'ಸಪೋರ್ಟ್ ಮಾಡೋರು ಕೆಲವರು, ಆದ್ರೆ....?' ಟೀಕಾಕಾರರಿಗೆ ಮಾರ್ಮಿಕವಾಗಿ ತಿವಿದು ಪೋಸ್ಟ್ ಹಾಕಿದ ಜಸ್ಪ್ರೀತ್ ಬುಮ್ರಾ..!

By Naveen Kodase  |  First Published Feb 8, 2024, 12:33 PM IST

ತಮ್ಮ ಅಭೂತಪೂರ್ವ ಪ್ರದರ್ಶನವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಮುಂದುವರಿಸಿರುವ ಭಾರತದ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಬುಮ್ರಾ 3 ಸ್ಥಾನ ಜಿಗಿತ ಸಾಧಿಸಿದರು. ಅವರು ಸದ್ಯ 811 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. 


ಮುಂಬೈ(ಫೆ.08): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಮೊದಲ ಬಾರಿಗೆ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಎದುರು ವೈಜಾಗ್ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬುಮ್ರಾ, ಇದೀಗ ಗೂಢಾರ್ಥ ಹೊಂದಿದ ಪೋಸ್ಟ್‌ನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿ ಟೀಕಾಕಾರರನ್ನು ಮಾರ್ಮಿಕವಾಗಿ ತಿವಿದಿದ್ದಾರೆ.

ಹೌದು, ತಮ್ಮ ಅಭೂತಪೂರ್ವ ಪ್ರದರ್ಶನವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಮುಂದುವರಿಸಿರುವ ಭಾರತದ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಬುಮ್ರಾ 3 ಸ್ಥಾನ ಜಿಗಿತ ಸಾಧಿಸಿದರು. ಅವರು ಸದ್ಯ 811 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. 

Latest Videos

undefined

ಕಳೆದ 11 ತಿಂಗಳುಗಳಿಂದ ಅಗ್ರಸ್ಥಾನದಲ್ಲಿದ್ದ ತಾರಾ ಸ್ಪಿನ್ನರ್ ಆರ್.ಅಶ್ವಿನ್, 2 ಸ್ಥಾನ ಕುಸಿದು 3ನೇ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 2ನೇ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 4ನೇ, ರವೀಂದ್ರ ಜಡೇಜಾ 2 ಸ್ಥಾನ ಕುಸಿದು ಜಂಟಿ 9ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಇನ್ನೂ 2 ಟೆಸ್ಟ್‌ಗೆ ಇಲ್ಲ ವಿರಾಟ್‌ ಕೊಹ್ಲಿ?

ಮೊದಲ ಬೌಲರ್: ಬುಮ್ರಾ ಎಲ್ಲಾ ಮಾದರಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ವಿಶ್ವದ ಮೊದಲ ಬೌಲರ್ ಎಂಬ ಖ್ಯಾತಿಗೊಳಗಾಗಿದ್ದಾರೆ. ಈ ಮೊದಲು ಟಿ20, ಏಕದಿನದಲ್ಲೂ ನಂ.1 ಸ್ಥಾನಿಯಾಗಿದ್ದರು. ಆದರೆ ಈಗ ಅವರು ಏಕದಿನದಲ್ಲಿ 6ನೇ, ಟಿ20ಯಲ್ಲಿ 99ನೇ ಸ್ಥಾನದಲ್ಲಿದ್ದಾರೆ

ಇನ್ನು ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಬುಮ್ರಾ ನಂ.1 ಸ್ಥಾನಕ್ಕೇರುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದುಬರಲಾರಂಭಿಸಿವೆ. ಈ ಕುರಿತಂತೆಯೇ ಎನ್ನುವಂತೆ ಬುಮ್ರಾ, ಖಾಲಿ ಸ್ಟೇಡಿಯಂನಲ್ಲಿ ಒಬ್ಬ ವ್ಯಕ್ತಿ ಕುಳಿತಿರುವ ಫೋಟೋ ಹಾಗೂ ಮತ್ತೊಂದು ಕಡೆ ಇಡೀ ಮೈದಾನವೇ ಪ್ರೇಕ್ಷಕರಿಂದ ತುಂಬಿ ತುಳುಕುವ ಫೋಟೋ ಜತೆ, ಸಪೋರ್ಟ್ ಮಾಡುವವರು ಕೆಲವರಾದರೇ, ಅಭಿನಂದಿಸುವವರು ಹಲವರು ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.

ಎಲ್ಲಾ ಮಾದರಿ ನಂ.1: ಬುಮ್ರಾ 4ನೇ ಕ್ರಿಕೆಟಿಗ

ಬುಮ್ರಾ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ನಂ.1 ಸ್ಥಾನ ಅಲಂಕರಿಸಿದ ಭಾರತದ 2ನೇ ಹಾಗೂ ವಿಶ್ವದ 4ನೇ ಕ್ರಿಕೆಟಿಗ. ಈ ಮೊದಲು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ಭಾರತದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲೂ ಅಗ್ರಸ್ಥಾನ ಪಡೆದಿದ್ದರು. ಇವರೆಲ್ಲರೂ ಬ್ಯಾಟಿಂಗ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ICC Test Rankings: ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ, ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ ವೇಗಿ

ಟೆಸ್ಟ್‌ನಲ್ಲಿ ಅಗ್ರಸ್ಥಾನ: ಭಾರತದ ಮೊದಲ ವೇಗಿ

ಬುಮ್ರಾ ಟೆಸ್ಟ್‌ನಲ್ಲಿ ನಂ.1 ಸ್ಥಾನ ಪಡೆದ ಭಾರತದ ಮೊದಲ ವೇಗಿ ಎನಿಸಿಕೊಂಡಿದ್ದಾರೆ. ಬುಮ್ರಾಗೂ ಮುನ್ನ ಭಾರತೀಯ ವೇಗಿಯ ಟೆಸ್ಟ್‌ನ ಶ್ರೇಷ್ಠ ದಾಖಲೆ 2ನೇ ಸ್ಥಾನ. 1979-80ರಲ್ಲಿ ಭಾರತದ ಮಾಜಿ ನಾಯಕ ಕಪಿಲ್ ದೇವ್ ಈ ಸಾಧನೆ ಮಾಡಿದ್ದರು. ಬುಮ್ರಾ ಟೆಸ್ಟ್ ನಂ.1 ಸ್ಥಾನಿಯಾದ ಭಾರತದ 4ನೇ ಬೌಲರ್. ಈ ಮೊದಲು ಆರ್.ಅಶ್ವಿನ್, ರವೀಂದ್ರ ಜಡೇಜಾ, ಬಿಶನ್ ಸಿಂಗ್ ಬೇಡಿ ಅಗ್ರಸ್ಥಾನ ಅಲಂಕರಿಸಿದ್ದರು.

click me!