ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ ಧೋನಿ, ದಿಗ್ಗಜನಂತೆ ಆಡಲು ಬಯಸಿದ್ದ ಮಾಜಿ ಕ್ಯಾಪ್ಟನ್!

Published : Oct 14, 2022, 08:31 PM IST
ನೆಚ್ಚಿನ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ ಧೋನಿ, ದಿಗ್ಗಜನಂತೆ ಆಡಲು ಬಯಸಿದ್ದ ಮಾಜಿ ಕ್ಯಾಪ್ಟನ್!

ಸಾರಾಂಶ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ವಿಶ್ವದ ಹಲವು ಕ್ರಿಕೆಟಿಗರು, ಯುವ ಸಮೂಹಕ್ಕೆ ರೋಲ್ ಮಾಡೆಲ್. ಕ್ರಿಕೆಟಿಗರು ಮಾತ್ರವಲ್ಲ ಸಿನಿಮಾ ನಟ ನಟಿಯರು, ಉದ್ಯಮ ಕ್ಷೇತ್ರದ ದಿಗ್ಗಜರಿಗೂ ಧೋನಿ ಮಾದರಿ. ಅಪಾರ ಅಭಿಮಾನಿ ಬಳಗ ಹೊಂದಿರುವ ಧೋನಿ ಯಾರಂತೆ ಆಡಲು ಬಯಸಿದ್ದರು ಗೊತ್ತಾ?   

ಹೊಸೂರು(ಅ.14):  ಟೀಂ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಗಳಿರುವ ದಿಗ್ಗಜ ಎಂ.ಎಸ್.ಧೋನಿಗೆ ಭಾರತ ಹಾಗೂ ವಿಶ್ವದ ಎಲ್ಲೇ ಹೋದರು ಅಭಿಮಾನಿಗಳಿದ್ದಾರೆ. ಧೋನಿಯನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡು ಅದೆಷ್ಟೋ ಮಂದಿ ವೃತ್ತಿಪರ ಕ್ರಿಕೆಟ್ ಆರಂಭಿಸಿದ್ದಾರೆ. ಧೋನಿ ರೀತಿ ಕ್ರಿಕೆಟಿಗನಾಗಬೇಕು ಎಂದು ಹಲವರು ಹಾತೊರೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಧೋನಿ ವಿಶ್ವಕ್ರಿಕೆಟ್‌ನಲ್ಲಿ ಪ್ರಭಾವ ಭೀರಿದ್ದಾರೆ. ಧೋನಿ ಹಲವು ಕ್ರಿಕೆಟಿಗರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.  ಇದೀಗ ಧೋನಿ ತಮ್ಮ ನೆಚ್ಚಿನ ಕ್ರಿಕೆಟಿಗನ ಕುರಿತು ಮಾತನಾಡಿದ್ದಾರೆ. ಎಂ.ಎಸ್.ಧೋನಿಯ ನೆಚ್ಚಿನ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಈಗಲೂ ಧೋನಿಗೆ ಸಚಿನ್ ತೆಂಡುಲ್ಕರ್ ಅವರೆ ನೆಚ್ಚಿನ ಕ್ರಿಕೆಟಿಗ. ಸಚಿನ್ ಬ್ಯಾಟಿಂಗ್‌ನ್ನು ಟಿವಿಯಲ್ಲಿ ನೋಡಿ ಕ್ರಿಕೆಟ್ ಆರಂಭಿಸಿದ ಧೋನಿ, ಬಳಿಕ ಸಚಿನ್ ಜೊತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಧೋನಿ ನಾಯಕತ್ವದಡಿ ಸಚಿನ್ ತೆಂಡುಲ್ಕರ್ ಆಡಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗನ ಕುರಿತು ಮಾತನಾಡಿರುವ ಧೋನಿ, ಅವರಂತೆ ಆಡಲು ಬಯಸಿದ್ದೆ ಎಂದಿದ್ದಾರೆ.

ಹೊಸೂರಿನಲ್ಲಿ ಎಂ.ಎಸ್.ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಜಂಟಿಯಾಗಿ ಧೋನಿ ಅಕಾಡೆಮಿ ಸ್ಕೂಲ್ ಆರಂಭಿಸಿದ್ದಾರೆ. ಈ ಕಾರ್ಯಕ್ರಮ ಆಗಮಿಸಿದ ಧೋನಿ ತಮ್ಮ ಕುರಿತು ಹಲವು ಮಾಹಿತಿಗಳನ್ನು ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ. ನಾನು ಸಚಿನ್ ತೆಂಡುಲ್ಕರ್ ಅಭಿಮಾನಿ. ಸಚಿನ್ ಆಟವನ್ನು ಟಿವಿಯಲ್ಲಿ ನೋಡುತ್ತಿದ್ದೆ. ಸಚಿನ್ ರೀತಿ ಬ್ಯಾಟಿಂಗ್ ಮಾಡಬೇಕು. ಸಚಿನ್ ರೀತಿ ರನ್ ಬಾರಿಸಬೇಕು. ಎದುರಾಳಿಗಳ ವಿರುದ್ಧ ಸಚಿನ್ ರೀತಿ ಘರ್ಜಿಸಬೇಕು ಎಂದು ಬಾಲ್ಯದಲ್ಲೇ ನಿರ್ಧರಿಸಿದ್ದೆ. ಸಚಿನ್ ಆಟ ನೋಡಿ ನಾನು ಕ್ರಿಕೆಟ್ ಆರಂಭಿಸಿದೆ. ನನ್ನಂತೆ ಹಲವರಿಗೆ ಸಚಿನ್ ಸ್ಪೂರ್ತಿಯಾಗಿದ್ದಾರೆ ಎಂದು ಧೋನಿ ಹೇಳಿದ್ದಾರೆ.

1000 ಶಿಕ್ಷಕರು, ಲಕ್ಷ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿದ ಎಂ ಎಸ್ ಧೋನಿ

ಸಚಿನ್ ತೆಂಡುಲ್ಕರ್ ಎದುರಾಳಿಗಳನ್ನು ಎದುರಿಸುತ್ತಿದ್ದ ರೀತಿ, ಟೀಂ ಇಂಡಿಯಾವನ್ನು ಗೆಲ್ಲಿಸುತ್ತಿದ್ದ ರೀತಿ ಅತೀವ ಇಷ್ಟವಾಗುತ್ತಿತ್ತು. ಹೀಗಾಗಿ ಸಚಿನ್ ರೀತಿ ಬ್ಯಾಟಿಂಗ್ ಮಾಡಬೇಕು. ನಾನೂ ಕೂಡ ಟೀಂ ಇಂಡಿಯಾಗೆ ಆಡಬೇಕು. ಪಂದ್ಯವನ್ನು ಗೆಲ್ಲಿಸಿಕೊಡಬೇಕು ಅಂದುಕೊಂಡಿದ್ದೆ. ಸಚಿನ್ ಜೊತೆಗೆ ಆಡುವ ಸೌಭಾಗ್ಯ ಒಲಿದು ಬಂದಿರುವುದು ನನ್ನ ಪಾಲಿಗೆ ಅತೀ ಹೆಚ್ಚು ಖುಷಿ ನೀಡಿದ ವಿಚಾರ ಎಂದು ಧೋನಿ ಹೇಳಿದ್ದಾರೆ.

ಸಿನಿಮಾ ನಿರ್ಮಾಣಕ್ಕಿಳಿದ ಧೋನಿ; ತಮಿಳು, ತೆಲುಗು ಮಲಯಾಳಂ ಚಿತ್ರ ಮಾಡುವುದಾಗಿ ಘೋಷಣೆ

ಎಂ.ಎಸ್‌.ಧೋನಿ ಸ್ಕೂಲಲ್ಲಿ ತರಬೇತಿ
ಮೈಕ್ರೋಸಾಫ್ಟ್ ತರಬೇತಿ ಪಾಲುದಾರ ಟೆಕ್‌ ಅವಂತ್‌ ಗಾರ್ಡೆ ಸಹಯೋಗದೊಂದಿಗೆ ಸರ್ಕಾರಿ, ಖಾಸಗಿ ಶಾಲೆಗಳ ಸಾವಿರ ಶಿಕ್ಷಕರು ಮತ್ತು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್‌್ಟಎಜುಕೇಷನಲ್‌ ಟೂಲ್‌ಗಳ ಕುರಿತು ತರಬೇತಿ ನೀಡುವ ಕಾರ್ಯಕ್ರಮಕ್ಕೆ ಹೊಸೂರು ರಸ್ತೆಯ ಕೂಡ್ಲು ಗೇಟ್‌ನ ಎಂ.ಎಸ್‌.ಧೋನಿ ಗ್ಲೋಬಲ್‌ ಸ್ಕೂಲ್‌ನಲ್ಲಿ ಚಾಲನೆ ನೀಡಲಾಗಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್‌ ಶಿಕ್ಷಣವನ್ನು ನೀಡುವ ಗುರಿ ಹೊಂದಿರುವ ಈ ಕಾರ್ಯಕ್ರಮ ಉದ್ಘಾಟಿಸಿ, ಶಾಲೆಯ ಮೂಲ ಸೌಕರ್ಯ, ಕಟ್ಟಡದ ವಿನ್ಯಾಸ, ಸುರಕ್ಷಿತ ವೈಜ್ಞಾನಿಕ ವಿನ್ಯಾಸದ ಜರ್ಮನ್‌ ಪೀಠೋಪಕರಣ, ರೊಬೊಟಿಕ್ಸ್‌ ಲ್ಯಾಬ್‌, ಆಟದ ಮೈದಾನ ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿ, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!