MS ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ, 3 ವರ್ಷ ಕಳೆದಿದೆ. IPLನಲ್ಲಿ ಮಾತ್ರ ಧೋನಿ ಕಾಣಿಸಿಕೊಳ್ತಿದ್ದಾರೆ. ಆದ್ರೆ, IPL ಇಲ್ಲ ಅಂದ್ರು, ಸದಾ ಒಂದಿಲ್ಲೊಂದು ಕಾರಣಕ್ಕೆ ಮಹಿ ಸುದ್ದಿಯಲ್ಲಿರ್ತಾರೆ.
ರಾಂಚಿ(ಫೆ.08): ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇಂದು ಕ್ರಿಕೆಟ್ ದುನಿಯಾದ ಸೂಪರ್‌ಸ್ಟಾರ್ ಆಗಿ ರೂಪು ಗೊಳ್ಳೋಕೆ ಅವ್ರ ಪರಿಶ್ರಮವೊಂದೇ ಕಾರಣವಲ್ಲ. ಅದರ ಜೊತೆಗೆ ಶಕ್ತಿದೇವತೆಯ ಆಶೀರ್ವಾದ, ಕೃಪಾಕಟಾಕ್ಷವೂ ಪ್ರಮುಖ ಕಾರಣ. ಇದೇ ಕಾರಣಕ್ಕೆ IPL 2024ಕ್ಕೂ ಸೀಸನ್ ಮುನ್ನ ಧೋನಿ ತಮ್ಮ ಆರಾಧ್ಯದೇವಿಯ ದರ್ಶನ ಪಡೆದಿದ್ದಾರೆ. ಅಷ್ಟಕ್ಕೂ ಧೋನಿ ಆರಾಧಿಸೋ ದೇವತೆ ಯಾರು ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ....
ಮಾಸ್ಟರ್ ಮೈಂಡ್ ಸಕ್ಸಸ್ ಹಿಂದಿದ್ದಾಳೆ ಆ ಶಕ್ತಿ ದೇವತೆ..!
undefined
MS ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ, 3 ವರ್ಷ ಕಳೆದಿದೆ. IPLನಲ್ಲಿ ಮಾತ್ರ ಧೋನಿ ಕಾಣಿಸಿಕೊಳ್ತಿದ್ದಾರೆ. ಆದ್ರೆ, IPL ಇಲ್ಲ ಅಂದ್ರು, ಸದಾ ಒಂದಿಲ್ಲೊಂದು ಕಾರಣಕ್ಕೆ ಮಹಿ ಸುದ್ದಿಯಲ್ಲಿರ್ತಾರೆ. ಈಗ ಹೊಸ ವಿಷಯ ಏನಪ್ಪಾ ಅಂದ್ರೆ, IPL ಸೀಸನ್ 17ರ ವೇಳಾಪಟ್ಟಿಯೇ ಇನ್ನು ರೆಡಿಯಾಗಿಲ್ಲ. ಧೋನಿ ಮಾತ್ರ ಅದಾಗ್ಲೇ ಸಿದ್ಧತೆ ಆರಂಭಿಸಿದ್ದಾರೆ. ಅದಕ್ಕೂ ಮುನ್ನ ದೈವಿಶಕ್ತಿಯ ಮೊರೆ ಹೋಗಿದ್ದಾರೆ.
ಧೋನಿಯಿಂದ ಪಾಂಡ್ಯವರೆಗೆ: IPL ಕ್ಯಾಪ್ಟನ್‌ಗಳ ಸಂಬಳ ಎಷ್ಟು? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್
ಧೋನಿ ಕ್ರಿಕೆಟ್ ದುನಿಯಾದ ಸೂಪರ್‌ಸ್ಟಾರ್ ಆಗೋಕೆ, ಅವ್ರ ಪರಿಶ್ರಮ ಅಷ್ಟೇ ಕಾರಣವಲ್ಲ. ಅದರ ಜೊತೆಗೆ, ಶಕ್ತಿದೇವತೆಯ ಆಶೀರ್ವಾದ, ಪ್ರಮುಖ ಕಾರಣ. ಆ ದೇವಿ ಬೇರ್ಯಾರು ಅಲ್ಲ, ಧೋನಿಯ ತವರೂರು ರಾಂಚಿಯಲ್ಲಿ ನೆಲೆಸಿರೋ ದೇವೋರಿ ದುರ್ಗಾಮಾತೆ. ಯಾವುದೇ ಕಾರ್ಯಕ್ಕೂ ಮುನ್ನ ಈ ದುರ್ಗಾ ಮಾ ಆಶೀರ್ವಾದ ಪಡೆದುಕೊಳ್ಳದೇ, ಧೋನಿ ಒಂದು ಹೆಜ್ಜೆಯೂ ಮುಂದಿಡಲ್ಲ. ಇದೇ ಕಾರಣಕ್ಕೆ ಆಗಾಗ್ಗೆ ದೇವೋರಿ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ.
MS Dhoni making a fan happy with a smile. 👌
- Video of the daypic.twitter.com/Te7LCLJC7W
ಅದರಂತೆ ಮುಂಬರೋ ಐಪಿಎಲ್‌ಗಾಗಿ ಪ್ರಾಕ್ಟೀಸ್ ಆರಂಭಿಸೋ ಮುನ್ನ, ದೇವೋರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಧೋನಿ ಜೊತೆ ಸೆಲ್ಫಿ ತೆಗೆದು ಕೊಳ್ಳಲು ಮುಗಿಬಿದ್ದಿದ್ರು. ಧೋನಿ ತಾಳ್ಮೆ ಕಳೆದುಕೊಳ್ಳದೇ, ಪ್ರತಿಯೊಬ್ಬರ ಜೊತೆಗೂ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
ಕೀಪಿಂಗ್ ಚಾಣಕ್ಯ ಎಂಟ್ರಿಯಿಂದ ಹೆಚ್ಚಾಯ್ತು ಭಕ್ತಸಾಗರ..!
ಮಹಿಗೂ-ದೇವುರಿ ದುರ್ಗಾಕ್ಕೂ ಅವಿನಾಭಾವ ಸಂಬಂಧವಿದೆ. ಚಿಕ್ಕವನಿದ್ದಾಗಿನಿಂದಲೂ ಧೋನಿ ಈ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದಾರೆ. ಕೂಲ್ ಕ್ಯಾಪ್ಟನ್ ದೇಗುಲಕ್ಕೆ ಎಂಟ್ರಿ ಕೊಟ್ಟ ಬಳಿಕ ದುರ್ಗಾ ಮಾತೆಯ ಜನಪ್ರಿಯತೆ ದುಪ್ಪಾಟ್ಟಾಯ್ತು. ಅಷ್ಟೇ ಅಲ್ಲ, ದೇವಸ್ಥಾನಕ್ಕೆ ಆಗಮಿಸೋ ಭಕ್ತರ ಸಂಖ್ಯೆಯೂ ಹೆಚ್ಚಾಯ್ತು.
ICC Test Rankings: ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ, ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ ವೇಗಿ
ಕೂಲ್ ಕ್ಯಾಪ್ಟನ್ ಮತ್ತೊಂದು IPL ಆಡೋದು ಫಿಕ್ಸ್..!
ಧೋನಿಯ ಕ್ರೇಝ್ ಮತ್ತು ಫ್ಯಾನ್ ಫಾಲೋಯಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಳೆದ ಬಾರಿಯ IPL ಟೂರ್ನಿಯೇ ಇದಕ್ಕೆ ಸಾಕ್ಷಿ. CSK ಎಲ್ಲೇ ಆಡಿದ್ರೂ ತವರಿನ ತಂಡಕ್ಕಿಂತ ಹೆಚ್ಚು CSKಗೆ ಸಪೋರ್ಟ್ ಸಿಕ್ತಿತ್ತು. ಸ್ಟೇಡಿಯಂ ತುಂಬೆಲ್ಲಾ ಅಭಿಮಾನಿಗಳು ಧೋನಿ ಹೆಸರು ಜಪಿಸ್ತಿದ್ರು. ಧೋನಿ ಈಗಲೇ ರಿಟೈರ್ ಆಗ್ಬಾರ್ದು, ಇನ್ನೊಂದು IPL ಆಡ್ಬೇಕು ಅಂತ ಬೇಡಿಕೊಂಡಿದ್ರು. ಅದರಂತೆ ಅಭಿಮಾನಿಗಳ ಆಸೆಯನ್ನ ಪೂರೈಸಲು ಧೋನಿ ರೆಡಿಯಾಗಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಧೋನಿ ಭಾಗವಹಿಸಿದ್ರು. ಈ ವೇಳೆ ಕಾರ್ಯಕ್ರಮದ ನಿರೂಪಕ ಧೋನಿಯನ್ನ ರಿಟೈರ್ಡ್ ಕ್ರಿಕೆಟರ್ ಅಂತ ಹೇಳಿದ್ರು. ಅದಕ್ಕೆ ಧೋನಿ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮಾತ್ರ ನಿವೃತ್ತಿ ಯಾಗಿದ್ದೀನಿ ಅಂತ ಪ್ರತಿಕ್ರಿಯಿಸಿದ್ರು. ಧೋನಿಯ ಮಾತಿಗೆ ಅಲ್ಲಿದ್ದವರೆಲ್ಲಾ ಫುಲ್ ಖುಷ್ ಆಗಿದ್ರು. ಅದೇನೆ ಇರಲಿ ದುರ್ಗಾಮಾತೆಯ ಆಶೀರ್ವಾದಿಂದ ಈ ಬಾರಿಯ IPL ಧೋನಿ ಅಬ್ಬರಿಸಲಿ. ಫ್ಯಾನ್ಸ್‌ಗೆ ವಿಂಟೇಜ್ ಧೋನಿಯ ದರ್ಶನವಾಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್