CSK vs RCB: ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಅಚ್ಚರಿ ಬಿದ್ದ ಕ್ರಿಕೆಟ್‌ ಜಗತ್ತು!

ಚೆನ್ನೈ vs ಆರ್‌ಸಿಬಿ ಪಂದ್ಯದಲ್ಲಿ ಧೋನಿ ಮಿಂಚಿನ ಸ್ಟಂಪಿಂಗ್ ಮಾಡಿದ್ದಾರೆ. 43 ವರ್ಷ ವಯಸ್ಸಿನಲ್ಲೂ ಧೋನಿ ವಿಕೆಟ್ ಕೀಪಿಂಗ್ ಚುರುಕುತನಕ್ಕೆ ಕ್ರಿಕೆಟ್ ಜಗತ್ತು ಅಚ್ಚರಿ ವ್ಯಕ್ತಪಡಿಸಿದೆ.

MS Dhoni stumping Of Phil Salt in CSK vs RCB Match Ipl 2025 san

ಚೆನ್ನೈ (ಮಾ.28): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ಕಿಂಗ್ಸ್‌ ನಡುವೆ ಚಿದಂಬರಂ ಮೈದಾನದಲ್ಲಿ ಹೈವೋಲ್ಟೇಜ್‌ ಐಪಿಎಲ್‌ ಮುಖಾಮುಖಿ ನಡೆಯುತ್ತಿದೆ. ಚೆನ್ನೈ ಮ್ಯಾಚ್‌ನಲ್ಲಿ ಎಂದಿನಂತೆ ಧೋನಿ ಮೇಲೆ ಒಂದು ಕಣ್ಣಿದ್ದೇ ಇರುತ್ತದೆ. ಅವರ ಪ್ರತಿ ಹೆಜ್ಜೆಯನ್ನು ಕೂಡ ಫಾಲೋ ಮಾಡೋ ಅಭಿಮಾನಿಗಳಿದ್ದಾರೆ. ಎಂಎಸ್‌ ಧೋನಿ ವಿಕೆಟ್‌ ಹಿಂದೆ ಇದ್ದಾಗ, ಫೀಲ್ಡಿಂಗ್‌ ಮಾಡುವಾಗ ರವೀಂದ್ರ ಜಡೇಜಾ ಕೈಯಲ್ಲಿ ಚೆಂಡಿದ್ದಾಗ ಯಾವುದೇ ಸಾಹಸ ಮಾಡಬಾರದು ಎನ್ನುವ ಕ್ರಿಕೆಟ್‌ ಲೋಕದ ಪ್ರತೀತಿ. ಅದರಂತೆ ಎಂಎಸ್‌ ಧೋನಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತಮ್ಮ ಕ್ರಿಕೆಟ್‌ ಜಗತ್ತನ್ನು ಅಚ್ಚರಿಯಲ್ಲಿ ಮುಳುಗಿಸಿದ್ದಾರೆ.

ಹೇಳಿ ಕೇಳಿ ಎಂಎಸ್‌ ಧೋನಿಗೆ ಈಗ 43 ವರ್ಷ, ಇನ್ನೊಂದಷ್ಟು ತಿಂಗಳಿಗೆ ಅವರಿಗೆ 44 ವರ್ಷವಾಗುತ್ತದೆ. ಹಾಗಿದ್ದರೂ ವಿಕೆಟ್‌ ಹಿಂದೆ ಅವರ ಕ್ವಿಕ್‌ನೆಸ್‌ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆರ್‌ಸಿಬಿ ಪರವಾಗಿ ಆರಂಭಿಕ ಫಿಲ್‌ ಸಾಲ್ಟ್‌ ಸ್ಪೋಟಕ ಬ್ಯಾಟಿಂಗ್‌ ಮಾಡುತ್ತಿದ್ದರು. ಈ ವೇಳೆ 5ನೇ ಓವರ್‌ ಎಸೆದ ನೂರ್‌ ಅಹ್ಮದ್‌ ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿದರು. ಇದರಲ್ಲಿ ನೂರ್‌ ಅಹ್ಮದ್‌ ಬೌಲಿಂಗ್‌ಗಿಂತ ಹೆಚ್ಚಾಗಿ ಧೋನಿ ಮಾಡಿದ ಸ್ಟಂಪಿಂಗ್‌ ಅದ್ಭುತವಾಗಿತ್ತು. ಕಣ್ಣು ಮಿಟಿಕಿಸುವಷ್ಟರಲ್ಲಿ ತಮ್ಮ ಕೈಗೆ ಸಿಕ್ಕ ಚೆಂಡನ್ನು ವಿಕೆಟ್‌ಗೆ ಬಡಿದಿದ್ದರು. ಅದಲ್ಲದೆ, ನೂರ್‌ ಅಹ್ಮದ್‌ ಬೌಲಿಂಗ್‌ ಮಾಡುವ ವೇಳೆ ಧೋನಿಯ ಗ್ಲೌಸ್‌ ಹಾಗೂ ವಿಕೆಟ್‌ ನಡುವಿನ ಅಂತರ ಕೇವಲ 22 ಸೆಂಟಿಮೀಟರ್‌ ಅಷ್ಟೇ ಇತ್ತು. ಹಾಗೂ ಕೈಗೆ ಚೆಂಡು ಬಿದ್ದ ಕೇವಲ 0.16 ಸೆಕೆಂಡ್‌ನಲ್ಲಿ ಅವರು ವಿಕೆಟ್‌ಗೆ ಬಡಿದಿದ್ದಾರೆ.

Latest Videos

ಧೋನಿಯ ಸ್ಟಂಪಿಂಗ್‌ಅನ್ನು ನೋಡಿದ ಇಂಗ್ಲೆಂಡ್‌ ಮಾಜಿ ನಾಯಕ ಮೈಕೆಲ್‌ ವಾನ್‌, 'ಮಿಸ್ಟರ್‌ ಧೋನಿಯ ವಿಕೆಟ್‌ ಕೀಪಿಂಗ್‌ ರೆಡಿಕ್ಯುಲಸ್‌. ಇಷ್ಟು ಚುರುಕಾದ ಕೈಗಳನ್ನು ಹೊಂದಿರುವ ಮತ್ತೊಬ್ಬ ವಿಕೆಟ್‌ಕೀಪರ್‌ ನನಗೆ ನೆನಪಿಲ್ಲ' ಎಂದು ಬರೆದುಕೊಂಡಿದ್ದಾರೆ.

ಇನ್ನು ಮೈಕೆಲ್‌ ವಾನ್‌ ಅವರ ಟ್ವೀಟ್‌ಗೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ.'ಖಂಡಿತ! ಪ್ರತಿ ಬಾರಿಯೂ ವಿಕೆಟ್ ಕೀಪಿಂಗ್‌ನಲ್ಲಿ ಮಾಸ್ಟರ್‌ಕ್ಲಾಸ್ ನೋಡುವಂತಿದೆ. ವೇಗ, ನಿಖರತೆ, ಇದು ನಿಜಕ್ಕೂ ಸಾಟಿಯಿಲ್ಲ. ಧೋನಿಯ ರಿಫ್ಲೆಕ್ಷನ್ಶ್‌ಗಳು ನಿಜವಾಗಿಯೂ ಬೇರೆಯೇ ಆಗಿವೆ' ವಿಕೆಟ್‌ ಕೀಪಿಂಗ್‌ನಲ್ಲಿ ಧೋನಿಗೆ ಮತ್ತೊಬ್ಬ ಕಾಂಪಿಟೇಟರ್‌ ಇರುವಂತೆ ಕಾಣುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ. ಧೋನಿ ವಿಕೆಟ್‌ ಕೀಪಿಂಗ್‌ಗೆ ಸಂಗಕ್ಕರ ಸ್ವಲ್ಪ ಸಮೀಪ ಬರಬಹುದು. ಅವರು ಅದ್ಭುತ ಕೀಪರ್‌. ಆದರೆ, ಇಂಥ ವಯಸ್ಸಲ್ಲೂ ಧೋನಿ ಇಷ್ಟು ಪರ್ಫೆಕ್ಟ್‌ ಆಗಿ ಕೀಪಿಂಗ್‌ ಮಾಡಿದ್ದು ಅದ್ಭುತ ಎಂದು ಹೇಳಿದ್ದಾರೆ.

ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ಅಚ್ಚರಿಯ ಮಾತನಾಡಿದ ಸಿಎಸ್‌ಕೆ ಕ್ಯಾಪ್ಟನ್ ಗಾಯಕ್ವಾಡ್!

ಇನ್ನು ಮೊದಲು ಬ್ಯಾಟಿಂಗ್‌ ಮಾಡಿರುವ ಆರ್‌ಸಿಬಿ ಉತ್ತಮ ಆರಂಭ ಕಂಡಿದ್ದರೂ, ಮಧ್ಯಮ ಓವರ್‌ಗಳಲ್ಲಿ ಕೆಲ ಅಮೂಲ್ಯ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನೊಂದೆಡೆ ಇನ್ನಿಂಗ್ಸ್‌ನಲ್ಲಿ ಮೂರು ಜೀವದಾನಗಳನ್ನು ಪಡೆದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.

ಅಭಿಮಾನಿಗೆ ದುಡ್ಡು ಕೊಟ್ಟು ಕಾಲಿಗೆ ಬೀಳಿಸಿಕೊಂಡ್ರಾ ರಿಯಾನ್ ಪರಾಗ್? ಇಲ್ಲಿದೆ ಅಪ್‌ಡೇಟ್

Ladies & gentlemen, presenting the GEN GOLD who never gets OLD! ⚡🔥 pulls off yet another lightning-fast stumping and this time, it's who’s left stunned! 😮‍💨💪🏻

Watch LIVE action ➡ https://t.co/MOqwTBm0TB 👉 | LIVE NOW on Star Sports… pic.twitter.com/kK3B5jxhXT

— Star Sports (@StarSportsIndia)

 

vuukle one pixel image
click me!