಡೆ ಸಾಧಿಸಿದೆ.

ಒಂದು ಹಂತದಲ್ಲಿ 24ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ, 5ನೇ ವಿಕೆಟ್‌ಗೆ ಫಖರ್‌ ಜಮಾನ್‌ ಹಾಗೂ ಖುಷ್ದಿಲ್‌ ಶಾ ಅವರ 56 ರನ್‌ ಜೊತೆಯಾಟದ ನೆರವಿನಿಂದ ಬಾಂಗ್ಲಾದೇಶ ನೀಡಿದ್ದ 128 ರನ್‌ ಗುರಿಯನ್ನು 4 ಎಸೆತ ಬಾಕಿ ಇರುವಂತೆ ಬೆನ್ನತ್ತಿ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರಲ್ಲಿ 7 ವಿಕೆಟ್‌ಗೆ 127 ರನ್‌ ಗಳಿಸಿತ್ತು. ಪಾಕಿಸ್ತಾನ 19.2 ಓವರಲ್ಲಿ 6 ವಿಕೆಟ್‌ಗೆ 132 ರನ್‌ ಗಳಿಸಿತು.

click me!