ಜಹೀರ್ ಖಾನ್ ಹೆಡ್‌ ಕೋಚ್ ಆಗುತ್ತಿದ್ದಂತೆಯೇ ತಲೆಕೆಳಗಾದ ಲೆಕ್ಕಾಚಾರ..! ಧೋನಿ ಭವಿಷ್ಯದ ಬಗ್ಗೆ ಮೌನ ಮುರಿದ ಸಿಎಸ್‌ಕೆ ಫ್ರಾಂಚೈಸಿ!

Published : Sep 22, 2026, 11:12 AM IST
Zaheer Khan CSK

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಕೋಚ್ ಆಗಿ ಜಹೀರ್ ಖಾನ್ ನೇಮಕಗೊಂಡಿದ್ದಾರೆ. ಈ ನೇಮಕದ ಹಿಂದೆ ಎಂ.ಎಸ್. ಧೋನಿ ಅವರ ಪ್ರಮುಖ ಪಾತ್ರವಿದ್ದು, ಅವರು ಮುಂಬರುವ ಸೀಸನ್‌ನಲ್ಲಿ ಆಟಗಾರನಾಗಿಯೇ ಮುಂದುವರಿಯಲಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ನಂತರ ಧೋನಿ ಕೋಚ್ ಆಗಲಿದ್ದಾರೆ ಎಂಬ ಊಹಾಪೋಹಗಳಿಗೆ ಇದು ತೆರೆ ಎಳೆದಿದೆ.

ಚೆನ್ನೈ: ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹೊಸ ಕೋಚ್ ಆಗಿ ನೇಮಿಸಿದೆ. ಇದರ ಬೆನ್ನಲ್ಲೇ ಮಾಜಿ ನಾಯಕ ಎಂ.ಎಸ್. ಧೋನಿ ಪಾತ್ರದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಮುಂಬರುವ ಸೀಸನ್‌ನಲ್ಲಿ ಧೋನಿ ಆಟಗಾರನಾಗಿಯೇ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಖಚಿತಪಡಿಸಿದೆ.

18 ವರ್ಷಗಳ ಸುದೀರ್ಘ ಒಡನಾಟದ ಬಳಿಕ ಸ್ಟೀಫನ್ ಫ್ಲೆಮಿಂಗ್ ಕೋಚ್ ಹುದ್ದೆ ತೊರೆದಿದ್ದರು. ಆ ಜಾಗಕ್ಕೆ ಧೋನಿ ಮುಖ್ಯ ಕೋಚ್ ಅಥವಾ ಮೆಂಟರ್ ಆಗಿ ಬರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಧೋನಿ ಆಟಗಾರನಾಗಿಯೇ ಲಭ್ಯವಿದ್ದು, ಬೇರೆ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ಸ್ಪಷ್ಟಪಡಿಸಿದ್ದಾರೆ.

ಜಹೀರ್ ಎಂಟ್ರಿ ಹಿಂದೆಯೂ ಇದೆ 'ತಲಾ' ಕೈವಾಡ

ಜಹೀರ್ ಖಾನ್ ಅವರನ್ನು ಕೋಚ್ ಹುದ್ದೆಗೆ ತರುವಲ್ಲಿ ಧೋನಿ ಪಾತ್ರ ಬಹಳ ದೊಡ್ಡದಿದೆ. ಫ್ಲೆಮಿಂಗ್‌ಗೆ ಬದಲಿ ವ್ಯಕ್ತಿಯನ್ನು ಹುಡುಕುವ ಜವಾಬ್ದಾರಿಯನ್ನು ಮ್ಯಾನೇಜ್‌ಮೆಂಟ್ ಧೋನಿಗೆ ನೀಡಿತ್ತು. ಆಗ ಜಹೀರ್ ಖಾನ್ ಹೆಸರನ್ನು ಸೂಚಿಸಿದ್ದೇ ಧೋನಿ. ಅಂತಿಮವಾಗಿ ಧೋನಿ, ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಮತ್ತು ಮಾಲೀಕರಾದ ರೂಪಾ ಗುರುನಾಥ್ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಜಹೀರ್ ಖಾನ್ 2017ರಲ್ಲಿ ಐಪಿಎಲ್‌ಗೆ ವಿದಾಯ ಘೋಷಿಸಿದ್ದರು. ಇದಾಗಿ ಎರಡು ವರ್ಷಗಳ ಬಳಿಕ 2019ರಲ್ಲಿ ಜಹೀರ್ ಖಾನ್, ಮುಂಬೈ ಇಂಡಿಯನ್ಸ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಪರೇಷನ್ ಆಗಿ ನೇಮಕವಾಗಿದ್ದರು. ಇನ್ನು ಇದಾದ ಬಳಿಕ ಇತ್ತೀಚೆಗೆ 2025ರ ಐಪಿಎಲ್ ಟೂರ್ನಿಯಲ್ಲಿ ಜಹೀರ್ ಖಾನ್ ಲಖನೌ ಸೂಪರ್ ಜೈಂಟ್ಸ್‌ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‌ನಲ್ಲಿ ಆಟಗಾರನಾಗಿ ಹಾಗೂ ಸಹಾಯಕ ಸಿಬ್ಬಂದಿಯಾಗಿ ಜಹೀರ್ ಖಾನ್ ಅವರ ಅನುಭವವನ್ನು ಪರಿಗಣಿಸಿ ಧೋನಿ, ಸಿಎಸ್‌ಕೆ ಫ್ರಾಂಚೈಸಿಗೆ ಮಾಜಿ ಎಡಗೈ ವೇಗಿಯನ್ನು ಹೆಡ್ ಕೋಚ್ ಆಗಿ ನೇಮಿಸಲು ಸಲಹೆ ನೀಡಿದ್ದರಂತೆ.

ಬದಲಾಗುತ್ತಾ ಸಿಎಸ್‌ಕೆ ಹಣೆಬರಹ?

ಗಾಯದ ಸಮಸ್ಯೆಯಿಂದಾಗಿ ಕಳೆದ ಸೀಸನ್‌ನ ಬಹುಪಾಲು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ 45 ವರ್ಷದ ಧೋನಿ, ಮುಂಬರುವ ಸೀಸನ್‌ನಲ್ಲಿ ಹೇಗೆ ಆಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಜಹೀರ್ ಖಾನ್ ತಂತ್ರಗಾರಿಕೆ ಹಾಗೂ ಧೋನಿ ಉಪಸ್ಥಿತಿ ಜೊತೆಯಾದರೆ, ಸಿಎಸ್‌ಕೆ ತನ್ನ ಹಳೆಯ ವೈಭವಕ್ಕೆ ಮರಳಲಿದೆ ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಸ್ಮೃತಿ ಮಂಧನಾ ಪಿರಿಯಡ್ಸ್ ದಿನಾಂಕದ ಮೇಲೆ ಬೆಟ್ಟಿಂಗ್ ದಂಧೆ!': ಯುವಕನ ವಿಲಕ್ಷಣ ಐಡಿಯಾಗೆ ನೆಟ್ಟಿಗರ ಆಕ್ರೋಶ!
ದೇಶದ ಅಗ್ರಕಂಪನಿಗಳಿಗೆ ಬಿಸಿಸಿಐ ಅಪಶಕುನ...! ಕ್ರಿಕೆಟ್‌ಗೆ ಸ್ಪಾನ್ಸರ್ ಆದವರೆಲ್ಲಾ ಮಟಾಷ್