ಚೊಚ್ಚಲ ಬಾರಿಗೆ ಮುಲ್ತಾನ್ ಸುಲ್ತಾನ್‌ ಪಿಎಸ್‌ಎಲ್ ಚಾಂಪಿಯನ್‌

By Suvarna NewsFirst Published Jun 25, 2021, 12:09 PM IST
Highlights

* ಚೊಚ್ಚಲ ಬಾರಿಗೆ ಪಿಎಸ್‌ಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮುಲ್ತಾನ್ ಸುಲ್ತಾನ್ಸ್

* ಪೇಶಾವರ್ ಜಲ್ಮಿ ಎದುರು ಭರ್ಜರಿ ಗೆಲುವು ಸಾಧಿಸಿದ ಮುಲ್ತಾನ್‌ ತಂಡ

* ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸೋಹೆಬ್ ಮಕ್ಸೂದ್‌

ಅಬುಧಾಬಿ(ಜೂ.25): 6ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪೇಶಾವರ್ ಜಲ್ಮಿ ತಂಡವನ್ನು 47 ರನ್‌ಗಳ ಅಂತರದಲ್ಲಿ ಮಣಿಸಿದ ಮುಲ್ತಾನ್ ಸುಲ್ತಾನ್‌ ಚೊಚ್ಚಲ ಬಾರಿಗೆ ಪಿಎಸ್‌ಎಲ್ ಚಾಂಪಿಯನ್‌ ಅಗಿ ಹೊರಹೊಮ್ಮಿದೆ.

ಟಾಸ್ ಸೋತರು ಮೊದಲು ಬ್ಯಾಟ್‌ ಮಾಡಿದ ಮುಲ್ತಾನ್ ಸುಲ್ತಾನ್‌ ಸೋಹೆಬ್ ಮಕ್ಸೂದ್‌ ಅಜೇಯ 65 ರನ್‌ ಹಾಗೂ ರಿಲೇ ರೊಸ್ಸೋ ಸ್ಪೋಟಕ(21 ಎಸೆತ 50 ರನ್) ಬ್ಯಾಟಿಂಗ್‌ ನೆರವಿನಿಂದ 4 ವಿಕೆಟ್ ಕಳೆದುಕೊಂಡು 206 ರನ್‌ ಕಲೆಹಾಕಿತ್ತು. ಈ ಮೂಲಕ 2017ನೇ ಸಾಲಿನ ಪಿಎಸ್‌ಎಲ್‌ ಚಾಂಪಿಯನ್‌ ಪೇಶಾವರ್ ತಂಡಕ್ಕೆ ಕಠಿಣ ಗುರಿ ನೀಡಿತು.

Started from the bottom, now we here! turned their season around in Abu Dhabi and they are now the champions! | pic.twitter.com/M7Tm9WTKYw

— PakistanSuperLeague (@thePSLt20)

ಈ ಬೃಹತ್ ಗುರಿ ಬೆನ್ನತ್ತಿದ ಪೇಶಾವರ್ ಜಲ್ಮಿ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ ಶೋಯೆಬ್ ಮಲಿಕ್(47 ರನ್‌ 28 ಎಸೆತ)  ಅಬ್ಬರದ ಬ್ಯಾಟಿಂಗ್‌ ನಡೆಸಿದರಾದರೂ ಮತ್ತೊಂದು ತುದಿಯಲ್ಲಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಉತ್ತಮ ಸಾಥ್ ನೀಡಲಿಲ್ಲ. ಪರಿಣಾಮ ಪೇಶಾವರ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪಿಎಸ್‌ಎಲ್‌: ನಾಲ್ಕನೇ ಬಾರಿಗೆ ಫೈನಲ್‌ಗೇರಿದ ಪೇಶಾವರ್ ಜಲ್ಮಿ

ಮುಲ್ತಾನ್ ಸುಲ್ತಾನ್ಸ್ ತಂಡದ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ 3 ವಿಕೆಟ್, ಇಮ್ರಾನ್ ಖಾನ್, ಮುಜರಬಾನಿ ತಲಾ 2 ಹಾಗೂ ಸೋಹಿಲ್ ತನ್ವೀರ್ ಒಂದು ವಿಕೆಟ್ ಕಬಳಿಸುವ ಮೂಲಕ ಪೇಶಾವರ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಮುಲ್ತಾನ್ ಸುಲ್ತಾನ್ಸ್ ತಂಡವು ಚೊಚ್ಚಲ ಬಾರಿಗೆ ಪಿಎಸ್‌ಎಲ್ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಸೋಹೆಬ್ ಮಕ್ಸೂದ್‌ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಸೋಹೆಬ್ ಮಕ್ಸೂದ್‌ ಈ ಆವೃತ್ತಿಯಲ್ಲಿ 428 ರನ್ ಚಚ್ಚುವ ಮೂಲಕ ಗಮನ ಸೆಳೆದಿದ್ದರು.
 

click me!