ಧರ್ಮಶಾಲಾದಲ್ಲಿ ರಿಂಕು ಸಿಂಗ್ ಕಾಣಿಸಿಕೊಂಡಿದ್ದೇಕೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

By Naveen Kodase  |  First Published Mar 6, 2024, 2:13 PM IST

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಟೀಂ ಇಂಡಿಯಾ ರೆಡಿಯಾಗ್ತಿದೆ. ಈಗಾಗ್ಲೆ ರೋಹಿತ್ ಪಡೆ ಧರ್ಮಶಾಲಾ ತಲುಪಿದೆ. ಆದ್ರೆ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ರಿಂಕೂ ಸಿಂಗ್, ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ.


ಬೆಂಗಳೂರು(ಮಾ.06) ಟಿ20 ವಿಶ್ವಕಪ್ ಟೂರ್ನಿಗೆ  ಇನ್ನು ಮೂರು ತಿಂಗಳು ಬಾಕಿಯಿದೆ. ಇದಕ್ಕಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರ ಮಧ್ಯೆ ಭಾರಿ ಪೈಪೋಟಿ ನಡೀತಿದೆ. ಆದ್ರೆ, ಈ ಆಟಗಾರನಿಗೆ ಮಾತ್ರ ಸ್ಥಾನ ಫಿಕ್ಸ್ ಆಗಿದೆ. ಯಾರು ಆ ಆಟಗಾರ..? ಏನ್ ಕಥೆ ಅಂತ ಡಿಟೇಲ್ ಆಗಿ ಹೇಳ್ತೀವಿ, ಈ ಸ್ಟೋರಿ ನೋಡಿ...! 

ರಿಂಕೂಗೆ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಫಿಕ್ಸ್..!

Latest Videos

undefined

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಟೀಂ ಇಂಡಿಯಾ ರೆಡಿಯಾಗ್ತಿದೆ. ಈಗಾಗ್ಲೆ ರೋಹಿತ್ ಪಡೆ ಧರ್ಮಶಾಲಾ ತಲುಪಿದೆ. ಆದ್ರೆ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ರಿಂಕೂ ಸಿಂಗ್, ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಈಗ ಹಾಟ್ ಟಾಪಿಕ್ ಆಗಿದೆ. ತಂಡದಲ್ಲೇ ಇಲ್ಲದ ರಿಂಕೂಗೆ ಧರ್ಮಶಾಲಾದಲ್ಲಿ ಏನು ಕೆಲಸ..? ಅನ್ನೋ ಪ್ರಶ್ನೆ ಮೂಡಿದೆ. ಆದ್ರೆ, ರಿಂಕೂ ಧರ್ಮಶಾಲದಲ್ಲಿ ಕಾಣಿಸಿಕೊಳ್ಳೋದಕ್ಕೆ ಒಂದು ಕಾರಣವಿದೆ. ಅದೇ, T20 ವಿಶ್ವಕಪ್...!

IPL 2024: ಈ ಬಾರಿ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಈ ಕ್ರಿಕೆಟ್ ಸ್ಟಾರ್ಸ್‌..!

T20 ವಿಶ್ವಕಪ್‌ಗೆ ಇನ್ನು ಮೂರು ತಿಂಗಳಿದೆ. ಈಗ ಅದಕ್ಕೂ- ರಿಂಕೂ ಧರ್ಮಶಾಲದಲ್ಲಿ ಟೆಸ್ಟ್ ತಂಡದ ಜೊತೆ ಇರೋದಕ್ಕೂ ಏನ್ ಸಂಬಂಧ ಅಂದ್ರೆ, BCCI ಧರ್ಮಶಾಲದಲ್ಲಿ T20 ವಿಶ್ವಕಪ್ ಆಡೋ ಸಂಭಾವ್ಯ ಆಟಗಾರರ ಪೋಟೋ ಶೂಟ್ ನಡೆಸಿತ್ತು. ರಿಂಕೂ ಕೂಡ ಈ ಪೋಟೋಶೂಟ್ನ ಭಾಗವಾಗಿದ್ರು. BCCIನ ಸೂಚನೆ ಮೇರೆಗೆ ಧರ್ಮಶಾಲಾಕ್ಕೆ ತೆರಳಿದ್ರು. ಇದ್ರಿಂದ  ಟಿ20 ವಿಶ್ವಕಪ್ನಲ್ಲಿ ರಿಂಕೂಗೆ ಸ್ಥಾನ ಫಿಕ್ಸ್ ಅನ್ನೋ ಮಾತುಗಳು ಕೇಳಿಬರ್ತಿವೆ. 

ಟಿ20 ವಿಶ್ವಕಪ್ ಸಮರದದಲ್ಲಿ ಫಿನಿಶರ್ ರೋಲ್..! 

ಕೆಲ ವರ್ಷಗಳಿಂದ ಟೀಂ ಇಂಡಿಯಾಗೆ ಬ್ಯಾಟಿಂಗ್ನಲ್ಲಿ ಪರ್ಫೆಕ್ಟ್ ಫಿನಿಶರ್ ಸಮಸ್ಯೆ ಕಾಡ್ತಿತ್ತು. T20ಯಲ್ಲಿ ಈ ಹಿಂದೆ ಹಾರ್ದಿಕ್ ಪಾಂಡ್ಯ ಫಿನಿಶರ್ ರೋಲ್ ನಿಭಾಯಿಸ್ತಿದ್ರು. ಆದ್ರೆ, ಹಾರ್ದಿಕ್ ಪದೇ ಪದೇ ಇಂಜುರಿ ಗೊಳಗಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಅಲ್ಲದೇ, ತಂಡದಲ್ಲಿದ್ರೂ ಹೆಚ್ಚಾಗಿ ಟಾಪ್ ಆರ್ಡರ್ನಲ್ಲಿ ಪಾಂಡ್ಯ ಬ್ಯಾಟ್ ಬೀಸ್ತಿದ್ದಾರೆ. ಇದರಿಂದ ಡೆತ್ ಓವರ್ಗಳಲ್ಲಿ ಪವರ್ಫುಲ್ ಹಿಟ್ಟಿಂಗ್ ಮೂಲಕ ಅಬ್ಬರಿಸೋ ಫಿನಿಶರ್ ಕೊರತೆ ತಂಡಕ್ಕೆ ಕಾಡ್ತಿತ್ತು. ಆದ್ರೆ, ಆ ಕೊರತೆಯನ್ನ ನೀಗಿಸೋ ಸಾಮರ್ಥ್ಯ ರಿಂಕೂಗಿದೆ. ಅದನ್ನ ರಿಂಕೂ ಈಗಾಗಲೇ ಪ್ರೂವ್ ಮಾಡಿದ್ದಾರೆ. 

IPL 2024: ಈ ಬಾರಿ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಈ ಕ್ರಿಕೆಟ್ ಸ್ಟಾರ್ಸ್‌..!

ಏಕದಿನ ವಿಶ್ವಕಪ್ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ರಿಂಕೂ ಡೆತ್ ಓವರ್ಗಳಲ್ಲಿ ಅಬ್ಬರಿಸಿದ್ರು. ಮೊದಲ ಪಂದ್ಯದಲ್ಲೇ   ತಂಡದ ಗೆಲುವಿಗೆ  ಕೊನೆಯ ಓವರ್ನಲ್ಲಿ 6 ಬಾಲ್ಗಳಲ್ಲಿ 7 ರನ್ ಬೇಕಾಗಿತ್ತು. ಕೈಯಲ್ಲಿನ್ನು 5 ವಿಕೆಟ್ ಇದ್ವು. ಆದ್ರೆ,  ಪಟಪಟನೇ ಮೂರು ವಿಕೆಟ್‌ಗಳು ಉದುರಿದ್ವು. ಇದ್ರಿಂದ ಕೊನೆಯ ಬಾಲ್ನಲ್ಲಿ  1 ರನ್ ಬೇಕಾಯ್ತು. ಈ ವೇಳೆ  ರಿಂಕೂ ಅದ್ಭುತ ಸಿಕ್ಸ್ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ರು. ತಾವೊಬ್ಬ ಬೆಸ್ಟ್ ಫಿನಿಶರ್ ಅನ್ನೋದ್ನನ  ಪ್ರೂವ್ ಮಾಡಿದ್ರು. ದಕ್ಷಿಣ ಆಫ್ರಿಕಾ ಮತ್ತು ಅಪ್ಘಾನಿಸ್ತಾನ ವಿರುದ್ಧ T20 ಸರಣಿಯಲ್ಲೂ ರಿಂಕೂ ಅಬ್ಬರಿಸಿದ್ರು. 

ಐಪಿಎಲ್‌ನಲ್ಲೇ ತಮ್ಮ ತಾಕತ್ತು ನಿರೂಪಿಸಿದ್ದ ರಿಂಕು..!

ಯೆಸ್, ರಿಂಕು ಸಿಂಗ್ IPLನಲ್ಲೇ ತಮ್ಮ ತಾಕತ್ನನ ಪ್ರದರ್ಶಿಸಿದ್ರು. KKR ಪರ ಆಡೋ ರಿಂಕು, ಡೆತ್ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನಿಂದ ಧೂಳೆಬ್ಬಿಸಿದ್ರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಅ್ಬಬರಿಸಿದ್ರು. 

ಈ ಒಂದು ಇನ್ನಿಂಗ್ಸ್ ಸಾಕು ರಿಂಕು ಎಂತಹ ಗ್ರೇಟ್ ಬ್ಯಾಟ್ಸ್ಮನ್ ಅಂತ ಹೇಳೋದಕ್ಕೆ...! ಇದೊಂದೆ ಅಲ್ಲ, ಹಲವು ಪಂದ್ಯಗಳಲ್ಲಿ ರಿಂಕು ತಂಡದ ಗೆಲುವಿಗಾಗಿ ಒಂಟಿಯಾಗಿ ಹೋರಾಡಿದ್ರು. ಈ ಎಲ್ಲಾ ಕಾರಣಗಳಿಂದಾಗಿ ರಿಂಕೂಗೆ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಮಿಸ್ಸೇ ಇಲ್ಲ. ಇದೇ ಕಾರಣಕ್ಕೆ ರಿಂಕೂ ಟಿ20 ವಿಶ್ವಕಪ್ ಪೋಟೋಶೂಟ್ನಲ್ಲಿ ಭಾಗಿಯಾಗಿದ್ದಾರೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!