ಐಪಿಎಲ್‌ನಲ್ಲಿಂದು ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿಗೆ ಕಾಲಿಟ್ಟಿದ್ದು, ಮತ್ತೊಂದು ಗೆಲುವಿಗಾಗಿ ಸೆಣಸಾಡಲಿವೆ. ಚೆಪಾಕ್ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆಯಿದೆ.
ಚೆನ್ನೈ: ಐಪಿಎಲ್‌ನ ಅತಿ ದೊಡ್ಡ ಹಾಗೂ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಶುಕ್ರವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದು, ಸತತ 2ನೇ ಗೆಲುವಿಗಾಗಿ ಪೈಪೋಟಿ ನಡೆಸಲಿವೆ.
ಉದ್ಘಾಟನಾ ಪಂದ್ಯದಲ್ಲಿಆರ್‌ಸಿಬಿ ತಂಡ ಹಾಲಿ ಚಾಂಪಿಯನ್ ಕೋಲ್ಕತಾ ವಿರುದ್ದ 7 ವಿಕೆಟ್ ಗೆಲುವು ಸಾಧಿಸಿದ್ದರೆ, ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಜಯಭೇರಿ ಬಾರಿಸಿತ್ತು. ಈ ಬಾರಿ ಎರಡೂ ತಂಡಗಳು ಬಲಿಷ್ಠವಾಗಿದ್ದು, ರೋಚಕ ಪೈಪೋಟಿ ಎದುರಾಗುವುದು ಖಚಿತ. ಅದರಲ್ಲೂ ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಸ್ಪಿನ್ನರ್‌ಗಳು ಹಾಗೂ ಆರ್‌ಸಿಬಿ ಬ್ಯಾಟರ್‌ಗಳ ನಡುವೆ ತೀವ್ರ ಸ್ಪರ್ಧೆ ಎದುರಾಗಬಹುದು.
ಇದನ್ನೂ ಓದಿ: ಶತಕ ಮಿಸ್ ಮಾಡಿಕೊಂಡ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಗುಡ್ ನ್ಯೂಸ್, ಕೊಹ್ಲಿ-ರೋಹಿತ್‌ಗೆ ಶಾಕ್?
ಆರ್‌ಸಿಬಿಯಲ್ಲಿ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಅದರಲ್ಲೂ ನಾಯಕ ರಜತ್ ಪಾಟೀದಾರ್ ಸ್ಪಿನ್ನರ್‌ಗಳ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. ಅವರ ಆಟ ತಂಡದ ಚಿತ್ರಣ ಬದಲಿಸಲಿದೆ. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ತಂಡದ ಆಧಾರಸ್ತಂಭವಾಗಿದ್ದು, ಚೆಪಾಕ್‌ನಲ್ಲಿ ಕೊಹ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ. ದೇವದತ್ ಪಡಿಕ್ಕಲ್ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಬೇಕಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್‌ರಿಂದಲೂ ತಂಡಕ್ಕೆ ಹೆಚ್ಚಿನ ಭರವಸೆಯಿದೆ.
ಬದಲಾವಣೆ ಸಾಧ್ಯತೆ: ಚೆಪಾಕ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಆರ್‌ಸಿಬಿ ಈ ಪಂದ್ಯದಲ್ಲಿ ಆಡುವ ಬಳಗವನ್ನು ಬದಲಾಯಿಸಬಹುದು. ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಜೊತೆ ಸ್ವಪ್ರಿಲ್ ಸಿಂಗ್‌ಗೆ ಅವಕಾಶ ಸಿಗಬಹುದು. ಇನ್ನು, ಚೆನ್ನೈ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದು, ಪರಿಸ್ಥಿತಿಗೆ ತಕ್ಕಂತೆ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ರಚಿನ್ ರವೀಂದ್ರ, ಋತುರಾಜ್ ತಂಡದ ಆಧಾರಸ್ತಂಭ. ಧೋನಿ ಬ್ಯಾಟ್‌ನಿಂದ ಕೆಲ ಸಿಕ್ಸಗಳನ್ನಾದರೂ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಕೊನೆಗೂ ಬಯಲಾಯ್ತು ಚಹಲ್-ಧನಶ್ರೀ ಡಿವೋರ್ಸ್ ಸೀಕ್ರೇಟ್; ಇದೇ ಕಾರಣಕ್ಕೆ ಕುಟುಂಬದಲ್ಲಿ ಮೂಡಿತ್ತು ಬಿರುಕು!
ಆರ್‌ಸಿಬಿ ಗೆದ್ದಿದ್ದು 2008ರಲ್ಲಿ!
ಆರ್‌ಸಿಬಿ ತಂಡ ಚೆನ್ನೈನಲ್ಲಿ ಕೊನೆ ಬಾರಿ ಗೆದ್ದಿದ್ದು 2008ರ ಚೊಚ್ಚಲ ಆವೃತ್ತಿಯಲ್ಲಿ ಬಳಿಕ ತಂಡ 8 ಬಾರಿ ಚೆನ್ನೈ ನಲ್ಲಿ ಸಿಎಸ್‌ಕೆ ವಿರುದ್ಧ
ಆಡಿದ್ದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಆದರೆ ಉಭಯ ತಂಡಗಳ ನಡುವಿನ ಕೊನೆ ಮುಖಾಮುಖಿಯಲ್ಲಿ ಆರ್‌ಸಿಬಿ ಗೆದ್ದಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಯನ್ನು ಆರ್‌ಸಿಬಿ ಸೋಲಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ತಂಡ ಶುಕ್ರವಾರ ಕಣಕ್ಕಿಳಿಯಲಿದೆ.
ಇದನ್ನೂ ಓದಿ: ಎಲ್ಲರನ್ನೂ ಬಿಟ್ಟು ಋತುರಾಜ್‌ರನ್ನೇ ಸಿಎಸ್‌ಕೆ ಕ್ಯಾಪ್ಟನ್ ಮಾಡಿದ್ದೇಕೆ? ಮೌನ ಮುರಿದ ಧೋನಿ!
ಕೊನೆ ಬಾರಿ ಚೆನ್ನೈನಲ್ಲಿ ಆಸಿಬಿ ಗೆದ್ದಾಗ!
1. ವಿರಾಟ್ ಕೊಹ್ಲಿ ಇನ್ನೂ ಭಾರತ ತಂಡದ ಪರ ಆಡಿರಲಿಲ್ಲ.
2. ಅನಿಲ್ ಕುಂಬ್ಳೆ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರು.
3. ವಾಟ್ಸಾಪ್ ಇನ್ನೂ ಚಾಲ್ತಿಗೆ ಬಂದಿರಲಿಲ್ಲ.
4. ಭಾರತದಲ್ಲಿ 2ಜಿ ನೆಟ್ವರ್ಕ್ ಬಳಸಲಾಗುತ್ತಿತ್ತು.
5. ಅನುಷ್ಕಾ ಶರ್ಮಾ ಬಾಲಿವುಡ್ ಪಾದಾರ್ಪಣೆ ಮಾಡಿರಲಿಲ್ಲ.
6. ಚಿನ್ನದ ಬೆಲೆ 10 ಗ್ರಾಂ.ಗೆ 212,500 ಇತ್ತು.
ಸ್ಪಿನ್ನರ್ಸ್ vs ಬ್ಯಾಟರ್ಸ್
ಸ್ಪಿನ್ನರ್ಸ್ & ಚೆನ್ನೈ ತಂಡದಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. .ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಬ್ಯಾಟರ್ಸ್ ನೂರ್ ಅಹ್ಮದ್ 12 ಓವರ್‌ಗಳು ತಂಡಕ್ಕೆ ನಿರ್ಣಾಯಕ. ಮುಂಬೈ ವಿರುದ್ಧ ಪಂದ್ಯದಲ್ಲಿ ಈ ಮೂವರು ಸ್ಪಿನ್ನರ್ಸ್ 11 ಓವರ್‌ಗಳಲ್ಲಿ 70 ರನ್‌ಗೆ 5 ವಿಕೆಟ್ ಪಡೆದಿದ್ದರು. ಹೀಗಾಗಿ ಆರ್‌ಸಿಬಿ ವಿರುದ್ಧವೂ ಕೈಚಳಕ ತೋರಿಸುವ ಸಾಧ್ಯತೆಯಿದೆ.
ಧೋನಿ-ಕೊಹ್ಲಿ ಆಟ ನೋಡಲು ಫ್ಯಾನ್ಸ್ ತವಕ
ಆರ್‌ಸಿಬಿಯ ವಿರಾಟ್ ಕೊಹ್ಲಿ ಹಾಗೂ ಚೆನ್ನೈನ ಎಂ.ಎಸ್. ಧೋನಿಗೆ ಕೋಟ್ಯಂತರ ಅಭಿಮಾನಿ ಗಳಿದ್ದು, ತಮ್ಮ ನೆಚ್ಚಿನ ಕ್ರಿಕೆಟಿಗರ ಆಟ ನೋಡಲು ಕಾತರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಪಂದ್ಯ ದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸಿ ದ್ದರು. ಆದರೆ ಧೋನಿಗೆ ಸರಿಯಾಗಿ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಚೆನ್ನೈನ ಕ್ರಿಕೆಟ್ ಅಭಿಮಾನಿಗಳು ಇಬ್ಬರೂ ದಿಗ್ಗಜರ ಬ್ಯಾಟಿಂಗ್ ನೋಡುವ ಇಚ್ಛೆಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ.
ಪಿಚ್ ರಿಪೋರ್ಟ್: ಚೆನ್ನೈನ ಚೆಪಾಕ್ ಕ್ರೀಡಾಂಗಣದ ಸ್ಪಿನ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸುವಂತಿಲ್ಲ. ಇಲ್ಲಿ ಸ್ಪಿನ್ ಬಲರ್‌ಗಳೇ ನಿರ್ಣಾಯಕ. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವ ತಂಡದ ಗೆಲುವು ಸುಲಭವಾಗಲಿದೆ.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್